೬೬ fvvvv
- \\/Yy\r\\VVVVy
vvvvvvvvvvvvvvvvvvvvvvvvvy ಭ್ರಾಂತಿವಿಲಾಸ | ದೂ ತಿಳಿದಿರಲಿಲ್ಲ. ಮಾಡತಕ್ಕುದೇನು ? ಆ ಹಣಕ್ಕೋಸ್ಕರವೇ ಇಂದಿನದ ಪ್ರಯಾಣವು ನಿಂತುಹೋಗುವಂತಿದೆ ; ನಾನು ಹೊರಡದೆ ಹೋಗುವೆನಾದರೆ ಪ್ರಬಲ ನಷ್ಟಕ್ಕೆ ಗುರಿಯಾಗುವವನಾಗಿದ್ದೇನೆ. ನಿನಗುಪಕಾಯನ್ನು ಮಾಡಿ ದುದು ನನಗೀ ಶ್ರಮಕ್ಕೆ ಕಾರಣವಾಯಿತು ” ಎಂದುದಂ ಕೇಳಿ, ವಸುಪ್ರಿ ಯನು ಅಜ್ಜಿತನಾಗಿ, “ ಅಯ್ಯಾ : ನನ್ನ ಮಾನವನೇಕೆ ಕೆಡಿಸುತ್ತೀರಿ ? ತಮ್ಮ ಸಮಯಕ್ಕೆ ಹಣವನ್ನೊದಗಿಸಿಕೊಡದೆ ಹೋದುದಕ್ಕೋಸ್ಕರ ನಾನು ಮನಸ್ಸಿನಲ್ಲಿ ಸ್ವಲ್ಪವಾದ ಪರಿತಾಪವನ್ನನುಭವಿಸುವುದಿಲ್ಲ...ಜಿರಂಜೀವಿಯ ವರು ಹೀಗೆ ನನ್ನೊಂದಿಗೆ ವಿರೋಧಿಸುವರೆಂದು ನಾನು ಸ್ವಪ್ನದಲ್ಲಿಯೂ ಎಣಿಸಲಿಲ್ಲ, ಅವರು ಕೈಯಾರ ನನ್ನಿಂದ ಹಾರವಂ ತೆಗೆದುಕೊಂಡು ತಾನ ದನ್ನು ಕಂಡದ್ದೇ ಇಲ್ಲವೆಂದು ಅಪಲವಿಸಿದರೆ ನಾನು ಮಾಡತಕ್ಕುದೇನು ? ನಾನವರಿಗೆ ಹಾರವನ್ನು ಕೊಡದೆ ತಮ್ಮೊಂದಿಗೆ ಸುಳ್ಳು ಹೇಳಿ ಮೋಸಮಾ ಡುತ್ತೇನೆಂದು ತಾವೆಂದಿಗೂ ಎಣಿಸಕೂಡದು, ಈಗ್ಗೆ ನಾಲ್ಕು ಗಳಿಗೆಗಳಿಗೆ ಮುಂಚೆ ಆ ದೊಡ್ಡ ಮನುಷ್ಯರಿಗೆನ್ನ ಕೈಯಿಂದಲೇ ಹಾರವನ್ನು ಕೊಟ್ಟಿರು ತೇನೆ. ಅದನ್ನು ಕುರಿತು ಪ್ರಮಾಣವನ್ನೂ ಮಾಡುವೆನು, ನಾನು ಹಾರ ವನ್ನು ಅವರ ಕೈಯಲ್ಲೊಪ್ಪಿಸಿದಾಗ ಅದರ ಕಯದ ಹಣವನ್ನು ಕೊಡುವು ದಾಗಿ ಅವರು ಹೇಳಿದರೂ ನನ್ನ ದುರ್ಬುದ್ಧಿಯಿಂದಲೇ ಹಣವೀಗ ಬೇಡ, ಮತ್ತೊಂದು ಸಮಯದೊಳು ತೆಗೆದುಕೊಳ್ಳುವೆನು ' ಎಂದು ಹೇಳಿದುದಕ್ಕೆ * ಹಣವನ್ನೀಗ ತೆಗೆದುಕೊಂಡು ಹೋದರೆ ಸಮ, ಇಲ್ಲದಿದ್ದರೆ ಹಣವು ಸಿಕ್ಕು ವುದು ಕಷ್ಟ ೨ ವೆಂದರು, ಆವ ಕಾರಣದಿಂದ ಹಾಗವರು ಹೇಳಿದರೋ ನಾನ ರಿಯೆನು, ಪರಂತು ಅವರು ಹೇಳುವ ಮಾತುಗಳೇ ನಿಮಗೆ ಪ್ರಾಮಾಣಿಕ ವಾಗಿ ತೋರುವುದೇ ಹೊರತು ನನ್ನ ಮಾತುಗಳಲ್ಲಿ ನಂಬುಗೆಯು ಹುಟ್ಟ ಲಾರದು ” ಎಂದನು. ವಸುಪಿ ಯನು ನುಡಿದಾ ಮಾತುಗಳಂ ಕೇಳಿ ವರ್ತಕನು, ೯ ಚರಂ ಜೀವಿಯವರು ಅಂತಹ ಮನುಷ್ಯರೆ ? ಎಂದುದಕ್ಕೆ, ವಸುಪ್ರಿಯನು, “ ಅಯ್ಯಾ ! ಅವರಿಗೆ ಸರಿಯಾದ ವರ್ತಕರೀ ಜಯಸ್ಥಳದಲ್ಲಾರೂ ಇಲ್ಲವು. ಇಲ್ಲಿನ ಅಬಾಲವೃದ್ದರೂ ಅವರ ಯೋಗ್ಯತೆಯನ್ನು ಚೆನ್ನಾಗಿ ಬಲ್ಲರು. ಸರ್ವರೂ ಅವರಲ್ಲಿ ವಿಶ್ವಾಸಮಾಡುತ್ತಾರೆ. ಸಮಸ್ತ ಸಭೆಗಳಲ್ಲಿಯೂ