ಪುಟ:ಕ್ರಾಂತಿ ಕಲ್ಯಾಣ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೦

ಕ್ರಾಂತಿ ಕಲ್ಯಾಣ

ಸಮಾನಭಾವದಿಂದ ಸೇವಿಸುವುದು ತಮ್ಮಂತಹ ಮಕುಟಾಭಿಷಿಕ್ತ ಮಹಾಪ್ರಭುಗಳಿಗೆ ಸಮುಚಿತವಾದ ವರ್ತನೆ. ಈ ಮೂರರಲ್ಲಿ ಒಂದನ್ನು ಮಾತ್ರ ಆಸಕ್ತಿಯಿಂದ ಆಶ್ರಯಿಸುವ ಮಾನವನು ನಿಂದಾರ್ಹನಾಗುತ್ತಾನೆ. ಎರಡರಲ್ಲಿ ನಿರತನಾದವನು ಮಧ್ಯಮ. ತ್ರಿವರ್ಗಗಳ ಯಾವಾಗಲೂ ಶ್ರದ್ದೆಯಿಂದ ಸೇವಿಸುವವನು ಉತ್ತಮ.

"ಶಿಷ್ಟರು ಅನುಮೋದಿಸುವ ಈ ಮಾರ್ಗವನ್ನು ಪ್ರಭುಗಳು ಅನುಸರಿಸುತ್ತಿರುವುದು ಚಾಲುಕ್ಯರಾಜ್ಯದ ಪ್ರಜೆಗಳಿಗೆ ಸಮಾಧಾನವನ್ನುಂಟುಮಾಡಿದೆ. ಪ್ರಭುಗಳ ಗಣಿಕಾ ಪರಿವಾರದಂತೆ ಶೌರ್ಯ ದಾನಗಳ ಕೀರ್ತಿಯೂ ಜನರಲ್ಲಿ ಹರಡಿದೆ. ಉತ್ಸಾಹಶಾಲಿಯೂ ಮಿತವಾಗಿ ಮಾತಾಡುವವನೂ, ಕಾರ್ಯಚತುರನೂ, ಪಾನದ್ಯೋತ ಮೃಗಯಾದಿ ವ್ಯಸನಗಳಿಲ್ಲದಿರುವವನೂ, ಶೂರನೂ ಕೃತಜ್ಞನೂ ಆದ ಅರಸನನ್ನು ರಾಜ್ಯಲಕ್ಷ್ಮಿ ತಾನಾಗಿಯೇ ಆಶ್ರಯಿಸುವಳು. ಪ್ರಭುದೇವರು ತಮ್ಮೊಂದು ವಚನದಲ್ಲಿ ಈ ಅರ್ಥವನ್ನೇ ಇನ್ನೊಂದು ಬಗೆಯಾಗಿ ಹೇಳಿದ್ದಾರೆ:

ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬವ ವ್ರತಗೇಡಿ,
ವಿಷ್ಣುವೆಂಬವ ಸತ್ತುಬಿದ್ದ, ರುದ್ರನೆಂಬವ ಅಬದ್ಧ ಅವಿಚಾರಿ,
ಎಲ್ಲರ ಕೊಂದಕೊಲೆ ನಿಮ್ಮ ತಾಗುವುದು, ಗುಹೇಶ್ವರಾ?

-ಎಂದು ಪಠಿಸಿ ಗಂಭೀರವಾಗಿ ಮುಗಿಸಿದನು

ಅನುಭವಮಂಟಪದಲ್ಲಿ ನಡೆಯುವ ಪ್ರವಚನಗಳನ್ನು ಮನೆಹೆಗ್ಗಡೆ ಒಂದೆರಡು ಸಾರಿ ಕೇಳಿದ್ದನು. ರಾಜಗೃಹಕ್ಕೆ ಬಂದ ಧರ್ಮೋಪದೇಶೀ ಜಂಗಮನು ಆ ಸರಣಿಯಲ್ಲಿಯೇ ಪ್ರಾರಂಭಿಸಿದ್ದನ್ನು ಕೇಳಿ ಅವನಿಗೆ ಸಮಾಧಾನವಾಯಿತು; ಗಣಿಕಾವಾಸವನ್ನು ಕುರಿತ ಪ್ರಶಂಸೆಯ ನುಡಿ ಹಿತವಾಗಿ ಕಂಡಿತು.

ಜಗದೇಕಮಲ್ಲನು ಹಾಗೆ ಭಾವಿಸಲಿಲ್ಲ. ಜಂಗಮದೇವನ ಪ್ರವಚನ, ರಾಜಗೃಹಕ್ಕೆ ನಿಷಿದ್ಧವಾದ ರಾಜಕೀಯದ ಮಾರ್ಗ ಹಿಡಿಯುತ್ತಿದೆಯೆಂದೂ, ಇದರಿಂದ ಧರ್ಮೋಪದೇಶಕನನ್ನು ಕರೆಸಿಕೊಂಡ ತನ್ನ ಉದ್ದೇಶಕ್ಕೆ ಭಂಗಬರಬಹುದೆಂದೂ ಅವನು ಭಾವಿಸಿದನು. ವಚನವನ್ನು ಪಠಿಸುವಾಗ "ಬ್ರಹ್ಮ ಬ್ರಹ್ಮ" ಎಂದು ಎರಡುಸಾರಿ ಒತ್ತಿ ಹೇಳಿದುದನ್ನು ಅವನು ಗಮನಿಸಿದ್ದನು. 'ಆ ಹೆಸರಿನ ನನ್ನ ಪರಿಚಿತರು ಯಾರಿದ್ದಾರೆ?' ಎಂದು ಅವನ ಬುದ್ಧಿಜ್ವಾಲೆ ನೆನಪಿನ ಕೋಣೆ ಕೋಣೆಗಳನ್ನೂ ಅರಸುತ್ತಿತ್ತು. ಪ್ರಕಟವಾಗಿ ಅವನು,

"ಗುರುದೇವರು ಮನ್ನಿಸಬೇಕು, ಅರ್ಥಕಾಮಗಳಲ್ಲಿ ನನಗೆ ಆಸಕ್ತಿಯಿಲ್ಲ.