೧೧. 'vvvvvvvY Wyyyyy vvvvvvv YV/yyyyyyyyyyyyyyyyyyy “ಮೊದಲನೆಯ ಪರಿಚ್ಛೇದ .ಅನುಭವಿಸಿದ ದುಃಖಲೇಶವೂ ಆತನಿಗೆ ಜ್ಞಾಪಕದಲ್ಲಿರಲಿಲ್ಲ, ಆದರೆ ತಾನು ಸಮುದ್ರದಲ್ಲಿ ಬಿದ್ದು ಹೋಗಿದ್ದವನು ದೈವವಶಾತ್ತು ರಕ್ಷಿತನಾಗಿ ಬದುಕಿದ್ದು ದೊಂದುಮಾತ) ಸೃಷ್ಟದೃಷ್ಟವಾದಂತೆ ಮನದೊಳು ಹೊಳೆಯುತಿರುವುದು. ' ಜಯಸ್ಥಳದೊಳು ಅವನ ಅಧಿಕಾರವು ಸರ್ವತ) ಪ್ರಚುರಗೊಂಡಿರ ಲಾಗಿ ಅವನಿಗೂ ಸೋಮಗುಪ್ತನಿಗೂ ಇದ್ದ ಬಾಂಧವ್ಯವು ಪ್ರಕಟವಾಗಿ ದ್ದರೆ ಸೋಮಗುಪ್ತನಿಗೆ ರಾಜದಂಡನೆಯು ಎಂದಿಗೂ ಉಂಟಾಗಲಾರದು. ಇತ್ತಲಾಗಿ ತನ್ನ ಜನನೀ ಭಾತ್ಯಗಳನ್ನು ಹುಡುಕುವುದಕ್ಕೆ ಸಲವಾಗಿ ತಂದೆಯನ್ನು ಬಿಟ್ಟು ಹೋಗಿದ್ದ ಕನಿಷ್ಠ ಚಿರಂಜೀವಿಯನ್ನೂ ಕನಿಷ್ಠ ಕಿಂಕ ರನನ್ನೂ ಎಲ್ಲಿ ಹುಡಿಕಿದರೂ ಕಾಣದೆ ದುಃಖಾವಿಷ್ಟಚಿತ್ತನಾಗಿದ್ದ ಸೋಮ ಗುಪ್ತನು ಜಯಸ್ಥಳಕ್ಕೆ ಬಂದು ರಾಜದಂಡನೆಗೆ ಗುರಿಯಾದ ದಿನವೇ ಕನಿಷ್ಠ ಜಿರಂಜೀವಿಯ 'ಅಲ್ಲಿಗೆ ಬಂದಿದ್ದನು. ಅವನು ತನ್ನ ತಂದೆಯಂತೆ ಪ್ರಾಣ ದಂಡನೆಯನ್ನು ಹೊಂದುವಷ್ಟರಲ್ಲಿ ದೈವಯೋಗದಿಂದ ಮಾರ್ಗದೊಳು ಅವ ನಿಗೆ ಪೂರ್ವಪರಿಚಿತನಾಗಿದ್ದೊಬ್ಬ ಸ್ನೇಹಿತನು ಅವನಂ ಕಂಡು, “ ಎಲೈ ಸ್ನೇಹಿತನೆ ? ನೀನೇಕೆ ಈ ದೇಶಕ್ಕೆ ಬಂದೆ ? ಇಲ್ಲಿಗೆ ಹೇಮಕೂಟವಾಸಿಗ `ಳಾರು ಬಂದರೂ ಪ್ರಾಣದಂಡನೆಗೆ ಗುರಿಯಾಗತಕ್ಕುದೆಂದು ಉಗ್ರಶಾಸನವು ಏರ್ಪಟ್ಟಿದೆ. ನಿನ್ನ ಜನ್ಮಭೂಮಿಯು ಮಲಯಪುರವಾದುದರಿಂದ ಇಲ್ಲಿನ ಜನರಾರಾದರೂ ನಿನ್ನನ್ನು ಆವ ದೇಶದವನೆಂದು ಕೇಳಿದರೆ ಮಲಯಪುರದವ ನೆಂದು ಹೇಳಬೇಕಲ್ಲದೆ ಹೇಮಕೂಟದವನೆಂದು ಹೇಳಬೇಡ ; ಹಾಗೆ ಹೇಳಿ ದರೆ ನಿನಗೆ ನಿಸ್ಸಂಶಯವಾಗಿ ಪ್ರಾಣದಂಡನೆಯಾಗುವುದು. ಇಂದು ಜಯಸ್ಥ ೪ಕ್ಕೆ ಬಂದಿದ್ದ ಹೇಮಕೂಟದೊಬ್ಬ ವೃದ್ದ ವರ್ತಕನು ಅರಸನಿಂದ ಪ್ರಾಣ ದಂಡನೆ ವಿಧಿಸಲ್ಪಟ್ಟವನಾಗಿ, ಸಾಯಂಕಾಲ ಸೂರ್ಯನಸ್ತಂಗತನಾಗುವುದ ರೊಳಗೆ ಪ್ರಾಣದಂಡನೆಯಂ ಹೊಂದುವವನಾಗಿದ್ದಾನೆ. ಆದುದರಿಂದ ನೀನಿಲ್ಲಿ ರುವತನಕ ಜಾಗರೂಕನಾಗಿರಬೇಕು, ನನ್ನ ವಕದಲ್ಲಿ ನೀನು ಕೊಟ್ಟಿದ್ದು ದನ್ನು ತೆಗೆದುಕೊ ಎಂದು ಹೇಳಿ, ವರಹಾಗಳು ತುಂಬಿದ್ದೊಂದು ಚೀಲ ವನ್ನು ಆತನ ಕೈಯಲ್ಲಿಟ್ಟನು. ಅವನದನ್ನು ತನ್ನ ಕಿಂಕರನ ಕೈಯಲ್ಲಿ ಕೊಟ್ಟು, “ಕಿಂಕರನೆ ! ಈ ವರಹಾದ ಜೀಲವನ್ನು ಕೊಂಡೊಯ್ದು ಸತ್ಯಕ್ಕೆ ಹೋಗಿ ಅಲ್ಲಿ ಅದನ್ನಾರಿಗೂ ತೋರದೆ ಜೋಪಾನವಾಗಿಟ್ಟರು. ಭೋಜ
ಪುಟ:ಕ್ರಾಂತಿವಿಲಾಸ.djvu/೨೪
ಗೋಚರ