ಪುಟ:ಕ್ರಾಂತಿ ಕಲ್ಯಾಣ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

೩೧೬

ಕ್ರಾಂತಿ ಕಲ್ಯಾಣ


ಪ್ರಮುಖ ಸಾಮಂತರು ನಾಗರಿಕರು, ಅದರ ಹಿಂದೆ ಕಲಚೂರ್ಯ ವಂಶೀಯ
ಸಾಮಂತ ಪರಿವಾರದವರು ಹತ್ತಿದ್ದ ಚಿನ್ನದ ಕಲಶಗಳಿಂದ ಕೂಡಿದ ಬೆಳ್ಳಿಯ
ಅಂದಣ. ಅದನ್ನು ಹೊತ್ತವರಲ್ಲಿ ಸೋಮೇಶ್ವರನೂ ಇರುವುದನ್ನು ಕಂಡು ಜನರು
ಹರ್ಷಧ್ವನಿ ಮಾಡಿದರು.
ಅಂದಣದಲ್ಲಿ ಚಾಲುಕ್ಯರಾಣಿ ಕಾಮೇಶ್ವರಿಯೂ ಅವಳ ಆರು ವರ್ಷದ
ಪುತ್ರ ಪ್ರೇಮಾರ್ಣವನೂ ಕುಳಿತಿದ್ದರು. ಕಾಮೇಶ್ವರಿ ತಿಳಿ ನೀಲಿ ಬಣ್ಣದ ಬಹುಮೂಲ್ಯದ
ರೇಷ್ಮೆಯ ಸೀರೆಯುಟ್ಟಿದ್ದಳು. ಚಿನ್ನದ ಎಳೆಗಳಿಂದ ಅದರಲ್ಲಿ ಹೆಣೆದಿದ್ದ ಹೂವುಗಳು
ಮೇಘಮಧ್ಯದ ನಕ್ಷತ್ರ ಮಾಲಿಕೆಯಂತೆ ಬೆಳಗುತ್ತಿದ್ದವು. ಅವಳು ತೊಟ್ಟಿದ್ದ ರತ್ನ
ಕಂಚುಕ, ಎದೆಯ ವಿಸ್ತಾರ ಔನ್ನತ್ಯಗಳಿಗೆ ಮಣಿಖಚಿತವಾದ ಚಿನ್ನದ ಚೌಕಟ್ಟು
ಹಾಕಿದಂತಿತ್ತು. ಕತ್ತಲನ್ನು ಸೆರೆಹಿಡಿದಂತೆ ಕೇಶರಾಶಿಯನ್ನು ಕುಂಡಲಾಕಾರವಾಗಿ
ಕಟ್ಟಿ ಮೇಲೆ ವಜ್ರ ಕೆತ್ತಿದ ಚಂದ್ರಮಡಿಯನ್ನು ಧರಿಸಿದ್ದಳು ಅವಳು. ತಿದ್ದಿ ಗೆರೆ ತೆಗೆದ
ರಂಗಾದ ತುಟಿ, ಕಸ್ತೂರಿಯ ಕಜ್ಜಳದಿಂದ ಕೆನ್ನೆಗಳ ಮೇಲೆ ಬರೆದ ಬೆಡಗಿನ
ತಿಲಕಗಳು. ಪ್ರೌಢವಯಸ್ಕಳಾದ ಅವಳಿಗೆ ಯೌವನಾವಿರ್ಭಾವದ ಹೊಸ ಚಲುವನ್ನು
ಕೊಟ್ಟಿತ್ತು. ಅವಳು ಕೈಯಲ್ಲಿ ಹಿಡಿದಿದ್ದ ಅರೆಬಿರಿದ ತಾವರೆಯ ಕೆಂಪು, ಕೊರಳ
ಮುತ್ತಿನ ಹಾರದಲ್ಲಿ ಪ್ರತಿಬಿಂಬಿಸಿ ಅಣಿಮುತ್ತುಗಳನ್ನು ಕೆಂಪುಮಣಿಗಳನ್ನಾಗಿ
ಮಾಡಿದ್ದುವು.
ಪ್ರೇಮಾರ್ಣವನು ಕುಸುರಿ ಕೆಲಸದ ನೀಲಿಯ ಚಲ್ಲಣ ಕೆಂಪು ಬಣ್ಣದ ಕ
ಸೆಯಂಗಿಗಳನ್ನು ತೊಟ್ಟಿದ್ದನು. ಕೊರಳ ರತ್ನಕಂಠಿಕೆ ಕಿವಿಯ ಕಡಕುಗಳು.
ತೋಳುಗಳಿಗೆ ಕಟ್ಟಿದ್ದ ಬಿರುದು ಪಟ್ಟಗಳು, ಮಣಿಖಚಿತವಾದ ನಡುಕಟ್ಟು, ಅವನ
ಸೌಮ್ಯಮುಖದ ಚಲುವಿಕೆಯನ್ನು ಎತ್ತಿ ತೋರುತ್ತಿದ್ದವು.
ರಾಣಿಯನ್ನು ಕಂಡು ಜನರು, “ಉಫೇ ! ಉಘ ! ಚಾಲುಕ್ಯರಾಣಿ
ಕಾಮೇಶ್ವರಿ ” ಎಂದು ಜಯಘೋಷ ಮಾಡಿದರು. ಅಂದಣ ಮುಂದೆ ಹೋಗುತ್ತಿದ್ದಂತೆ
ಕಾಮೇಶ್ವರಿ ಕೈಮುಗಿದು ಜನರನ್ನು ವಂದಿಸುತ್ತಿದ್ದಳು.
ಅಂದಣದ ಹಿಂದೆ ಮತ್ತೆ ಸುಮಂಗಲಿಯರ ಸಾಲು, ಸಾಮಂತ ನಾಗರಿಕರ
ಪರಿವಾರ, ರಕ್ಷಕ ರಾಹುತರ ಇನ್ನೊಂದು ದಳ, ಈ ರೀತಿ ಮೆರವಣಿಗೆ ಕೊನೆಗೊಂಡಿತ್ತು.
ಕಾಮೇಶ್ವರಿಯೊಡನೆ ಬಂದಿದ್ದ ದಾಸ ದಾಸಿಯರು, ಊಳಿಗದವರು ಸಾಮಾನು
ಸರಂಜಾಮು ತುಂಬಿದ ರಥಗಳು ಗಾಡಿಗಳು ಬೇರೆ ಮಾರ್ಗವಾಗಿ ಈ ಮೊದಲೆ
ಬಿಡಾರ ಸೇರಿದ್ದವು.
ಶೆಟ್ಟ ಮತ್ತು ರಂಗಣ್ಣ ಈ ವೈಭವವನ್ನು ನೋಡುತ್ತಿದ್ದಂತೆ ಉದ್ಯಾನದ