ಪುಟ:ಕ್ರಾಂತಿ ಕಲ್ಯಾಣ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೪

ಕ್ರಾಂತಿ ಕಲ್ಯಾಣ

ಬಿಡುವಿಲ್ಲ. ನೀವು ನನ್ನ ಪ್ರತಿನಿಧಿಯಾಗಿ ಪ್ರವಚನ ನಡೆಯುವಾಗ ಎದುರಿಗಿದ್ದು ಏನು ನಡೆಯುತ್ತದೆ ಎಂಬುದನ್ನು ಪ್ರತಿದಿನ ನನಗೆ ವರದಿ ಮಾಡಬೇಕು. ಈ ಕಾರ್ಯ ನಿಮ್ಮಿಂದಾಗುವುದೆ?"

ತುಟಿ ಮೀರಿ ಬರುತ್ತಿದ್ದ ನಗುವನ್ನು ಕಷ್ಟದಿಂದ ತಡೆದು ಬ್ರಹ್ಮಶಿವನೆಂದನು: " ನೀವು ನನ್ನಲ್ಲಿ ಇಷ್ಟೊಂದು ವಿಶ್ವಾಸವಿಟ್ಟಿರುವಾಗ ನಿರಾಕರಿಸಲೆ? ಸಂತೋಷದಿಂದ ಮಾಡುತ್ತೇನೆ. ನಾನು ಯಾವ ವಿಚಾರಗಳನ್ನು ಕುರಿತು ವರದಿ ಮಾಡಬೇಕು ಎಂಬುದನ್ನು ತಿಳಿಸಿದರೆ ಸಾಕು."

ಹೆಗ್ಗಡೆ ಹೇಳಿದನು: "ಜಗದೇಕಮಲ್ಲರಸರು ಚಾಲುಕ್ಯ ಚಕ್ರೇಶ್ವರರಾದರೂ ಸದ್ಯದಲ್ಲಿ ರಾಜಬಂಧಿ. ಸರ್ವಾಧಿಕಾರಿ ಬಿಜ್ಜಳರಾಯರು ಅವರನ್ನು ಈ ಅರಮನೆಯಲ್ಲಿ ಗೃಹಬಂಧನದಲ್ಲಿಟ್ಟಿದ್ದಾರೆ. ಈ ವಿಚಾರ ನಿಮಗೆ ತಿಳಿದಿರಬೇಕಲ್ಲವೆ?"

"ನಮಗೆ ಇದೊಂದೂ ತಿಳಿಯದು. ಕೆಲವು ವಾರಗಳ ಹಿಂದೆ ನಾವು ಶ್ರೀಶೈಲದ ಯಾತ್ರೆ ಮುಗಿಸಿಕೊಂಡು ಕಲ್ಯಾಣಕ್ಕೆ ಬಂದೆವು."

"ಈ ಗಣಿಕಾ ಪರಿವಾರ, ಕಾವ್ಯೋಪದೇಶಕ ಧರ್ಮೋಪದೇಶಗಳು, ಬಂಧನದಲ್ಲಿ ಪ್ರಭುಗಳ ಬೇಸರ ಕಳೆಯಲು ಬಿಜ್ಜಳರಾಯರು ಏರ್ಪಡಿಸಿರುವ ವಿನೋದಗಳು. ರಾಜಗೃಹದ ರಕ್ಷಣೆಗಾಗಿ ಕರ್ಣದೇವರಸರ ಮೇಲ್ವಿಚಾರಣೆಯಲ್ಲಿ ಒಂದು ದೊಡ್ಡ ಸೈನ್ಯವೇ ಇರುತ್ತದೆ"

"ಇಲ್ಲಿಯ ಮಾತುಕಥೆ ವ್ಯವಹಾರಗಳನ್ನು ನೋಡಿದರೆ ಅದನ್ನು ನಂಬುವಂತೆಯೂ ಇಲ್ಲ, ಹೆಗ್ಗಡೆಗಳೆ. ನಿಮ್ಮ ಗಣಿಕಾಪರಿವಾರ ಗುರುಗಳ ದರ್ಶನಕ್ಕಾಗಿ ಬಂದಾಗ ನಾನು ಅವಾಕ್ಕಾಗಿ ನೋಡುತ್ತಿದ್ದೆ" -ನೋಟದಲ್ಲಿ, ದನಿಯಲ್ಲಿ, ಆಶ್ಚರ್ಯದ ಹೊಲುಬು ಮರೆಸಿ ಬ್ರಹ್ಮಶಿವನೆಂದನು.

"ನೀವು ಜಗತ್ತಿನ ಅನುಭವವಿಲ್ಲದ ಜಂಗಮರು, ಹರೀಶರುದ್ರಯ್ಯನವರೆ. ಈ ವಿಚಾರಗಳು ಹೇಗೆ ತಿಳಿಯಬೇಕು ನಿಮಗೆ? ಬಿಜ್ಜಳರಾಯರು ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಅರಮನೆ ಸೆರೆಮನೆಯಾಗುವುದು, ರಾಜನು ಬಂಧಿಯಾಗುವನು!"

-ಎಂದು ಹೆಗ್ಗಡೆ ದೀರ್ಘವಾಗಿ ಉಸಿರೆಳೆದು ಕಂಚ ಹೊತ್ತು ಮೌನವಾಗಿ ಕುಳಿತಿದ್ದು ಬಳಿಕ,

"ಜಗದೇಕಮಲ್ಲರಸರು ಅರಮನೆಯಿಂದ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು ಬಿಚ್ಚುಕತ್ತಿಯ ಭಟರಿದ್ದಾರೆ. ಸೆರೆಮನೆಯಂತೆ ಸುತ್ತ ರಾವುತರ ಕಾವಲಿದೆ. ಆ ವಿಚಾರ ನಾವು ಯೋಚಿಸಬೇಕಾಗಿಲ್ಲ. ರಾಜಬಂಧಿ ಹೊರಗಿನವರೊಡನೆ