೧aಳಿ AAAAAAAAAAAAAAAAAAMA \ 41 vithr\nh P\ hfth Af1 #h rwr\ #\hwxx ಮೊದಲನೆಯ ಪರಿಚ್ಛೇದ ತಾವು ದಯಮಾಡದಿರುವುದರಿಂದ ಅವರು ಊಟವನ್ನು ಮಾಡಲಿಲ್ಲ ” ವೆನಲು; ಆಶ್ಚ ರ್ಯಕರವಾದಾ ಮಾತನ್ನು ಕೇಳಿ ಕೋಪದಿಂದ ಕಂಪಿತಕಳೇಬರನಾಗಿ, - ದುರಾತ್ಮನೆ ಕೇಳಿದುದಕ್ಕೆಲ್ಲ ಮನೆಯಜಮಾನಿಯು ಕರೆಯುತ್ತಾಳೆಂದು ಉತ್ತರವನ್ನು ಹೇಳುತ್ತೀಯಾ, ಅವಳಾರೋ ನನಗೆ ತಿಳಿಯದು ” ಎನಲು; ಕಿಂಕರನು, “ ತಮಗೆ ತಿಳಿಯದೆ ? ತಮ್ಮ ಪ್ರಿಯಪತ್ನಿಯನ್ನು ನಾವುಗಳೆಲ್ಲ ಮನೆಯ ಯಜಮಾನಿಯೆಂದು ಕರೆಯುತ್ತೇವೆ, ಅವರನಲ್ಲದೆ ಮತ್ಯಾರನ್ನು ಯಜಮಾನಿಯೆಂದು ಕರೆಯುವೆವು ? ಅವರೇ ತಮ್ಮನ್ನು ಮನೆಗೆ ಕರೆದು ಕೊಂಡು ಬರಹೇಳಿ ಕಳುಹಿದರು, ಆದುದರಿಂದ ಮನೆಗೆ ದಯಮಾಡಬೇಕು, ಸಾವಕಾಶ ಮಾಡಲಾಗದು. ಭೋಜನಕಾಲವು ಮಿಾರುತ ದೆ ೨ ಎನಲಾ ಚಿರಂಜೀವಿಯು ಅಸಂಬದ್ಧವಾದಾ ವಾಕ್ಯಗಳನ್ನು ಕೇಳಿ ಸಹಿಸಲಾರದೆ, “ನಿನಗೆ ಹುಚ್ಚು ಬಿಡುವುದಿಲ್ಲ, ಅದರ ಫಲವನ್ನನುಭವಿಸುವೆ ' ಎಂದು ಹೇಳಿ ಹೊಡಿಯ ಲಾರಂಭಿಸಿದನು. ಪೆಟ್ಟನ್ನು ಸಹಿಸಲಾರದೆ ಬುದ್ಧಿ ಶೂನ್ಯವಾಗಿ, ಪ್ರಭುವೆ ! ಅಪರಾಧವಿಲ್ಲದೆ ಹೊಡಿಯಲೇಕೆ? ತಮಗೆ ಇಷ್ಟವಿದ್ದರೆ ಮನೆಗೆ ಬರಬಹುದು, ಇಲ್ಲದಿದ್ದರೆ ಬಿಡಬಹುದು, ನನ್ನನ್ನಾರು ಕಳುಹಿದರೋ ಅವರ ಬಳಿಗೆ ಹೋಗುವೆನು ” ಎಂದು ಕಿಂಕರನು ಮನೆಗೆ ಹೊರಟುಹೋದನು. ತರುವಾಯ ಚಿರಂಜೀವಿಯು ಮನಸ್ಸಿನಲ್ಲಿ, ಆರೋ ವಂಚಕನು ಚಮತ್ಕಾರವಾದ ಮಾತುಗಳಿಂದ ಕಿಂಕರನ ಕೈಯಲ್ಲಿದ್ದ ಹಣವನ್ನು ಕಸು ಗೊಂಡಂತೆ ತೋರುತ್ತದೆ. ಆ ಭಯದಿಂದವನಿಗೆ ಬುದ್ದಿ ನಷ್ಟವಾಗಿದೆ ; ಹಾಗಿ ಇಲ್ಲದಿದ್ದರೆ ಪೂರ್ವೋತ್ತರವಿರುದ್ದಗಳಾದ ಮಾತುಗಳನ್ನು ನುಡಿಯನು. ಸ್ವಸ್ಥಚಿತ್ತನಾಗಿದ್ದರೆ ಅಂತಹ ಅಸಂಬದ್ಧ ವಾಕ್ಯಗಳಾವಾಗಲೂ ಬಾಯಲ್ಲಿ ಬರಲಾರವು. ಅಹದು, ಪಾಪ ಅವನಿಗೆ ಹುಚ್ಚ ಹಿಡಿಯಿತು, ಈ ಜಯಸ್ಥಳ ದಲ್ಲಿ ಇಂದ್ರಜಾಲವಿದ್ಯೆಯು ಬಹಳ ಪ್ರಬಲವೆಂದು ಹೇಳುತ್ತಾರೆ, ಹಾಗೂ ಈ ದೇಶಸ್ಥರು ಕಪಟವೇಷವನ್ನು ತಾಳಿ ಗೂಢವಾಗಿ ಸಂಚರಿಸುತ್ತಾರೆ. ಅದಲ್ಲದೆ ತಿಳಿಯದಂತೆ ತಮ್ಮ ಮಾಯೆಯನ್ನು ವಿಸ್ತರ ಪ್ರಯೋಗಿಸಿ ಪರ, ದೇಶಸ್ಥರ ಪ್ರಾಣಧನಗಳನ್ನು ಅಪಹರಿಸುವಂತಿದೆ. ಇಲ್ಲಿನಹೆಂಗಸರು ಅತ್ಯಂತ ಮಾಯಾವಿಗಳು ; ಅನ್ಯದೇಶದವರನ್ನು ಸುಲಭವಾಗಿ ಮೂಢರನ್ನಾಗಿ ಮಾಡಿ ಬಂದಾವರ್ತಿ ತಮ್ಮ ಮೋಹಪಾಶಕ್ಕವರನ್ನೊಳಪಡಿಸಿದ ಬಳಿಕ ಅವರಿಗೆ ಒಟ
ಪುಟ:ಕ್ರಾಂತಿವಿಲಾಸ.djvu/೨೮
ಗೋಚರ