೫೫. \” # \ n 1 1 \ \ \ " \ /\ n n: # ff r\ \ nh/\ " hhhh ನಾಲ್ಕನೆಯ ಪರಿಚ್ಛೇದ ಎಂದು ಹೇಳಿದ ಕೆಲವು ನಿಮಿಷಗಳೊಳಗೆ ಕಿಂಕರನು, ತನ್ನಂತೆ ಸ್ವಾಮಿಕಾ ರ್ಯನಿರ್ವಾಹಕರಾರೂ ಇರಲಾರರೆಂದು ಯೋಚಿಸುತ್ತ ಇದಿರಿಗೆ ಬಂದು ನಿಂತನು. ಚಿರಂಜೀವಿಯು ಅವನನ್ನು ನೋಡಿ, “ ಎಲೈ ಕಿಂಕರ ! ನಾನು ಕಳುಹಿದ್ದ ಕಾರ್ಯವನ್ನು ನಿರ್ವಹಿಸಿಕೊಂಡು ಬಂದೆಯಾ ? ೨ ಎಂದು ಕೇಳಿ ದುದಕ್ಕೆ ಕಿಂಕರನು, “ ಸ್ವಾಮಿ ? ತಾವು ನಿಯಮಿಸಿದ ಕಾರ್ಯವನ್ನು ಮಾಡದೆ ಬರತಕ್ಕವನಲ್ಲ ” ವೆಂದು ಹೇಳಿ ತಾನು ತಂದಿದ್ದ ಹಗ್ಗವನ್ನು ತೆಗೆದು ಮುಂದಿಟ್ಟನು. ಚಿರಂಜೀವಿಯು ನೋಡಿ ಹಣವೆಲ್ಲೆಂದು ಕೇಳಲು; ಕಿಂಕ ರನು, “ ಹಣವನ್ನು ನಾನೆಲ್ಲಿಂದ ತರಲಿ, ನನ್ನಲ್ಲಿದ್ದ ಹಣಕ್ಕೆ ಈ ಹಗ್ಗವನ್ನು ಕೊಂಡುಕೊಂಡು ಬಂದೆನು ” ಎನಲು ; ಚಿರಂಜೀವಿಯು, ೯ ಏನು : ಒಂದು ಹಗ್ಗ ದಬೆಲೆ ಐನೂರು ರೂಪಾಯಿಗಳಾಯಿತೆ? ಹುಚ್ಚು ಮಾತುಗಳನ್ನು ಬಿಡು, ನಾನು ಮನೆಗೆ ಕಳುಹಿಮ್ಮ ಕೆಲಸವೇನಾಯಿತು ? ೨ ಎಂದು ಕೇಳಲು ; ಕಿಂಕ ರನು, “ ಹಗ್ಗವನ್ನು ತೆಗೆದುಕೊಂಡು ಓಡಿ ಬಾ " ಎಂದು ಹೇಳಿದಿರಿ ; ಅದೇ ಪ್ರಕಾರ ತಂದಿರುತ್ತೇನೆ. ಅಪ್ಪಣೆಯಾದರೆ ಮನೆಗೆ ತೆಗೆದುಕೊಂಡು ಹೋಗು ವೆನು, ಎಂದನು. ಅದನ್ನು ಕೇಳಿ ಚಿರಂಜೀವಿಯು ಕೋಪಾವಿಷ್ಟನಾಗಿ ಕಿಂಕರನನ್ನು ಹೊಡೆಯುವುದಕ್ಕೆ ಯತ್ನಿಸಿದನು. ರಾಜನೃತ್ಯನದಂ ನೋಡಿ, * ಸ್ವಾಮಿ ? ಆತುರಪಡಬೇಡಿರಿ, ಸೈರಣೆಗೊಳ್ಳುವುದು ಒಳ್ಳೆಯದು ೨ ಎನ ಲು ; ಕಿಂಕರನು, ೯ ಅವರಿಗೆ ಸೈರಣೆಯ ವಿಚಾರವನ್ನು ಕುರಿತು ಹೇಳಿ ಏನುಪ್ರಯೋಜನ ? ರಮಪಡುವವನಿಗೆ ಹೇಳಿದರೆ ಒಳ್ಳೆಯದು, ಏಕೆಂದರೆ, ನಾನೀ ಪೆಟ್ಟು ತಿಂದು ಶ್ರಮಪಡುತ್ತನೆಯಾಗಿ ಸೈರಣೆಯೆನಗಿರಬೇಕು ? ಎನಲು ; ರಾಜಭಟನು, : ಎಲೈ ದುರಾತ್ಮನೆ ' ಸಾಕು : ಬಾಯಿಮುಚ್ಚು, ಮಾತಾಡಬೇಡ ೨ ವೆಂದನು. ಅದಕ್ಕೆ ಕಿಂಕರನು, “ ನನ್ನ ಬಾಯಿಮುಚ್ಚಿ ಸು ವುದಕ್ಕಿಂತ ಅವರ ಕೈಯನ್ನು ಮುಚ್ಚಿಸಿದರೆ ಒಳ್ಳೆಯದು ಎಂದು ಹೇಳಿದನು, ಚಿರಂಜೀವಿಯು ಆ ಮಾತುಗಳನ್ನೆಲ್ಲ ಕೇಳಿ, “ ಎಲೈ ದುರಾತ್ಮ ನಾದ ಕಿಂಕರನೆ , ನನಗೆ ಕೋಪ ಹೆಚ್ಚುವಂತೆ ಮಾಡಬೇಡ, ಸುಮ್ಮ ನಿರು , ಎನಲು ; ಕಿಂಕರನು, “ ಸಾಮಾ ! ಹೊಡಿದರೆ ಪೆಟ್ಟು ತಗಲದಿ ರುವುದಕ್ಕೆ ಅಂಚೆ ತನನಾಗಿದ್ದರೆ ಅನುಕೂಲವಾಗಿದ್ದಿತು ; ಹಾಗಿಲ್ಲವಲ್ಲ, ಏನುಮಾಡೋಣ ? ೨ ವೆನಲು, ಚಿರಂಜೀವಿಯು, “ ನೀನು ಎಲ್ಲಾ ವಿಷಯ ಒ
ಪುಟ:ಕ್ರಾಂತಿವಿಲಾಸ.djvu/೬೮
ಗೋಚರ