ಪುಟ:ಕ್ರಾಂತಿ ಕಲ್ಯಾಣ.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೩೯


ತಮ್ಮ ತಮ್ಮ ಹಾಸಂಗಿಗಳ ಸುತ್ತ ಹೋಗಿ ಕುಳಿತರು.

ಕಾಮೇಶ್ವರಿ ತಲೆಯೆತ್ತಿ ನೋಡಿ, ಕ್ರಮಿತನ ಕಡೆ ತಿರುಗಿ, “ನಮ್ಮ ಪ್ರೇಕ್ಷಕವರ್ಗ ರಾಜಪುರೋಹಿತರ ಕಿಡಿಗಣ್ಣ ಕಾಂತಿಯೆದುರಿಗೆ ಸೂರ್ಯನೆದುರಿನ ಮಂಜಿನಂತೆ ಕರಗಿಹೋಯಿತು !” ಎಂದಳು.

“ಇಲ್ಲಿ ರಹಸ್ಯವೇನೂ ನಡೆಯುತ್ತಿಲ್ಲ. ಆಟ ಮುಗಿದವರು ಬಂದು ನೋಡಬಹುದು. ಇದನ್ನು ಅವರಿಗೆ ತಿಳಿಸಿ, ಸಭಿಕರೆ,” ಎಂದು ಬಿಜ್ಜಳನು ಹೇಳಿದನು.

ಸಲಹೆಯಂತೆ ಕ್ರಮಿತನು ಸಭಾಂಗಣದ ಸುತ್ತ ತಿರುಗಾಡಿ ಬಂದನು. ಆದರೆ ಅವನ ಆಹ್ವಾನವನ್ನು ಮನ್ನಿಸಿ ಎರಡನೆಯ ಸಾರಿ ನೋಡಲು ಬಂದವರು ನಾಲ್ಕು ಮಂದಿ ವೃದ್ದ ಸಾಮಂತರು ಮಾತ್ರ.

ಎಲ್ಲರೂ ಕುಳಿತುಕೊಂಡ ಮೇಲೆ ಬಿಜ್ಜಳನು, “ಈಗ ರಾಣಿಯವರ ಇಚ್ಚೆಯೇನು ? ಆಟ ಮುಗಿಸುವುದೇ ? ಅಥವಾ ನಾವಿಬ್ಬರೇ ಆಡುವುದೇ?” ಎಂದನು. ಕಾಮೇಶ್ವರಿ ತೊಡಕಿನಲ್ಲಿ ಬಿದ್ದಳು. ಬಾಗಿಲ ಕಡೆ ನೋಡಿದಳು. ಅಗ್ಗಳನ ಸುಳಿವಿಲ್ಲ. ಅವನು ಬರುವವರೆಗೆ ಕಾಯುವುದು ಅಗತ್ಯ.

“ಪಗಡೆ ಹೆಂಗಸರ ಆಟವೆಂದು ಅಲ್ಲಗಳೆದಿರಲ್ಲವೆ ? ದಾಳ ಸೊಲಿಗೆಗಳನ್ನು ತರಿಸಿರಿ. ನಾನು ಲೆತ್ತವಾಡಲೂ ಸಿದ್ದ,” ಎಂದಳು ಅವಳು.

ಮಂದಾಸನದಲ್ಲಿ ಪೂಜೆಗಾಗಿ ಇಟ್ಟಿದ್ದ ಚಿನ್ನದ ಸಂಪುಟವೊಂದನ್ನು ಕ್ರಮಿತನು ತಂದುಕೊಟ್ಟು “ರಾಜಮಹಾರಾಜರ ಆಟಕ್ಕೆ ಯೋಗ್ಯವಾದ ದಾಳಗಳಿವು. ದೇವತೆಗಳ ದ್ಯೂತಸಭೆಯಲ್ಲಿಯೂ ಇಂತಹ ದಾಳ ಸೊಲಿಗೆಗಳಿರುವುದಿಲ್ಲ,” ಎಂದನು.

ಚತುರ ಅಕ್ಕಸಾಲೆಯ ಕಲಾತ್ಮಕ ಕೃತಿಗಳಾಗಿದ್ದವು ಆ ಸಂಪುಟ ಮತ್ತು ದಾಳಗಳು. ದಾಳದ ಆರು ಮುಖಗಳಲ್ಲಿ ಸಂಖ್ಯೆ ಗುರುತಿಗಾಗಿ ಕೆಂಪು ಹರಳುಗಳನ್ನು ಜೋಡಿಸಲಾಗಿತ್ತು. ಸಂಪುಟದ ಸುತ್ತ ಸಮುದ್ರ ಮಥನದ ರೇಖಾಚಿತ್ರ. ಮುಚ್ಚಳ ತೆಗೆದು ಸಂಪುಟವನ್ನು ದಾಳದ ಬಟ್ಟಲಾಗಿ ಉಪಯೋಗಿಸಬಹುದಾಗಿತ್ತು.

ದಾಳ ಸಂಪುಟಗಳನ್ನು ತೆಗೆದುಕೊಂಡು ನೋಡುತ್ತ ಕಾಮೇಶ್ವರಿ, “ಇದು ವಿಕ್ರಮಾಂಕ ಮಹಾರಾಜರ ಕಾಲದ ಕಲಾಕೃತಿ. ನಿಮಗೆ ದೊರಕಿದ್ದು ಹೇಗೆ ?” ಎಂದಳು.

ಕ್ರಮಿತನು ಉತ್ತರ ಕೊಡದಿದ್ದುದನ್ನು ಕಂಡು ಬಿಜ್ಜಳನು, “ರಾಣಿಯವರ ಪ್ರಶ್ನೆಗೆ ನಾನು ಉತ್ತರ ಹೇಳುತ್ತೇನೆ. ವಿಕ್ರಮಾಂಕ ಮಹಾರಾಜರ ನಿಧಿಗಾಗಿ ನಾವು ಸಂಶೋಧನೆ ನಡೆಸಿದಾಗ ಮಾನವಾಕಾರದ ಒಂದು ಲಕ್ಷ್ಮೀಪ್ರತಿಮೆಯೂ, ಈ