ಪುಟ:ಕ್ರಾಂತಿ ಕಲ್ಯಾಣ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೨೯

“ರಾಜಪುರೋಹಿತ ನಾರಣಕ್ರಮಿತನ ಫಲಭರಿತವಾದ ತಲೆಯಲ್ಲಿ ಜನ್ನ ತಳೆದ ಕರುಣೆಯ ಶಿಶು ಈ 'ಮಹಾವ್ರತ'. ಅಂತೆಯೇ ಅದರಲ್ಲಿ ಕ್ರಮಿತ ಬಂಧುಗಳಿಗೆ ಪ್ರಮುಖಪಾತ್ರ ಅಧಿಕಸಂಭಾವನೆ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಅವರು ಬೇಡಿತಂದ ಭಿಕ್ಷಾನ್ನವನ್ನು ಕುಂತೀದೇವಿ ಎರಡು ಭಾಗಗಳಾಗಿ ಮಾಡಿ ಒಂದು ಭಾಗವನ್ನು ಭೀಮಸೇನನಿಗೆ ಕೊಟ್ಟು ಇನ್ನೊಂದನ್ನು ತಾನೂ ಉಳಿದ ನಾಲ್ವರು ಮಕ್ಕಳೂ ಹಂಚಿಕೊಳ್ಳುತ್ತಿದ್ದರೆಂದು ಮಹಾಭಾರತ ಹೇಳುತ್ತದೆ.

“ಅದರಂತೆ ನಾರಣಕ್ರಮಿತರು ಮಹಾವ್ರತಕ್ಕೆ ಮೀಸಲಾಗಿದ್ದ ಹಣದಲ್ಲಿ ಅರ್ಧವನ್ನು ತಮ್ಮ ಬಂಧುವರ್ಗಕ್ಕೂ, ಉಳಿದರ್ಧವನ್ನು ಮಂಗಳವೇಡೆಯ ವಿಪ್ರೋತ್ತಮರಿಗೂ ಹಂಚಿದರು. ಕ್ರಮಿತರ ಈ ಉದಾರತೆ ರಾಜ್ಯದ ಉಳಿದ ಅಧಿಕಾರಿ ನಿಯುಕ್ತರಿಗೆ ಆದರ್ಶವೇ? ಎಂದು ಕುಹಕಿಗಳು ಪ್ರಶ್ನಿಸಿದುದುಂಟು.

“ಮಹಾವ್ರತ ಹಾಸ್ಯರೂಪಕದಲ್ಲಿ ಭಾಗವಹಿಸಿದ್ದವರ ಹೆಸರುಗಳಿವು : ಮುರಾರಿ, ಪದ್ಮನಾಭ, ಜಲಶಯನ, ಅಚ್ಯುತ-ಈ ನಾಲ್ವರು ಕ್ರಮಿತ ಬಂಧುಗಳು. ಪ್ರಭುಗಳು ದಯಮಾಡಿ ಈ ಹೆಸರುಗಳ ಕೊನೆಯಲ್ಲಿ ಕ್ರಮಿತ ಎಂಬ ಉಪನಾಮವನ್ನು ಸೇರಿಸಿ ಓದಿಕೊಳ್ಳಬೇಕಾಗಿ ವಿನಂತಿ.

“ಕೃಷ್ಣಪೆದ್ದಿ, ಕೇಶವ ಫೈಸ, ಗೋವಿಂದ ಪಂಡಿತ, ದಶಾವತಾರ ಭಟ್ಟ, ಕಮಲಾಕ್ಷತ್ರಿಪಾಠಿ, ಸತ್ಯಪಾಲ ತೀರ್ಥ, ವಿಶ್ವಬಂಧು ಭಾರವಿ, ಉಪೇಂದ್ರಮಾಘ,-ಇವರು ಮಂಗಳವೇಡೆಯ ವಿಪ್ರೋತ್ತಮರು.

ಮೊದಲಪಟ್ಟಿಯ ನಾಲ್ವರಿಗೆ ಎರಡನೆಯ ಪಟ್ಟಿಯ ಎಂಟು ಜನರು ಸಮತೂಕವೇ? ಎಂದು ಯಾರೂ ಪ್ರಶ್ನಿಸುವಂತಿಲ್ಲ. ಕೃಷ್ಣತುಲಾಭಾರದಲ್ಲಿ ಭಾಮೆಯ ಒಡವೆ ವಸ್ತುಗಳಿಗಿಂತ ಕೃಷ್ಣನ ತೂಕ ಹೆಚ್ಚಾದಾಗ ದೇವರ್ಷಿ ನಾರದನು ತುಲಸೀದಳವೊಂದನ್ನು ಒಡವೆಗಳ ಮೇಲಿಟ್ಟು ಸರಿದೂಗಿಸಿದನಂತೆ. ರಾಜಪುರೋಹಿತ ನಾರಣಕ್ರಮಿತರೂ ಅಂತಹ ಪ್ರಭಾವಶಾಲಿಗಳು. ಅವರ ಹಂಚಿಕೆಯ ಬಗೆಗೆ ಯಾರಾದರೂ ಪ್ರಶ್ನಿಸಿದರೆ ಕಣ್ಣುಗಳ ಕಿಡಿ ಹಾರಿಸಿ, ಪ್ರಶ್ನಿಸಿದವರ ಬಾಯಿ ಮುಚ್ಚಿಸುವ ಶಕ್ತಿಯಿದೆ ಅವರಿಗೆ.

“ವಿಭಿನ್ನ ಅಭಿರುಚಿಯ ಎಲ್ಲ ಬಗೆಯ ಜನರ ಸಮಾರಾಧನೆಗಾಗಿ ಅಭಿನಯಿಸಿದ ಲಘುಹಾಸ್ಯರೂಪಕ 'ಮಹಾವ್ರತ'. ಅಗ್ರಯನ ಇಂದ್ರ ಯಜ್ಞಗಳಂತೆ ಹೋತೃ, ಅಧ್ವರ್ಯ, ಉದ್ಗಾತೃ, ಪ್ರಸ್ತೋತೃ, ಬ್ರಹ್ಮ ಮತ್ತು ಬ್ರಾಹ್ಮಣಾಶಂಸಿ ಎಂಬ ಆರು ಜನ ಋತ್ವಿಕ್ಕುಗಳೂ, ಅವರ ಆರುಜನ ಸಹಾಯಕರು ಮತ್ತು ಅವರ ಪತ್ನೀಪುತ್ರಿಯರ ತಂಡ, ಇವರು ಈ ಹಾಸ್ಯರೂಪಕದ ಸೂತ್ರಧಾರರು. ತೆರೆ