8.0 hhhhhhhhhhhh, hhhhhhhhhh Avnyh #hvrnhhhhh A # ಗಿಮ# N/ AYAAA ಭಾಂತಿವಿಲಾಸ ಅಪಹರಿಸಿದೆಯಾ ? ನೀನು ಕ್ಷೇಮವಾಗಿರಬೇಕೆಂದು ಅಪೇಕ್ಷಿಸಿದರೆ ಕ್ಷಿಪ, ವಾಗಿ ಬಾಗಿಲನ್ನು ತೆಗೆ, ಯಜಮಾನರು ಎಷ್ಟೊಂದು ಹೊತ್ತು ಬೀದಿಯಲ್ಲಿ ನಿಂತಿರುವರು?” ಎಂದು ಹೇಳಿದನು. ಹೇಮಕೂಟದ ಕಿಂಕರನು ಕಡೆಗೆ ಬಾಗಿ ಲನ್ನು ತೆಗೆಯಲಿಲ್ಲವು. ಜಯಸ್ಥಳದ ಕಿಂಕರನು ತನ್ನ ಪ್ರಭುವನ್ನು ನೋಡಿ * ಸ್ವಾಮಿ ! ಇಂದು ಶುಭಸೂಚನೆಗಳಾವವೂ ಕಾಣುವುದಿಲ್ಲ ; ಬಾಗಿಲನ್ನು ಒಳ್ಳೆಯಮಾತಿನಿಂದ ತೆಗೆಯುವಂತೆ ತೋರಲಿಲ್ಲ, ಬಲಾತ್ಕಾರದಿಂದ ಬಾಗಿಲ ಡಿಯಬೇಕಾಗಿದೆ ; ಹಾಗೆ ಮಾಡದೆ ಎಷ್ಟು ಹೊತ್ತು ಬೀದಿಯಲ್ಲಿ ನಿಂತಿರ ಲಾದೀತು ? ಅಪೂರ್ವವಾಗಿ ಔತಣಕ್ಕೆ ಕರೆಯಲ್ಪಟ್ಟ ಈ ದೊಡ್ಡ ಮನುಷ್ಯ ರಿಗೆ ವ್ಯರ್ಥ ಶ್ರಮವಾಗುತ್ತದೆ ಎಂದನು. ಹೀಗೆಂದು ಹೇಳುತ್ತಿರುವಲ್ಲಿ ಚಂದಪ್ರಭೆಯು ಒಳಗೆ ಹೇಮಕೂಟದ ಕಿಂಕರನನ್ನು ಕುರಿತು, “ ಎಲೈ ಕಿಂಕರ ! ಅದಿರು ಹೊರಗೆ ಗದ್ದಲವಂ ಮಾಡುತ್ತಾರೆ ? : ಎನಲು ; ಹೇಮ ಕೂಟದ ಕಿಂಕಿರನು, “ ಅದೇನೆಂದು ಕೇಳುವಿರಿ, ತಮ್ಮ ಪಟ್ಟದಲ್ಲಿ ಪೋಕ ರಿಜನರು ತುಂಬಿದ್ದಾರೆ. ಗದ್ದಲಕ್ಕೇನೂ ಕಡಿಮೆಯಿಲ್ಲ ” ಎಂದನು. ಆಷ್ಟ ರಲ್ಲಿ ಚಂದ್ರಪ್ರಭೆಯ ಧ್ವನಿಯನ್ನು ಕೇಳಿ ಜಯಸ್ಥಳದ ಚಿರಂಜೀವಿಯು, * ಎಲೈ ! ಇಂದು ಮನೆಯಲ್ಲೇನವಸ್ಥೆ ? ° ಎಂದು ಕೇಳಿದ ಮಾತ ದಿಂದ ಆಕೆಯು ಬಹಳ ಕೋಪಗೊಂಡವಳಾಗಿ, ಎಲೆ ಹತಭಾಗ್ಯನೆ ನೀನಾರು? ದೂರಹೋಗು, ಬಾಗಿಲಲ್ಲಿ ಗದ್ದಲವಂ ಮಾಡಬೇಡ, ಬೀದಿಯಲ್ಲಿ ನಿಂತು ಹೆಂಡತಿಯನ್ನು ಕರೆಯುವಂತೆ ಕರೆಯುತ್ತೀಯೆ - ಎನಲು ; ಜಯಸ್ಥಳದ ಕಿಂಕರನು, “ ಪ್ರಭುವೆ ! ಇದು ಬಹಳ ನಾಚಿಕೇಡಾಗಿದೆಯಲ್ಲವೆ ? ಈ ದೊಡ್ಡ ಮನುಷ್ಯರು ನಿಂತಿದ್ದಾರಲ್ಲ, ಬಾಗಿಲ ತೆಗೆಯಿಸುವುದಕ್ಕೆ ನಮ್ಮ ಕೈಲಾಗುವಂತಿಲ್ಲ. ಬೇಗನೆ ತೆಗಿಯಿಸುವಂತೆ ತಾವೇ ಉಪಾಯವನ್ನು ಮಾಡ ಭಕು ” ಎನಲು ; ಚಿರಂಜೀವಿಯು, ನನಗೂ ಏನೂ ತೋರುವುದಿಲ್ಲವು, ಬುದ್ದಿ ನಷ್ಟವಾಗಿದೆ. ಇಂದಿನದ ಮಹಿಮೆಯೇನೋ ತಿಳಿಯಲಿಲ್ಲ ' ವೆನಲು; ಕಿಂಕರನು, ನಾವಿನ್ನು ತಾಳುವುದರಿಂದ ಪ್ರಯೋಜನವಿಲ್ಲ. ಬಾಗಿಲನ್ನೊಡೆ ಯಿಸುವುದೇ ಯುಕ್ತ ” ಎಂದನು. ಅದಕ್ಕೆ ಚಿರಂಜೀವಿಯು, ಆದೇಸರಿ ಯಾದ ಉಪಾಯ' ಎಂದು ಹೇಳಿ, ಬಾಗಿಲೊಡೆಯುವುದಕ್ಕೆ ಕೊಡ್ತಿಗಳನ್ನು ತೆಗೆದುಕೊಂಡು ಬರಹೇಳಿ ಆಜ್ಞಾಪಿಸಲು ; ಕಿಂಕರನು, “ ಅಪ್ಪಣೆ ಪ್ರಕಾರ
ಪುಟ:ಕ್ರಾಂತಿವಿಲಾಸ.djvu/೪೩
ಗೋಚರ