ಪುಟ:ಕ್ರಾಂತಿ ಕಲ್ಯಾಣ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xi

ಪ್ರಮುಖ ಪಾತ್ರಗಳು


(ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಅನುಕ್ರಮದಲ್ಲಿ)


ನಾರಣಕ್ರಮಿತ- ರಾಜಪುರೋಹಿತ, ಬಿಜ್ಜಳನ ಧರ್ಮಾಧಿಕರಣದ ಮುಖ್ಯಾಧಿಕಾರಿ.

ಅಗ್ಗಳ- ಪಂಡಿತಕವಿ, ಚಾಲುಕ್ಯರಾಣಿ ಕಾಮೇಶ್ವರಿಯ ಮನೆಹೆಗ್ಗಡೆ.

ಬಿಜ್ಜಳ- ಮಂಗಳವೇಡೆಯ ಮಹಾಮಂಡಲೇಶ್ವರ, ಚಾಲುಕ್ಯರಾಜ್ಯದ ಸರ್ವಾಧಿಕಾರಿ.

ಕರ್ಣದೇವ- ಬಿಜ್ಜಳನ ಸಹೋದರ; 'ರಾಜಗೃಹ'ದ ರಕ್ಷಕ.

ಜಗದೇಕಮಲ್ಲ- ಬಿಜ್ಜಳನು 'ರಾಜಗೃಹ'ದಲ್ಲಿ ಬಂಧನದಲ್ಲಿಟ್ಟಿರುವ ಚಾಲುಕ್ಯ ಅರಸು. ದಿವಂಗತ ನೂರ್ಮಡಿ ತೈಲಪನ ಸಹೋದರ.

ಬೊಮ್ಮರಸ- ಚಾಲುಕ್ಯರಾಣಿ ಕಾಮೇಶ್ವರಿಯ ಪ್ರತಿನಿಧಿಯಾಗಿ ಚಾಲುಕ್ಯ ರಾಜತ್ವದ ಪುನಃಪ್ರತಿಷ್ಠೆಗಾಗಿ ಸಂಚು ನಡೆಸುತ್ತಿರುವ ಸಾಮಂತ

ಬ್ರಹ್ಮಶಿವ ಪಂಡಿತ- ಬೊಮ್ಮರಸನ ಕಾರ್ಯದರ್ಶಿ.

ಮಾಚಿದೇವ- ವೃದ್ಧ ಶರಣ.

ಚೆನ್ನಬಸವ- ಬಸವೇಶ್ವರನ ಸೋದರಳಿಯ. ಪ್ರಸ್ತುತದಲ್ಲಿ ಅನುಭವಮಂಟಪದ ಮುಖ್ಯ ಕಾರ್ಯದರ್ಶಿ.

ಸಕಲೇಶಮಾದರಸ, ಅನುಭವಮಂಟಪದ ಅಧ್ಯಕ್ಷ.

ಮಂಚಣ- ಬಿಜ್ಜಳನ ವೃದ್ಧ ಮಂತ್ರಿ

ನಾಗಲಾಂಬೆ- ಚೆನ್ನಬಸವನ ತಾಯಿ. ಬಸವೇಶ್ವರನ ಅಕ್ಕ.

ನೀಲಲೋಚನೆ- ಬಿಜ್ಜಳನ ಸಹೋದರಿ. ಬಸವೇಶ್ವರನ ಪತ್ನಿ.

ಸಂಗಮನಾಥ- ಬಸವೇಶ್ವರನಿಗೆ ಗಂಗಾಂಬಿಕೆಯಲ್ಲಿ ಹುಟ್ಟಿದ ಮಗ.

ಕಾಮೇಶ್ವರಿ- ನೂರ್ಮಡಿ ತೈಲಪನ ವಿಧವಾರಾಣಿ.

ಪ್ರೇಮಾರ್ಣವ- ಕಾಮೇಶ್ವರಿಯ ಕ್ಷೇತ್ರಜ ಪುತ್ರ.

ಸೋಮೇಶ್ವರ- ಬಿಜ್ಜಳನ ಹಿರಿಯ ಮಗ.

ಉಷಾವತಿ- ಕಾಮೇಶ್ವರಿಯ ಆಪ್ತ ದಾಸಿ.

ಮಧುವರಸ- ಬಿಜ್ಜಳನ ಮಂತ್ರಿ.