೮೭ \ \ \ # # #
- * * *
+1 hy ಐದನೆಯ ಪುಚ್ಛೇದ ಎಂದುದಂ ಕೇಳಿ ಜಯಸ್ಥಳದ ಕಿಂಕರನು, “ ನೀವು ನನ್ನ ವಶದಲ್ಲಿ ಹಣವಂ ಕೊಟ್ಟು ಕಳುಹಿಸಲಿಲ್ಲ' ಎಂದು ಹೇಳಿದನು. ಹೇಮಕೂಟದ ಚೆರಂ ಜೀವಿಯು, ನಾನು ನನ್ನ ಕಿಂಕರನನ್ನು ಹಡಗು ವಿಚಾರಿಸಿಕೊಂಡು ಬರು ವಂತೆ ಹೇಳಿ ಕಳುಹಿ ಅವನು ಮರಳಿ ಬರುವದನ್ನೆದುರು ನೋಡುತ್ತ ಸತ್ರ ದಲ್ಲಿ ಕುಳಿತುಕೊಂಡಿದ್ದೆನು. ಆಗವನು ಬಂದು ನಾನು ಹೇಳಿಕಳುಹಿದಂತೆ ವರಹಾಗಳ ಚೀಲವನ್ನು ತಂದಿರುವುದಾಗಿ ಅದನ್ನೆನಗೊಪ್ಪಿಸಿದನು. ಅದರ ವಿವರವೇನೂ ನನಗೆ ತಿಳಿಯದೆ ನನ್ನಲ್ಲಿಯೇ ಇಟ್ಟುಕೊಂಡಿದ್ದೇನೆ' ಎಂದು ಹೇಳಿದನು. ಈುತಿಯಾಗಿ ಸಕಲ ಸಂದೇಹಗಳ ನಿವಾರಣೆಯಾದಬಳಿಕ ಜಯಸ್ಥಳದ ಚಿರಂಜೀವಿಯು ಮಹಾರಾಜನನ್ನು ಕುರಿತು, ೯ ಮಹಾರಾಜರೆ! ಇಂದು ಸಾಯಂಕಾಲದೊಳಗೆ ದಂಡನಾದ ವ್ಯನಂ ಕೊಡದಿದ್ದರೆ ನಮ್ಮ ತಂದೆಗೆ ಪಾಲಣದಂಡನೆಯು ವಿಧಿಸಲ್ಪಡುವುದಾಗಿ ಕೇಳುತ್ತೇನೆ. ಅಪ್ಪಣೆಯಾ ದಲೆ ಹಣವನ್ನು ತಂದೊಪ್ಪಿಸುವೆನು ” ಎಂದು ಪ್ರಾರ್ಥಿಸಲು; ಮಹಾರಾಜನು, ೯ ಚಿರಂಜೀವಿ : ಇಂದು ನಿಮ್ಮ ಅಚುಂಬಿತವಾದ ಸಮಾಗಮವನ್ನು ನೋಡಿ ನನಗೆ ಅನಿರ್ವಚನೀಯವಾದ ಸಂತೋಷವುಂಟಾಗಿದೆ : ಆದುದರಿಂದ ನಿಮ್ಮ ತಂದೆಯು ದಂಡನಾದ್ರನ್ಯದಿಂದ ಮನ್ನಿ ಸಲ್ಪಟ್ಟಿದ್ದಾನೆ ಎಂದು ತಿಳಿಸಿ, ನೃತ್ಯನಂ ಕರೆದು ಸೋಮಗುಪ್ತನ ವಧೂವೇಷವನ್ನೂ, ಬಂಧನವನ್ನೂ ತಪ್ಪಿ ಸುವಂತೆ ಆಜ್ಞಾಪಿಸಿದನು. ಈ ಪ್ರಕಾರವೆಲ್ಲವೂ ವ್ಯವಸ್ಥಿತನಾದಬಳಿಕ ಲಾವಣ್ಯಮಯಿಯು ಅಂಜಲಿಬದ್ದೆಯಾಗಿ ಮಹಾರಾಜನ ಸನ್ನಿಧಿಯಲ್ಲಿ ನಿಂತು ಅತಿವಿನಯದಿಂ * ಮಹಾರಾಜನೆ ' ನನ್ನ ಪ್ರಾರ್ಥನೆಯೇನೆಂದರೆ, ಕೃಪೆಗೈದು ಅದಕ್ಕೆ ಅವ ಧಾನವಯ್ಯಬೇಕು. ಇದುವರೆಗೆ ನಾನು ಲೋಕದೊಳಿರುವ ಎಲ್ಲಾ ಹೆಂಗ ಸರಿಗಿಂತ ಮಂದಭಾಗ್ಯಯೆಂದು ಭಾವಿಸಿದ್ದೆನು. ಇಂದು ನಡೆದ ವೃತ್ತಾಂತರ ಳಿಂದ ನಾನು ಅಸದೃಶಸೌಭಾಗ್ಯ ಸಂಪನ್ನೆಯೆಂದು ಭಾವಿಸಲಿಕ್ಕೆ ಕೊರತೆ ಯಿಲ್ಲದ ಕಾರಣಗಳು ಸೃತವಿನ ಹುಟ್ಟಿದುವು. ನಾವು ನಿರ್ವ್ಯಾಜವಾದ ತಮ್ಮ ಕೃಪೆಯಿಂದ ಪೋಷಿಸಲ್ಪಟ್ಟೆವು. ಬಹುಕಾಲದಿಂದಗಲಿ ಪುನಃ ಪಾಪಾರಾಲೇಶವಿಲ್ಲದ ಸ್ಥಿತಿಯಲ್ಲಿದ್ದ ಪತಿ ಪುತ್ರರನ್ನು ಏಕಕಾಲದಲ್ಲಿ ಹೊಂದಿದರಿಂದುಂಟಾದ ಸಂತೋಷವು ನನ್ನ ಹೃದಯದೊಳು ತುಂಬಿ ತುಳು