೧೪ Ahhhhhhhhhhhhhhhhhhhhhhhhhhhhhhhhhhhhhh. \nnnnnnnnnnnnnnnnyhy/API ಭಾಂತಿವಿಲಾಸ. ರ್ಮಕಾರನು ಯಜಮಾನಿಯವರ ಪಾದರಕ್ಷೆಯನ್ನು ಸರಿಮಾಡಿದ ಕೂಲಿಗೆ ಸಲವಾಗಿ ಕೊಟ್ಟಿದ್ದ ನಾಲ್ಕಾಣೆಯನ್ನು ಅವನಿಗೆ ಕೊಟ್ಟೆನು, ನನ್ನಲ್ಲೇನೂ ಇಟ್ಟುಕೊಳ್ಳಲಿಲ್ಲ ” ವೆಂದು ಹೇಳಿದ ಕಿಂಕರನ ಆಶ್ಚರ್ಯಕರವಾದಾ ಮಾ ತುಗಳನ್ನು ಕೇಳಿ, ' ಎಲೈ ಕಿಂಕರನೆ ! ಇದು ಪರಿಹಾಸಕ್ಕೆ ಕಾಲವಲ್ಲ. ನೀನು ಕ್ಷೇಮವಾಗಿರಬೇಕಾದರೆ ಚಿನ್ನದ ನಾಣ್ಯಗಳನ್ನೆಲ್ಲಿಟ್ಟೆ, ಹೇಳು ! ನಾವೀಗ ಬಂದಿರುವ ದೇಶವು ಪೂರ್ವ ಎಂದಿಗೂ ನೋಡಿದುದಲ್ಲ. ಇಲ್ಲಿ ನಮಗೊಬ್ಬರೂ ಬಂಧುಗಳಿಲ್ಲ, ಆವ ಧೈರ್ಯದಿಂದ ಅಷ್ಟೊಂದು ಚಿನ್ನದ ನಾಣ್ಯಗಳನ್ನು ಇತರರ ಕೈಯಲ್ಲಿ ಕೊಟ್ಟೆ? ” ಎಂದು ಕೇಳಿದುದಕ್ಕೆ, ಕಿಂಕ ರನು, “ ಸ್ವಾಮಿಾ ! ತಾವು ಭೋಜನಮಾಡುತ್ತ ಹಾಸ್ಯ ಮಾಡಿದರೆ ಸಂತೋ ಪದಿಂದ ಕೇಳುವೆನು. ಜಾಗ ತೆಯಲ್ಲಿ ಮನೆಗೆ ದಯಮಾಡಬೇಕು, ತಮ್ಮ ನ್ನು ಕರೆದುಕೊಂಡು ಬರುವಂತೆ ಯಜಮಾನಿಯವರು ಹೇಳಿ ಕಳುಹಿಸಿರು ತಾರೆ. ಆದದರಿಂದ ಹೆಚ್ಚು ಸಾವಕಾಶವಾದರೂ, ತಮ್ಮನ್ನು ಬಿಟ್ಟು ನಾನೂ ಬ್ಬನೇ ಮನೆಗೆ ಹೋದರೂ ಮಾನವುಳಿಯುವಹಾಗಿಲ್ಲ, ಮತ್ತು ನಾನು ಪೆಟ್ಟನ್ನೂ ತಿನ್ನು ಬೇಕಾಗುವುದು. ಬಹಳ ಹೊತ್ತಾಯಿತು ” ಎಂದು ಹೇಳ ಲು ; ಚಿರಂಜೀವಿಯು ಖತಿಗೊಂಡು, “ ಎಲೈ ಕಿಂಕರ : ನೀನೇನನ್ನೂ ಅರಿ ಯದವನು. ನಾನೆಷ್ಟು ಹೇಳಿದರೂ ಪರಿಹಾಸವನ್ನೇ ಮಾಡುತ್ತಿ ; ನಾನೆಷ್ಟು ಕ್ಷಮಿಸಿದರೂ ನೀನು ನಿನ್ನ ನಡತೆಯನ್ನು ಬಿಡುವುದಿಲ್ಲ. ಉಚಿತಕಾಲದಲ್ಲಿ ಎಲ್ಲವೂ ಚೆನ್ನಾಗಿರುವುದು-ಅಕಾಲದೊಳು ಅಮೃತವೂ ವಿಷುಲ್ಯವಾಗು ವುದು, ಅದು ಹಾಗಿರಲಿ, ನಿನ್ನ ಕೈಯಲ್ಲಿ ಕೊಟ್ಟಿದ್ದ ಸ್ವರ್ಣಮುದ್ರೆಗಳನ್ನೇ ನುಮಾಡಿದೆ ? ೨ ಎನಲು; ಕಿಂಕರನು, “ ಸ್ವಾಮಿಾ ! ತಾವಾವಾಗಲೂ ನನ್ನಕೈ ಯಲ್ಲಿ ಸ್ವರ್ಣಮುದ್ರೆಯನ್ನು ಕೊಡಲಿಲ್ಲ ” ಎಂದನು. ಜೆರಂಜೀವಿಯು, * ಎಲೈ ಕಿಂಕರ ! ನಿನಗಿಂದೇನಾಗಿದೆಯೋ ನನಗದು ಗೊತ್ತಿಲ್ಲ, ನಿನಗೆ ಸಂಪೂರ್ಣವಾಗಿ ಹುಚ್ಚು ಹಿಡಿದಿರುವಂತೆ ಕಾಣುತ್ತದೆ; ಹಾಗಿಲ್ಲದಿದ್ದರೆ ಚೆನ್ನಾಗಿ ಹೇಳು, ಚಿನ್ನದ ಮುದ್ರೆಯನ್ನೆಲ್ಲಿಟ್ಟು ಬಂದೆ ?” ಎಂದು ಕೇಳಿದುದಕ್ಕೆ ಕಿಂಕ ರನು, ಯಜಮಾನಿಯವರು ಕ್ಷಿಪ್ರ ದಲ್ಲಿ ಕರೆದುಕೊಂಡು ಬರಹೇಳಿದ್ದಾರೆ. ಆದುದರಿಂದ ಮನೆಗೆ ದಯಮಾಡಬೇಕೆಂದು ಅತಿ ವಿನಯವಾಗಿ ಬೇಡಿಕೊಳ್ಳು ತೇನೆ. ಯಜಮಾನಿಯವರೂ ಆಕೆಯ ತಂಗಿಯ ತಮಗಾಗಿ ಕಾದಿದ್ದಾರೆ.
ಪುಟ:ಕ್ರಾಂತಿವಿಲಾಸ.djvu/೨೭
ಗೋಚರ