೭೫ಳಿ \ \ \# \ 1 # # # # # v 1 1 14 # \ \ \r 1 v/ 4 v + v \ \ \r\ \ \ \AA+ r\ # 17\n ಐದನೆಯ ವರಿಚ್ಛೇದ ನೀವು ಬೇಗನೆ ಓಡಿ ಹೋಗಿರಿ, ಇಲ್ಲಿ ನಿಂತುಕೊಂಡಿರಬೇಡಿರಿ ” ಎಂದು ಹೇಳಿದನು. ಅವಂ ಕೇಳಿ ಚಂದಸ ಭಯ ಭಯಾತಿಶಯದಿಂದ ತರಳಿತ ನಟನೆ ಯಾಗಿ, ನಾಲ್ಕೂ ದಿಕ್ಕುಗಳ೦ ನೋಡಲಾರಂಭಿಸಿದುದಂ ಕಂಡು ಅರಸನು, * ಮಗಳೆ ! ಭಯಪಡಬೇಡ, ನನ್ನ ಕೆಲದೊಳು ಬಂದು ನಿಲ್ಲು ಎಂದು ಹೇಳಿ, ಸೇವಕರನ್ನು ಕರೆದು ಆಕೆಯ ಬಳಿ ಆರನ್ನೂ ಬರಗೊಳಿಸದೆ ಭದ್ರವಾಗಿ ನೋಡಿಕೊಳ್ಳಿರೆಂದು ಆಜ್ಞಾಪಿಸಿದನು. ಚಿರಂಜೀವಿಯು ದೂರದಲ್ಲಿ ಬರುತ್ತಿದ್ದುದು ಕಂಡು ಚಂದ್ರ ಸಭೆ ಯು ಅರಸನು ಕುರಿತು, “ ಮಹಾರಾಜನೆ ! ಇದೇನೋ ಆಶ್ಚರ್ಯವಾಗಿದೆ, ಪರಾಮರಿಸಬೇಕು, ಮೊದಲು ನಾನವರನ್ನು ಚೆನ್ನಾಗಿ ಕಟ್ಟಿ ಮನೆಗೆ ಕಳು ಹಿದ ಕೆಲವು ನಿಮಿಷಗಳಲ್ಲಿಯೇ ಅವರು ಬೀದಿಯಲ್ಲಿ ಓಡಿ ಬಂದರು. ಅಷ್ಟು ಬೇಗನೆ ಬಂಧನವಂ ಬಿಡಿಸಿ ಕೊಂಡು ಬರುವದಸಾಧ್ಯ, ಹಾಗಿದ್ದರೂ ಬಿಡಿಸಿ ಕೊಂಡು ಬಂದು ಈಗಿ: ದೇವಾಲಯದಲ್ಲಿ ಪ್ರವೇಶಿಸಿದರು. ಅದರೊಳಗೆ ಹೋಗುವುದಕ್ಕೂ ಹೊರಗೆ ಬರುವುದಕ್ಕೂ ಒಂದೇ ಬಾಗಿಲು ; ನಾವೆ ರೂ ಬಾಗಿಲ ಮುಂದೆಯೆ ನಿಂತುಕೊಂಡಿದ್ದೇವೆ, ಇಷ್ಟರೊಳಗೆ ನಮ್ಮೊ ಬ್ಬರಿಗೂ ಕಾಣದಂತೆ ಆಲಯದಿಂದ ಹೊರಗೆ ಹೆಗೆ ಹೊರಟುಹೋದರೆ ತಿಳಿಯಲಶಕ್ಯವಾಗಿದೆ. ಮಹಾರಾಜನೆ ? ಮುಖ್ಯವಾಗಿ ಶ್ರುತಪಡಿಸುವುದೇ ನೆಂದರೆ-ಇಂದವರು ಮಾಡುವ ಕೆಲಸಗಳಾವತ್ತೂ ಮನುಷ್ಯಬುದ್ಧಿಯಿಂದರಿ ಯುವುದಕ್ಕೆ ಅಸಾಧ್ಯವಾಗಿದೆ ' ಎಂದು ಹೇಳುತ್ತಿರುವಲ್ಲಿ ಜಯಸ್ಥಳದ ಚಿರಂಜೀವಿಯು ಉನ್ಮತ್ತನಂತೆ ಉಟ್ಟಿದ್ದ ಬಟ್ಟೆಗಳು ಜಾರಿ ಹೋಗುವು ದನ್ನರಿಯದೆ ಓಡಿ ಬಂದ, ಅರಸನ ಮುಂದೆ ನಿಂತು ಅವನನ್ನು ಕುರಿತು, * ಮಹಾರಾಜನೆ ! ಇಂದೆನ್ನನ್ನು ಬಹಳ ತೊಂದರೆ ಪಡಿಸಿರುತ್ತಾರೆ. ಇಂತಹ ಅವಮಾನವನ್ನು ನಾನು ಹಟ್ಟಿದ್ದು ಮೊದಲು ಎಂದೂ ಅನುಭವಿಸಿದವನಲ್ಲ. ಈಗ ನನ್ನ ಹೆಂಡತಿಯಾದಾ ಚಂದ ಸಭೆಯು ಕೇವಲ ಪತಿವತೆಯಂತೆ ತಮ್ಮ ಪಕ್ಕದಲ್ಲಿ ನಿಂತುಕೊಂಡಿದ್ದಾಳೆ. ಆದರೆ ಆಕೆಯಂತಹ ಕೆಟ್ಟ ಹೆಂಗ ಸನ್ನು ನಾನಲ್ಲಿಯೂ ನೋಡಿಲ್ಲ. ಅವಳು ಕೆಲವು ದುಷ್ಟರೊಂದಿಗೆ ಸೇರಿ ಅವರ ದುರ್ಬೋಧನೆಗಳಿಗೊಳಪಟ್ಟು ನನಗೆ ಉಂಟುಮಾಡಿದ ದುರವಸ್ಥೆ 3 ದಿ
ಪುಟ:ಕ್ರಾಂತಿವಿಲಾಸ.djvu/೮೬
ಗೋಚರ