ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ Vwwwvvvvvvvvvv YYYYYVVy Vyvy\dyvvvvvv/• > WV ಭ್ರಾಂತಿವಿಲಾಸ ಎಂದು ಹೇಳಿ, “ ತಾವು ಮೊದಲು ಹೇಳಿಕಳುಹಿದಪ್ರಕಾರ ಹಾರವನ್ನು ತೆಗೆದುಕೊಂಡು ಬಂದಿದ್ದೇನೆ ' ಎಂದು ಅದನ್ನು ತೆಗೆದು ಆತನ ಕೈಯಲ್ಲಿ ಕೊಡುವುದಕ್ಕೆ ಹೋಗಲು; ಚಿರಂಜೀವಿಯು ಅದನ್ನು ನನ್ನ ಕೈಲೇಕೆ ಕೊಡು ತೀರಿ ? ಅದನ್ನು ನಾನೇನುಮಾಡಲಿ ?” ಎಂದು ಕೇಳಿದುದಕ್ಕೆ ವಸುಪ್ರಿಯ ನು, “ ಅದು ತಮಗೋಸ್ಕರವೇ ಮಾಡಲ್ಪಟ್ಟಿತು. ತಮ್ಮ ಇಷ್ಟಬಂದಂತೆ ಮಾಡಬಹುದು ೨ ಎನಲು; ಚಿರಂಜೀವಿಯು, “ ಹಾರವನ್ನು ಮಾಡಿಕೊಡು ವಂತೆ ತಮಗೆ ನಾನು ಹೇಳಲಿಲ್ಲ ” ವೆಂದುದಂ ಕೇಳಿ ವಸುಪಿ ಯನು, “ಏನು ಸ್ವಾಮಿಾ ? ಮಾಡಿತರುವಂತೆ ನಿನ್ನೆಯದಿನ ಅಪ್ಪಣೆಕೊಟ್ಟು ಕಳುಹಿಸಿದಿರಲ್ಲ, ಬಹಳ ದಿನಗಳಾಗಲಿಲ್ಲ, ನನಗೆ ಬಹಳ ಕೆಲಸವಿದೆ, ಪರಿಹಾಸಕ್ಕಿದು ಕಾಲ ವಲ್ಲ, ಹಾರವನ್ನು ತೆಗೆದುಕೊಂಡೊಯ್ದರೆ ಬಳಿಕ ಬಂದು ಅದರ ಬೆಲೆಯ ನ್ನು ತೆಗೆದುಕೊಳ್ಳುವೆನು ಎನಲು ; ಚಿರಂಜೀವಿಯು, “ ನಾನು ಹಾರ ವನ್ನು ತೆಗೆದುಕೊಳ್ಳಬೇಕಾದರೆ ಈಗಲೇ ಅದರ ಬೆಲೆಯನ್ನು ನೀವು ತೆಗೆ ದುಕೊಳ್ಳಬೇಕು ; ತೆಗ್ಡೆದುಕೊಳ್ಳದಿದ್ದರೆ ಬಳಿಕ ನೀವು ನನ್ನನ್ನು ನೋಡ ಲಾರಿರಿ ಎಂದನು. ಅದಕ್ಕೆ ವಸುಪ್ರಿಯನು, “ ನನ್ನೊಡನೆ ಪರಿಹಾಸವೇಕೆ ? ಹಾರವನ್ನು ಅಂಗೀಕರಿಸಿರಿ ; ನಾನು ಬೇಗನೆ ಹೋಗಬೇಕು ” ಎಂದನು. ಹೇಮಕೂಟದ ಜಿರಂಜೀವಿಯು ಹಾರವನ್ನು ಕೈಯಲ್ಲಿ ತೆಗೆದು ಕೊಂಡು ಮನಸ್ಸಿನಲ್ಲಿ, ಇದೇನು ವಿಚಿತ್ರ ವ್ಯಾಪಾರವಾಗಿದೆಯಲ್ಲ ! ಈ ಸ್ಥಳದ ಜನರ ನಡತೆಯು ದುರವಗಾಹವಾಗಿದೆ. ನಾನು ಹುಟ್ಟಿದ್ದು ಮೊದ ಲು ಈ ಮನುಷ್ಯನನ್ನು ನೋಡಿದವನಲ್ಲ, ಕೇಳಿದ್ದೂ ಇಲ್ಲ. ಹೀಗಿರುವಲ್ಲಿ ಬಹಳ ಬೆಲೆಯುಳ್ಳ ಹಾರವನ್ನು ನನ್ನ ಕೈಯಲ್ಲಿ ಕೊಟ್ಟು ಹೊರಟುಹೋ ಗಿದ್ದಾನೆ. ಬೆಲೆಯನ್ನು ತೆಗೆದುಕೊಳ್ಳಹೇಳಿದರೆ ಅದನ್ನೂ ತೆಗೆದುಕೊಳ್ಳ ಲಿಲ್ಲ, ಇಲ್ಲಿನ ಸಂಗತಿಗಳು ಅತ್ಯದ್ಭುತಗಳಾಗಿವೆ. ಆವದು ಹೇಗಾದರೂ ಇರಲಿ, ಮತ್ತೊಂದು ನಿಮಿಷವಾದರೂ ಇಲ್ಲಿರಬಾರದು, ಕಿಂಕರನು ನಾವೆ ಯನ್ನು ವಿಚಾರಿಸಿಕೊಂಡು ಬಂದಕೂಡಲೆ ಹೊರಟು ಹೋಗಬೇಕು” ಎಂದು ಯೋಜಿಸುತ, ಕಿಂಕರನು ಅಂಗಡಿಬೀದಿಗೆ ಬರುವ ಕಾಲಕ್ಕೆ ತಾನು ಸಿದ್ದ ವಾಗಿರ ಬೇಕೆಂದು ಅಲ್ಲಿಗೆ ಹೊರಟು ಹೋದನು. ಒಗ