ಪುಟ:ಕ್ರಾಂತಿ ಕಲ್ಯಾಣ.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೨

ಕ್ರಾಂತಿ ಕಲ್ಯಾಣ


ದಾಸಿ ಮಧುವನ್ನು ಬಟ್ಟಲುಗಳಿಗೆ ಸುರಿದು ಒಂದನ್ನು ಕರ್ಣದೇವನಿಗೆ ಕೊಟ್ಟಳು. ಇನ್ನೊಂದು ಬಟ್ಟಲನ್ನು ಅಗ್ಗಳನ ಮುಂದಿಟ್ಟಳು. ಪಾನಶಾಲೆಯ ದಾಸಿಯರಿಗೆ ಸಹಜವಾದ ಈ ಕಾರ್ಯ ಮಾಡುತ್ತಿದ್ದಂತೆ ಅವಳ ತೋರ್ಬೆರಳು ತನ್ನ ಕಡೆಗೆ ತಿರುಗಿ ಎಚ್ಚರಿಕೆ ಕೊಡುತ್ತಿರುವಂತೆ ಆಡಿದುದನ್ನು ಕಂಡು ಅಗ್ಗಳನು ಚಮತ್ಕೃತವಾಗಿ ತಲೆಯೆತ್ತಿ ನೋಡಿದನು. ದಾಸಿಯ ಕಣ್ಣುಗಳಲಿಯೂ ಅದೇ ಎಚ್ಚರಿಕೆಯ ಸಂಕೇತ. ಹುಬ್ಬುಗಳು ಕ್ಷಣಕಾಲ ಕುಂಚಿತವಾಗಿ ಮತ್ತೆ ಸರಳವಾದವು. “ವಿಪತ್ತು ನಿಮ್ಮನ್ನು ಸುತ್ತುವರಿದಿದೆ, ಎಚ್ಚರಿಕೆ !” ಎನ್ನುವಂತಿತ್ತು ಆ ಚಲನೆ.

ದಾಸಿ ಅಲ್ಲಿಂದ ಸರಿಯುತ್ತಲೆ ಅಗ್ಗಳನು ಪುನಃ ಆಸನದಲ್ಲಿ ಕುಳಿತು, “ರಾಣಿಯವರಿಗೆ ಎಚ್ಚರಿಕೆ ಕೊಡಲು ನೀವು ಮಾಡಿದ ವ್ಯವಸ್ಥೆಯೇನು ?” ಎಂದು ಕೇಳಿದನು.

“ನಾವು ಸಭಾಂಗಣದಿಂದ ಹೊರಗೆ ಬರುತ್ತಿದ್ದಾಗ ನಡೆಯುತ್ತಿದ್ದುದನ್ನು ನೀವು ಗಮನಿಸಲಿಲ್ಲವೆ?” ಎಂದು ಉತ್ತರಿಸಿದನು ಕರ್ಣದೇವ.

“ಏನು ನಡೆಯುತ್ತಿತ್ತು?”

“ಅರಮನೆಯ ಕಾವಲು ಪಡೆಯ ಬದಲಾವಣೆ. ಈಗೊಂದು ವಾರದಿಂದ ಕುಮಾರ ಸೋಮೇಶ್ವರನ ಸೈನಿಕರು ಅರಮನೆಯ ಸುತ್ತ ಕಾವಲಿದ್ದರು. ನಾಳೆ ನಡೆಯುವ ವಿಜಯೋತ್ಸವದ ಮೆರವಣಿಗೆಯಲ್ಲಿ ಅವರದು ಮುಖ್ಯ ಪಾತ್ರ ಅದಕ್ಕಾಗಿ ಅವರನ್ನು ಶಿಬಿರಕ್ಕೆ ಕಳುಹಿಸಿ, ನನ್ನ ಕಡೆಯ ಸೈನಿಕರನ್ನು ಕಾವಲಿಗೆ ನೇಮಿಸಬೇಕಾಯಿತು. ನಾವು ಸಭಾಂಗಣವನ್ನು ಬಿಟ್ಟಾಗ ಈ ಬದಲಾವಣೆ ನಡೆಯುತ್ತಿತ್ತು. ಈಗ ರಾಣಿಯ ಬಿಡಾರದ ಸುತ್ತ ನನ್ನ ಸೈನ್ಯದ ಕಾವಲಿದೆ. ಚಾಲುಕ್ಯ ರಾಣಿ ಈಗ ನನ್ನ ಬಂಧಿ. ನಾಳೆ ಮುಂಜಾವಿನವರೆಗೆ ರಾಣಿಯ ಬಿಡಾರಕ್ಕೆ ಯಾರನ್ನೂ ಬಿಡಕೂಡದೆಂದು ಬಿಜ್ಜಳರಾಯರ ಆಜ್ಞೆ. ಅಲ್ಲಿಯವರೆಗೆ ರಾಣಿಯ ಮನೆ ಹೆಗ್ಗಡೆಗೆ ಪೂರ್ಣ ವಿರಾಮ. ನೀವು ಹಾಯಾಗಿ ಕುಳಿತು ನನ್ನ ಕಥೆ ಕೇಳಬಹುದು.”

ಕರ್ಣದೇವನ ವಿವರಣೆ ಕೇಳಿ ಅಗ್ಗಳನು ಸ್ತಂಭಿತನಾದನು. ಕಾಮೇಶ್ವರಿ ಪಗಡೆಯಾಟದಲ್ಲಿ ಮಗ್ನಳಾದಂತೆ ಕಲಚೂರ್ಯ ರಾಜತಂತ್ರ ಅವಳನ್ನು ಸುತ್ತುಗಟ್ಟಿ ವಜ್ರಪಂಜರದಲ್ಲಿ ಹಾಕಿತು. ರಾಜಿಕದಲ್ಲಿ ವಿಜ್ಞನೆಂಬ ಅಭಿಮಾನದಿಂದ ಹಿರಿ ಹಿರಿ ಹಿಗ್ಗುತ್ತಿದ್ದ ನಾನು, ಆ ಪಂಜರದ ಹೊರಗೆ ಕರ್ಣದೇವನಂತಹ ತಿಳಿಗೇಡಿಯ ಕೈಗೆ ಸಿಕ್ಕಿದ್ದೇನೆ,” ಎಂದು ತನ್ನನ್ನು ತಾನೆ ನಿಂದಿಸಿಕೊಂಡು, ಪ್ರಕಟವಾಗಿ-

“ಕಲಚೂರ್ಯ ರಾಜತಂತ್ರದ ಹೊಸ ಅವತರಣವೊಂದು ಈ ದಿನ