ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಜ್ಞಾಪನೆ »l 11 # ಈ ಗ್ರಂಥದ ಪ್ರಥಮಸಂಸ್ಕರಣವು ಪ್ರಚಾರವಾಗಿ ಅನೇಕ ವರ್ಷಗಳಾ ದುವು, ಕನ್ನಡಭಾಷೆಯಲ್ಲಿ ಈ ವಿಧವಾದ ಗ್ರಂಥವು ಇದೇ ಮೊದಲನೆಯದುದಾಗಿ ಅಂಗೀಕರಿಸಲ್ಪಟ್ಟು ಎಫ್. ಎ. ಪರೀಕ್ಷೆಗೆ ಪಠನೀಯವಾದ ಗ್ರಂಥವಾಗಿ ವಿಶ್ವವಿದ್ಯಾ ಲಯದ ವಿಚಾರಕರ್ತರು ನಿಯಮಿಸಿದರು, ಅದರ ಈಚೆಗೆ ಮೈಸೂರು ಸಂಸ್ಥಾನದ ವಿದ್ಯಾ ಇಲಾಖೆಯ ಇ೯ಸ್ಪೆಕ್ಟರ್ ಜನರಲವರ ಅಪ್ಪಣೆಯ ಮೇರೆ ಟೆಕ್ಸ್ಟ್ ಬುಕ್ ಕಮಿಟಿಯಲ್ಲಿ ವಿದ್ಯಾಲಯಗಳಲ್ಲಿ ಓದತಕ್ಕ ಪುಸ್ತಕವಾಗಿ ಗೊತ್ತು ಮಾಡ ಲ್ಪಟ್ಟಿತು. ಮೊದಲನೆಯ ಸಂಸ್ಕರಣದ ಪ್ರತಿಗಳು ಪೂರೈಸಿಹೋಗಿ ಬೇಕಾದವರಿಗೆ ಪುಸ್ತಕಗಳು ಸಿಕ್ಕುತ್ತಿರಲಿಲ್ಲವಾಗಿದ್ದುದರಿಂದಲೂ, ನಮ್ಮ ಕ್ಷೇಮಚಿಂತಕರು ಮತ್ತೊಂದು ಸಂಸ್ಕರಣವನ್ನು ಮುದ್ರಿಸುವುದು ಆವಶ್ಯಕವೆಂದು ಹೇಳಿದುದರಿಂದಲೂ ಪುಸ್ತಕದಲ್ಲಿದ್ದ ಅಶುದ್ಧಗಳನ್ನು ತಿದ್ದಿ ಪುನಃ ಪ್ರಚಾರಪಡಿಸಿರುವೆನು, ಪಾಠಕಮಹಾ ಶಯರು ಮೊದಲಿನಂತೆ ಇದನ್ನು ಸಾದರದೊಡನೆ ಅಂಗೀಕರಿಸಿ ಸಹಾಯ ಮಾಡು ವರೆಂದು ನಂಬಿರುತ್ತೇನೆ ಮೈಸೂರು, ಬಿ. ವೆಂಕಟಾಚಾರ್ಯ 1899, }