ಪುಟ:ಕ್ರಾಂತಿ ಕಲ್ಯಾಣ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ರಾಂತಿ ಕಲ್ಯಾಣ

"ಅದೊಂದು ಪ್ರಸಿದ್ಧ ಪದ್ಯ. ನಿವು ಅನೇಕ ಸಾರಿ ಕೇಳಿರಬಹುದು":

"ನಿಂದಂತು ನೀತಿನಿಪುಣಾಃ ಯದಿ ವಾ ಸ್ತುವಂತು

ಲಕ್ಷ್ಮೀ ಸಮಾಶ್ರಯತು ಗಚ್ಛತು ವಾ ಯಥೇಚ್ಛಂ

ಅದ್ಕೆವ ಎನ ವಾ ಮರಣಮಸ್ತು ಯುಗಾಂತರೇ ವಾ

ನ್ಯಾಂಯಾತ್ಚಥಃ ಪ್ರವಿಚಲಂತಿ ಪದಂ ನ ಧೀರಾಃ ।"

ಅಗ್ಗಳನು ತುಂಬುಕಂಠದಿಂದ ಪದ್ಯವನ್ನು ಪಠಿಸಿದನು. ಭರ್ತೃಹರಿಯ ಶಕ್ತಿಶಾಲಿ ಪದಗಳ ಜೋಡಣೆ, ಅರ್ಥಪುಷ್ಟಿ ಸುರಗಿಯಂತೆ ಮೊನೆಗೂಡಿದ ಭಾವಗಳು ಕ್ರಮಿತನ ಕಿವಿಗಳಲ್ಲಿ ರೇಂಕರಿಸಿ ಮನದಲ್ಲಿ ಮಿಡಿದವು.

ಹಿಂದಿನ ಸಂಜೆ ರಾಜಸಭೆಯ ಧರ್ಮಾಧಿಕರಣದಲ್ಲಿ ನಡೆದ ವಿವಾದವನ್ನು ಕುರಿತು ಅಗ್ಗಳನ ವ್ಯಾಖ್ಯಾನ ಭರ್ತೃಹರಿಯ ಕವಿತೆಯ ರೂಪದಲ್ಲಿ ವ್ಯಕ್ತವಾಗುತ್ತಿದೆಯೇ? ಎಂದು ಕ್ರಮಿತನಿಗೆ ಸಂಶಯ ಹುಟ್ಟಿತು.

"ಭರ್ತೃಹರಿ ಈ ಪದ್ಯದಲ್ಲಿ ಹೇಳಿರುವ ಧೀರರಂತೆ ನಡೆದುಕೊಳ್ಳುತ್ತಿದ್ದಾರೆ ಶರಣರು. ನೀತಿನಿಪುಣರಾದ ನಿಮ್ಮಂತಹವರ ನಿಂದಾಸ್ತುತಿಗಳು ಅವರಿಗೆ ಬೇಕಿಲ್ಲ. ಸಿರಿಸಂಪತ್ತುಗಳನ್ನು ಅವರು ಕಡೆಗಣಿಸಿದ್ದಾರೆ. ಮರಣಕ್ಕೂ ಅ೦ಜುತ್ತಿಲ್ಲ ಅವರು. ತಮಗೆ ನ್ಯಾಯವೆಂದು ತೋರಿದ ಮಾರ್ಗದಲ್ಲಿ ನಡೆದು ಭರ್ತೃಹರಿಯ 'ಧೀರ' ಪ್ರಶಸ್ತಿಗೆ ಅರ್ಹರಾಗುತ್ತಿದ್ದಾರೆ."-ಎಂದು ಅಗ್ಗಳನು ಹೇಳಿದಾಗ ಕ್ರಮಿತನ ಸಂದೇಹ ಸ್ಥಿರವಾಯಿತು.

ಅಗ್ಗಳನು ಸಭೆಯಲ್ಲಿರಲಿಲ್ಲ. ಆದರೆ ಇದ್ದವರಿಂದ ವಾದ ಪ್ರಕಿವಾದಗಳ ವಿವರಗಳನ್ನೂ ಅದರಲ್ಲಿ ತನ್ನ ಪಾತ್ರವನ್ನೂ ಕೇಳಿ ತಿಳಿದಿರಬಹುದೆಂದು ಕ್ರಮಿತನು ಭಾವಿಸಿದನು.

ಧರ್ಮಾಧಿಕರಣದ ತೀರ್ಪು, ಬಸವಣ್ಣನವರ ನಿರ್ವಾಸನ, ಆಗಲೇ ಮುಗಿದ ಘಟನೆಗಳು. ಆದರೂ ಇನ್ನೂ ಕೆಲವು ದಿನಗಳು, ನಗರದ ಎಲ್ಲ ಕಡೆ ಆ ಬಗೆಗೆ ಪ್ರಕಟವಾಗಿಯೋ ರಹಸ್ಯವಾಗಿಯೋ ಚರ್ಚೆ ವ್ಯಾಖ್ಯಾನಗಳು ನಡೆಯುವುವೆಂದು ಕ್ರಮಿತನು ತಿಳಿದಿದ್ದನು. ಮನಸ್ಸಿನ ಅಸಮಾಧಾನವನ್ನು ತುಳಿದಿಟ್ಟು ಪ್ರಕಟವಾಗಿ ಅವನು,

"ಭರ್ತೃಹರಿಯ ಕವಿ ಪ್ರತಿಭೆ ಅವನು ರಾಜ್ಯಭ್ರಷ್ಟನಾಗಲು ಕಾರಣವೆಂದು ಕೇಳಿದ್ದೇನೆ, ಅಗ್ಗಳದೇವರಸರೆ. ನಿಮ್ಮ ಕಾವ್ಯಾಸಕ್ಕಿ ಮನೆಹೆಗ್ಗಡೆಯ ಕಾರ್ಯಗಳಿಗೆ ಅಡಚಣೆ ಆಗದಿರಲಿ" ಎಂದು ನುಡಿದು ಹೊತ್ತಿಗೆಯನ್ನು ಮುಚ್ಚಿಟ್ಟು "ನೀವು ಕಲ್ಯಾಣಕ್ಕೆ ಬ೦ದ ವಿಚಾರ ಬಿಜ್ಜಳರಾಯರಿಗೆ ವರದಿ ಆಗಿದೆ. ಅವರು ಕೂಡಲೇ