೬೪ AAAAAAAAAAAAAAAAAAAAAAAAwvvvvvvwwwnwwwnMANAAAAAAAwn ಭಾಂತಿವಿಲಾಸ ಸ್ವತಃ ಮಾಡಿಕೊಂಡ ಪಾಣಿಗ್ರಹಣವನ್ನು ಅವಲಪಿಸುವುದಾವ ನ್ಯಾಯ ಅವಳ ಐಶ್ವರ್ಯವನ್ನು ನೋಡಿ ನೀವು ಆಕೆಯನ್ನು ಮದುವೆಮಾಡಿಕೊಂಡಿರಿ. ಆದುದರಿಂದ ಅವಳ ಐಶ್ವರ್ಯಕ್ಕೆಸಲವಾದರೂ ಅವಳಲ್ಲಿ ದಯೆಯನ್ನೂ, ಸ್ನೇ ಹವನ್ನೂ ತೋರುವುದು ಯುಕ್ತವಾಗಿದೆ. ಇಂದಿನ ನಿಮ್ಮ ಕೃತ್ಯಗಳನ್ನು ನೋಡಿದರೆ ನಮ್ಮಕ್ಕಿನಮೇಲೆ ನಿಮಗೆ ಸ್ವಲ್ಪವೂ ಪ್ರತಿವಿಶ್ವಾಸಗಳಿರುವಂತೆ ಕಾಣಲಿಲ್ಲವು, ಬಹಿರಂಗವಾಗಿ ಆಕೆಯು, ತಮ್ಮ ಹೆಂಡತಿಯಲ್ಲವೆಂತಲೂ, ತಾವು ಆಕೆಯ ಗಂಡನಲ್ಲವೆಂತಲೂ, ತಾವು ಅವಳನ್ನು ಪಾಣಿಗ್ರಹಣವಂಗೈ ಯಲಿಲ್ಲವೆಂತಲೂ ಹೇಳಿದುದು ನ್ಯಾಯವಲ್ಲ, ಗಂಡನಿಂದ ಹೀಗನ್ನಿಸಿಕೊಳ್ಳು ವುದಕ್ಕಿಂತ ದುಃಖಕರವಾದುದು ಬೇರೊಂದಿರದು. ವಿಶೇಷ ಹೇಳಲೇಕೆ? ಇಂದು ಅನ್ಯರಸಂಗಡ ಕಲಹಿಸುವಂತೆ ಆಕೆಯ ಸಂಗಡ ಬಹಳ ಕಲಹಿಸಿದಿರಿ, ಒಂದುವೇಳೆ ಮನಸ್ಸಿನಲ್ಲಿ ಪ್ರೇಮವಿಲ್ಲದಿದ್ದರೂ ಮಾತುಗಳಿಂದಲಾದರೂ ಪ್ರೀತಿಯ ತೋರಿದರೇನು ಹಾನಿ ? ನೀವೀಗ ಅಷ್ಟಾದರೂ ಮಾಡಿದರೆ ಆಕೆಗೆ ಸ್ವಲ್ಪ ತೃಪ್ತಿಯುಂಟಾಗುವುದು, ಇಲ್ಲವಾದರೆ ಆಕೆಯ ವ್ಯಥೆಯು ಪರಿಹಾರವಾಗದು. ತಾವು ಇಂದು ವಿಶೇಷ ಗಲಭೆಯನ್ನುಂಟುಮಾಡಿದಿರಿ. ಹೀಗೆ ಗಂಡಹೆಂಡಂದಿರು ಕಲಹಿಸಿದರೆ ಜನರು ಹೇಳನಮಾಡುವುದಕ್ಕೆ ಕಾರ ವಾದೀತಲ್ಲವೆ ? ಇಂದಿನ ನಿಮ್ಮ ಚೇಷ್ಟೆಯಂ ನೋಡಲಾಗಿ ನಿಮ್ಮ ಮುಖ ದೊಳು ಕೇವಲ ರೌದ್ರರಸವೇ ತೋರುತಿದೆಯಲ್ಲದೆ ಶಾಂತರಸವು ಕಾಳು ವುದಿಲ್ಲವು, ಮನಸ್ಸಿನಲ್ಲೇನೋ ದುರ್ಭಾವನೆಯಿರುವಂತೆ ಕಾಣುತಿದೆ. ಅದು ಹಾಗಿರಲಿ, ನಾನೀಗ ಹೇಳುವುದನ್ನು ಚಿತ್ರದಲ್ಲಿ ತರಬೇಕು, ಚಿಕ್ಕ ಮನೆಗೆ ಹೋಗಿ ಆಕೆಯಂ ಕರೆದು ಮೃದೂಕ್ತಿಗಳಿಂದ ಆಕೆಯ ಮನೋವ್ಯ ಥೆಯಂ ಪರಿಹರಿಸಿರಿ, ಇದುವರೆಗೆ ಮಾತಾಡಿದುದು ಆಕೆಯ ಮನಸ್ಸನ್ನು ಪರೀಕ್ಷಿಸಲಿಕ್ಕೋಸ್ಕರವೆಂದು ಹೇಳಿದರೆ ಆಕೆಗೆ ಸಮಾಧಾನವಾದೀತು, ಅಪ್ಪ ಸ್ನಾದರೂ ಮಾಡಕೊಡದೇಕೆ ? " ಎಂದು ಹೇಳಿದ ವಿಲಾಸಿನಿಯ ಮಾತು ಕೆಳ ಹೇಮಕೂಟದ ಚಿರಂಜೀವಿಯು ಹೀಗೆಂದು ಹೇಳಿದನು:-
- ಎಲೈ ಚಾರುಶೀಲೆಯಾದ ವಿಲಾಸಿನಿ ! ಇಂದೆನಗೆ ಸಂಭವಿಸಿರುವ ವಿಷಯಗಳದೆಸೆಯಿಂದ ನಾನು ಜ್ಞಾನಶೂನ್ಯನಾಗಿರುವೆನು. ಬುದ್ದಿಗೆ ಸ್ಫೂರ್ತಿ ಯುತಪ್ಪಿದೆ. ಕಂಠದೊಳು ಮಾತು ಹೊರಡುವುದಿಲ್ಲವು. ವಿವೇಕವೂ,