೭೩ ತಳvvvvvvv VVNVVVV\r\ \ry JV » VV V V\r\ \ \ \ \ v /VV/ V & V YY } ಟ ಕ
ಐದನೆಯ ಪರಿಚ್ಛೇದ ಹಾರಾಯರೇ ? ನಾನೊಬ್ಬರಮೇಲೆ ಅಕಾರಣವಾಗಿ ದೋಷಾರೋಪಣೆಯಂ ಮಾಡತಕ್ಕವಳಲ್ಲ, ನನ್ನ ವಿಜ್ಞಾಪನೆಯನ್ನು ತಾವು ಲಾಲಿಸಿ ಕೇಳಬೇಕು. ತಾವು ನನ್ನನ್ನಾರಿಗೆ ಮದುವೆಮಾಡಿಕೊಟ್ಟಿರುವಿರೋ ಅವರಿಗೂ ಅವರ ಕಿಂಕರನಿಗೂ ಅತಿ ಪ್ರಬಲವಾದ ಉನ್ಮಾದಾವಸ್ಥೆಯು ಪ್ರಾಪ್ತವಾಗಿ ಬೀದಿ ಗಳಲ್ಲೂ, ಅನ್ಯರ ಮನೆಗಳಲ್ಲೂ ಅನೇಕ ಕೆಟ್ಟ ಕೆಲಸಗಳನ್ನು ಮಾಡುತಿ ದ್ದರು. ಅದನ್ನು ನೋಡಿ ಬಹಳ ಭಯಪಟ್ಟು ಪ್ರಬಲ ಪ್ರಯತ್ನದಿಂದ ಅವರನ್ನು ಬಂಧಿಸಿ ಮನೆಗೆ ಕರೆತಂದೆನು, ಆ ಉನ್ಮಾದಾವಸ್ಥೆಯಲ್ಲಿ ಅವ ರಿಂದ ಜನರಿಗೆ ಉಂಟಾದ ನಷ್ಟಕ್ಕೆ ತಕ್ಕ ಪ್ರತಿಕಾರವನ್ನು ಮಾಡುವುದಕ್ಕೂ ಸ್ಕರ ಮನೆಮನೆಗೂ ಅಲೆಯುತಿರುವಷ್ಟರಲ್ಲಿ, ಅವರೂ ಅವರ ಕಿಂಕರನೂ ಬಂಧನವಂ ಬಿಡಿಸಿಕೊಂಡು ಮನೆಯಿಂದ ಓಡಿಬಂದರು. ಅದು ಕಂಡು ಅವ ರಿಬ್ಬರನ್ನೂ ಮರಳಿ ಬಂಧಿಸಿ ಮನೆಗೆ ಕರೆದುಕೊಂಡುಹೋಗಬೇಕೆಂದು ಯತ್ನ ಪಡಲು ಅವರಿಬ್ಬರೂ ಜ್ಞಾನಶೂನ್ಯರಾಗಿ ನಮ್ಮನ್ನು ನೋಡಿದೊಡನೆ ಕತ್ತಿಯಂ ಬಿಚ್ಚಿಕೊಂಡು ಕಡಿಯುವುದಕ್ಕೋಡಿ ಬಂದರು. ಆಗ ನಮಗೆ ಸಹಾಯವಿರಲಿಲ್ಲವಾಗಿ ಮನೆಗೆ ಹೋಗಿ ಜನರನ್ನು ಕರೆದುಕೊಂಡು ಬಂದು ಇಬ್ಬರನ್ನೂ ಹಿಡಿಯುವ ಸನ್ನಾಹ ಮಾಡುತ್ತಿರುವಲ್ಲಿ, ಇಬ್ಬರೂ ಓಡಿಬಂದು ಈ ದೇವಾಲಯದಲ್ಲಿ ಔತುಕೊಂಡಿದ್ದಾರೆ, ನಾವು ಅವರ ಹಿಂಬಾಲಿಸಿ ದೇವಸ್ಥಾನದೊಳಗೆ ಪ್ರವೇಶಿಸಿ ಕರತರಬೇಕೆಂದು ಯತ್ನಿಸಲು, ಅದರ ಯಜಮಾನಿಯಾದ ತಪಸ್ಸಿನಿಯು ಆಲಯದ ಬಾಗಿಲನ್ನು ಮುಚ್ಚಿಸಿ ನಮ್ಮ ನೋಳಗೆ ಹೋಗಕೂಡದೆಂದು ಆಟಂಕಪಡಿಸಿದಳು. ಎಷ್ಟು ವಿನಯಪೂರ್ವಕ ವಾಗಿ ಹೇಳಿಕೊಂಡರೂ ಅವರನ್ನು ಹೊರಗೆ ಬಿಡುವುದಿಲ್ಲ. ನಾನವರನ್ನು ಆ ಸ್ಥಿತಿಯಲ್ಲಿ ಬಿಟ್ಟು ಮನೆಗೆ ಹೋಗಿ ಹೇಗೆ ನಿಶ್ಚಿಂತೆಯಾಗಿರುವುದಕ್ಕಾ ದೀತು ? ಆದುದರಿಂದ ಮಹಾರಾಯನೆ ? ಅವರನ್ನು ಮನೆಗೆ ಕರೆದುಕೊಂಡು ಹೋಗಲು ಅನುಗ್ರಹಿಸಿ ಅಪ್ಪಣೆ ಕೊಡಿಸಿದ ಹೊರತು ತಮ್ಮನ್ನು ಮುಂದಕ್ಕೆ ಹೋಗಗೊಡಿಸಲಾರೆನು ' ಎಂದು ಹೇಳಿ, ಅರಸನ ಕಾಲ್ಗಳಂ ಹಿಡಿದು ಕೆಂಡು ಸಂತತಧಾರೆಯಾಗಿ ಕಂಬನಿ ಸುರಿಸಲಾರಂಭಿಸಿದಳು. ಅದು ನೋಡಿ ಅರಸನು ದಯೆಗೈದು, ಒಬ್ಬ ದೂತನಂ ಕುರಿತು, “ ನೀನು ಹೋಗಿ ದೇವಾ ಅಯದ ಯಜಮಾನಿಯಾದ ತಪಸ್ಸಿನಿಗೆ ನನ್ನ ನಮಸ್ಕಾರವಂ ತಿಳಿಸಿ, 10