\n\n\nA MAAAANynAtwrwx NAMM NለeAAAAA/ ኢ ጓላ \AN/ \ ** ) ಭ್ರಾಂತಿವಿಲಾಸ' ದೈನು, ಲಾವಣ್ಯಮಯಿಯು ಆ ಭಯೋತ್ಪಾತಗಳನ್ನು ಕಂಡು ತನ್ನೆರಡುಕ್ಕೆ ಗಳಿಂದಲೂ ತಲೆಯನ್ನು ಹೊಡೆದುಕೊಳ್ಳುತ್ತಾ ರೋದನವಂ ಮಾಡುತ್ತಿರಲು ನಾಲ್ಕು ಮಂದಿ ಮಕ್ಕಳ ತಾಯಿಯ ಅವಸ್ಥೆಯನ್ನು ನೋಡಿ, ಭಯಪಟ್ಟು ರೋದನ ಚೀತ್ಕಾರಗಳನ್ನು ಮಾಡತೊಡಗಿದುವು. ಅನಂತರ ಲಾವಣ್ಯಮ ಯಿಯು ನನ್ನನ್ನು ಕುರಿತು, “ ನಾಥ ! ನನ್ನ ಪ್ರಾಣಹೋದರೆ ಸ್ವಲ್ಪವೂ ವ್ಯಥೆ ಯಿಲ್ಲ. ನಮಗೆಸಂತಾನಭೂತರಾದೀ ಮಕ್ಕಳನ್ನು ರಕ್ಷಿಸುವ ಯೋಚನೆಯಂ ಮಾಡು ' ಎಂದು ಸಂಕಟದಿಂದ ಬಾರಿ ಬಾರಿಗೂ ಹೇಳಿದಳು. ಬಳಿಕ ಸ್ವಲ್ಪ ಹೊತ್ತಿನಲ್ಲಿ ಹಡಗು ಸಮುದ್ರದಲ್ಲಿ ಮುಣುಗುವಂತಾಗಿ ನಾವಿಕರಿಗದರ ರಕ್ಷ ಣೆಯು ಅಸಾಧ್ಯವಾಯಿತು. ನಾವಿಕರೆಲ್ಲರೂ ನಾವೆಯನ್ನು ನಡೆಯಿಸುವ ಯೋಚನೆಯಂ ಬಿಟ್ಟು ತಮ್ಮ ತಮ್ಮ ಪ್ರಾಣರಕ್ಷಣೆಯೊಳು ಆತುರರಾಗಿ ಹಡಗಿಗೆ ಸೇರಿದ ಚಿಕ್ಕ ಚಿಕ್ಕ ದೋಣಿಗಳನ್ನೇರಿ ಹೊರಟು ಹೋದರು. ನಾನು ಸಹಾಯಕೂನ್ಯನಾಗಿ ಉಪಾಯಾಂತರಗಳನ್ನರಿಯದೆ ಕಡೆಗೊಂದು ಮಾರ್ಗವನ್ನು ಹುಡುಕಿದೆನು. ಹಡಗಿನಲ್ಲಿ ಹೆಚ್ಚಾಗಿಟ್ಟಿದ್ದೆರಡು ಧ್ವಜಸ್ತಂಭ ಗಳನ್ನು ನೋಡಿ, ಒಂದು ಸ್ಥಂಭದ ಒಂದು ಭಾಗಕ್ಕೆ ಹಿರಿಯಮಗನನ್ನೂ ಹಿರಿ ಯಕಿಂಕರನನ್ನೂ, ಮತ್ತೊಂದುಭಾಗಕ್ಕೆ ನನ್ನ ಪ್ರಿಯೆಯನ್ನೂ ಕಟ್ಟಿಬಿ ಗಿದು, ಮತ್ತೊಂದು ಸ್ತಂಭದ ಬಂದುಪ್ರಾಂತಕ್ಕೆ ಕಿರಿಯಮಗುವನ್ನು ಕಿರಿಯ ಕಿಂಕರನನ್ನೂ, ಅದರ ಮತ್ತೊಂದುಪ್ರಾಂತಕ್ಕೆ ನನ್ನನ್ನು ಬಿಗಿದು ಕಟ್ಟಿ ಕೊಂ ಡು ಪ್ರವಾಹವೇಗದಿಂದ ಪ್ರಯಾಣವಂ ಗೈಯ್ಯುತ್ತಿರಲಾಗಿ, ದೈವವಶಾತ್ತು ಸೂರ್ಯಬಿಂಬವು ಕ್ರಮವಾಗಿ ಕಾಣುತ ಬಂದಿತು. ಗಾಳಿಯವೇಗವು ಶಮ ನವಾಗಿ ದಿಕ್ಕುಗಳು ಪ್ರಕಾಶವಾದುದನ್ನು ನೋಡಿದೆವು. ತರುವಾಯ ನಮ್ಮೆ ದುರಿಗೆ ಕರ್ನಪುರ, ಉದಯನಗರಗಳೆಂಬೆರಡು ಪಟ್ಟಣಗಳಿಗೆ ಹೋಗತಕ್ಕೆ ಎರಡುನಾವೆಗಳ೦ ಕಂಡೆವು, ಅದನ್ನು ನೋಡಿ, ದೇವರು ನಮ್ಮ ಪ್ರಾಣಸಂ ರಕ್ಷಣಾರ್ಥವಾಗಿ ಅವುಗಳನ್ನು ಬರಮಾಡಿಸಿದನೆಂದು ಸ್ಪಲ್ಪಸಂತುಷ್ಟರಾ ಗಲು ನಮ್ಮೆದುರಿಗೆ ಬರುತ್ತಿದ್ದ ನಾವೆಗಳು ನಮಗೆ ಹತ್ತರವಾದ ಕಾಗೆಲ್ಲ ನನ್ನ ಏಯೆಯು ಮಕ್ಕಳೊಂದಿಗೆ ಬಿಗಿದುಕೊಂಡಿದ್ದ ಸಂಭವು ದೂರವಾಗು ತಬಂದಿತು. ನನ್ನ ಹೆಂಡತಿಯನ್ನು ಬಿಗಿದಿದ್ದ ಸ್ತಂಭದ ಸಮಿಾಪಕ್ಕೆ ಕರ್ನಪು ೬ರದ ಮಾವಿಕರು ಮೊದಲು ಬಂದುದರಿಂದ ಅವರು ಹಿರಿಯಮಗನ್ನೂ ಹಿರಿ
ಪುಟ:ಕ್ರಾಂತಿವಿಲಾಸ.djvu/೧೯
ಗೋಚರ