ಪುಟ:ಕ್ರಾಂತಿ ಕಲ್ಯಾಣ.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೪೮

ಕ್ರಾಂತಿ ಕಲ್ಯಾಣ


ತಿರುಗಿ, ಅವಳು, “ನಮ್ಮ ಮನೆಹೆಗ್ಗಡೆ ಅಗ್ಗಳದೇವರನ್ನು ಕಂಡಿರಾ?” ಎಂದು ಕೇಳಿದಳು.

“ನೀವು ಪಗಡೆಯಾಡುತ್ತಿದ್ದಾಗ ಕರ್ಣದೇವರಸರೊಡನೆ ಹೊರಗೆ ಹೋದವರು ಹಿಂದಿರುಗಿದಂತಿಲ್ಲ. -ಎಂದು ಕ್ರಮಿತನು ಉತ್ತರಿಸಿದನು.

“ಅಗ್ಗಳ-ಕರ್ಣದೇವ, -ಇಬ್ಬರೂ ಎಲ್ಲಿಗೆ ಹೋದರು ?”
"ಅಡಿಗಡಿಗೆ ತನ್ನನ್ನು ತಾನೇ ಕೇಳಿಕೊಂಡಳು ಕಾಮೇಶ್ವರಿ.

ಸಭಾಂಗಣದ ಹಿಂದೆ ಅರಮನೆಯ ಇನ್ನೊಂದು ಭಾಗದಲ್ಲಿ, ಅತಿಥಿ ಅಭ್ಯಾಗತರಿಗಾಗಿ ಕಳಶ ಕನ್ನಡಿ ಸುಖಾಸನಗಳಿಂದ ಅಲಂಕೃತವಾದ ಪಾನಶಾಲೆಯಿತ್ತು.

“ಒಳ್ಳೆಯ ಮಧುವಿಲ್ಲದೆ ನಾನು ಅರ್ಧ ಗಳಿಗೆ ಕೂಡ ಬದುಕಿರಲಾರೆ, ಅಗ್ಗಳ. ಅದಕ್ಕಾಗಿಯೇ ನಿಮ್ಮಲ್ಲಿಗೆ ಕರೆತಂದೆ,” -ಎಂದು ಕರ್ಣದೇವನು ಅಗ್ಗಳನನ್ನು ಪಾನಶಾಲೆಯ ಸುಖಾಸನದಲ್ಲಿ ಕುಳ್ಳಿರಿಸಿ ತಾನೂ ಕುಳಿತುಕೊಂಡನು.

ಕೂಡಲೆ ಅಲ್ಲಿಯ ಪ್ರಮುಖ ದಾಸಿ ಮಧುಪಾತ್ರೆ ಬಟ್ಟಲುಗಳಿದ್ದ ತಟ್ಟೆಯನ್ನು ತಂದು ಎದುರಿಗಿದ್ದ ಪೀಠದ ಮೇಲಿಟ್ಟಳು. ಕರ್ಣದೇವ ಬಟ್ಟಲುಗಳನ್ನು ತುಂಬಿ,

“ಕುಡಿಯಿರಿ, ಅಗ್ಗಳ. ನಾಳಿನ ವಿಜಯೋತ್ಸವದ ಆನಂದಕ್ಕೆ ಇದು ನಮ್ಮ ಮೊದಲ ಸ್ವಸ್ತಿಪಾನ,” ಎಂದನು.

ಸ್ವಸ್ತಿಪಾನವನ್ನು ನಿರಾಕರಿಸುವುದು ಸಭ್ಯತೆಯ ಅಪವಾದವೆಂದು ತಿಳಿದಿದ್ದ ಅಗ್ಗಳನು ಬಟ್ಟಲನ್ನು ತೆಗೆದುಕೊಂಡು ಮೆಲ್ಲನೆ ಕುಡಿಯುತ್ತ,

“ನಾನು ಸಭಾಂಗಣಕ್ಕೆ ಬೇಗನೆ ಹಿಂದಿರುಗಬೇಕಾಗಿದೆ, ಕರ್ಣದೇವರಸರೆ, ಅಲ್ಲಿ ನಾನಿಲ್ಲದಿರುವುದು ತಿಳಿದರೆ ಮಹಾರಾಣಿಯವರು ಕೋಪಮಾಡುವರು,” ಎಂದನು.

“ನೀವು ಈ ಬಂಡರಾಣಿಯ ಮನೆಹೆಗ್ಗಡೆಯಾಗುವುದಕ್ಕಿಂತ ಜಗದೇಕಮಲ್ಲರಸನ ಕಾವ್ಯೋಪದೇಶಿಯಾಗಿ ಕಲ್ಯಾಣದಲ್ಲಿಯೇ ಉಳಿದಿದ್ದರೆ ಚೆನ್ನಾಗಿತ್ತು, ಅಗ್ಗಳ.” ಅಪಹಾಸ್ಯದ ನಗೆ ಹಾರಿಸಿ ಕರ್ಣದೇವನೆಂದನು.

“ಆ ವಿಚಾರದಲ್ಲಿ ನಮ್ಮ ಅಭಿಪ್ರಾಯಗಳೂ ಬೇರೆಯಾಗಬಹುದು, ಕರ್ಣದೇವರಸರೆ. ನಾನು ಮಂಗಳವೇಡೆಗೆ ಬಂದದ್ದು ಮಹಾರಾಣಿ ಕಾಮೇಶ್ವರಿದೇವಿಯವರ ಮನೆಹೆಗ್ಗಡೆಯಾಗಿ. ಹೊಸ ಪದವಿಯ ಮೋಹದಿಂದ ಹಳೆಯದನ್ನು ಮರೆಯುವುದು ಸಲ್ಲ. ಜಗದೇಕಮಲ್ಲರಸರು ಹೇಗಿದ್ದಾರೆ? ರಾಜಗೃಹದ ಸುದ್ದಿಯೇನು?” -ಅವಕಾಶ ದೊರೆತು ಅಗ್ಗಳನ್ನು ಪ್ರಶ್ನಿಸಿದನು.

“ಆ ಧರ್ಮೋಪದೇಶಿ ಜಂಗಮನಾಯಿತು, ಅವರಾಯಿತು. ಹೆಗ್ಗಡೆ ಕಳುಹಿಸಿದ