೨೫ \nnnnnnnnnnnnnnnnnnyh/nnnnn \hhhhh/ WAYMYYY ಎರಡನೆಯ ಪರಿಚ್ಛೇದ ಯುಕ್ತವಲ್ಲ. ನನ್ನನ್ನು ಹೀಗೆ ಹೀನಾಯಿಸುವುದಕ್ಕೆ ನಾನು ಮಾಡಿದ ಅಪ ರಾಧವೇನೋ ಅದನ್ನರಿಯೆನು, ನನ್ನನ್ನು ತ್ಯಜಿಸುವುದಕ್ಕೆ ಆಗುವುದಿಲ್ಲ, ಆ ಯೋಚನೆಯು ಸಲ್ಲದು. ನಿಮ್ಮನ್ನು ವಿನಾ ನಾನು ಮತ್ತಾರನ್ನು ಬಲ್ಲೆನು? ಈ ದೇಹವು ಇರುವವರೆಗದು ನಿಮ್ಮದಾಗಿರುವುದು, ನಾನು ಪ್ರಾದಿಂದಿರು ವಾಗ ತಾವೆನ್ನನ್ನು ಅನೈಯೆಂದು ಭಾವಿಸಕೂಡದು, ನೀವು ಸೂರ್ಯ, ನಾನು ಕಮಲಿನಿ ; ನೀವು ಚಂದ, ನಾನು ಕುಮುದಿನಿ ; ನೀವು ಮೇಘು, ನಾನು ಮಿಂಚು ; ಹೀಗೆ ನಮ್ಮಿಬ್ಬರಿಗೂ ಪರಸ್ಪರ ಸ್ನೇಹವಿರುವಾಗ ನೀವು ಬಿಟ್ಟರೂ ನಾನು ಬಿಡುವುದಿಲ್ಲ, ಮನೆಗೆ ನಡೆಯಿರಿ, ಜನರು ನೋಡಿ ಹಾಸ್ಯ ಮಾಡುವ ಹಾಗೆ ಮಾಡಲೇಕೆ ? ಎಂದುದಂ ಕೇಳಿ ಚಿರಂಜೀವಿಯು, ೯ ಇದೇನು ಅಪಾಯ ಸಂಘಟನೆ ! ಇಂತಹ ವಿಪತ್ತು ಹಿಂದೆಂದೂ ಉಂಟಾಗಿ ರಲಿಲ್ಲವು. ಇವಳು ತನ್ನ ಗಂಡನನ್ನು ಮಾತಾಡಿಸುವಂತೆ ನನ್ನನ್ನು ಮಾತಾ ಡಿಸುತ್ತಾಳೆ ಅನ್ಯರು ನಗುವರೆಂಬದನ್ನೂ ತಿಳಿಯದೆ ಧೈರ್ಯಗೊಂಡು ನಟ ಸುತ್ತಾಳೆ. ಇವಳು ಸಾಮಾನ್ಶಿಯಲ್ಲ, ಅನ್ಯದೇಶದಿಂದ ಬಂದೆನ್ನೊಡನೆ ಪತಿ ಯನ್ನು ಕುರಿತು ಹೇಳುವಂತೆ ಆವಕಾರಣದಿಂದ ಮಾತಾಡುತ್ತಾಳೆ ! ನಾನೇ ನಾದರೂ ಸ್ಪಪ್ಪವನ್ನು ಕಂಡೆನೋ, ಭೂತಾವಿಷ್ಟನಾದೆನೋ, ಬುದ್ಧಿಭ್ರಮಣೆ ಯುಂಟಾಗಿದೆಯೊ?”ಎಂದು ತರಳತಹೃದಯನಾಗಿ, “ಆಶ್ಚರ್ಯಾಶಯದಿಂದ ಬುದ್ಧಿ ಮುಗ್ಧವಾಗಿದೆ. ಈ ಅಪಾಯದಿಂದ ಹೇಗೆ ಬಿಡುಗಡೆ ಹೊಂದುವೆನೋಟ ಎಂದಾಲೋಚಿಸುತ್ತಿರುವ ಸಮಯದಲ್ಲಿ, ವಿಲಾಸಿನಿಯು ಕಿಂಕರನಂ ಕುರಿತು, * ನೀನು ಮುಂದಾಗಿ ಮನೆಗೆ ಹೋಗಿ ಎಲ್ಲವನ್ನೂ ಸಿದ್ಧಪಡಿಸಿಕೊಂಡಿರು ವಂತೆ ಸೇವಕರಿಗೆ ನಿಯಮಿಸು, - ನಾವು ಬಂದಕೂಡ್ಲೆ ಭೋಜನಕ್ಕೆ ಪಾರಂ ಭಮಾಡುವೆವು ಎನಲು ; ಕಿಂಕರನು ಚಿರಂಜೀವಿಯನ್ನು ನೋಡಿ ಕಣ್ಣು ಮಿಡುಗಿಸುತ್ತ ದುಃಖ ಸೂಚಕವಾದ ವಾಕ್ಯಗಳನ್ನು ಹೇಳಲುದ್ಯುಕ್ತನಾಗಿ, * ಎಲೈ ಸ್ವಾಮಿಯೆ ! ಇದನ್ನೆಲ್ಲ ನೀವು ಆಲೋಚಿಸದೆ ಇಲ್ಲಿಗೆ ಬಂದುಬಿ ಟೀರಿ, ಇದು ಯೋಗ್ಯವಾದ ಸ್ಥಳವಲ್ಲವು. ಇಲ್ಲಿ ಇಂದ್ರಜಾಲ ಮಹೇಂದ) ಜಾಲಗಳು ಪ್ರಬಲಿಸಿವೆ. ಅವುಗಳಿಂದ ಆಸನ್ನವಾಗಿರುವ ಗಂಡವನ್ನು ತಪ್ಪಿ ಸಿಕೊಂಡು ನಾವು ಕ್ಷೇಮವಾಗಿ ಊರನ್ನು ಸೇರುವಂತೆ ಕಾಣಲಿಲ್ಲವು, ಈಗ ವರ ಅಭಿಯಾನುಗುಣವಾಗಿ ವರ್ತಿಸದಿದ್ದರೆ ನಮಗೆ ಪ್ರಾಣಸಂರಕ್ಷಣೆ
ಪುಟ:ಕ್ರಾಂತಿವಿಲಾಸ.djvu/೩೮
ಗೋಚರ