ಪುಟ:ಕ್ರಾಂತಿ ಕಲ್ಯಾಣ.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೬

ಕ್ರಾಂತಿ ಕಲ್ಯಾಣ

"ನೀವು ಹೋದಾಗ ರಾಣಿ ಏನು ಮಾಡುತ್ತಿದ್ದರು?"
"ತಮ್ಮ ಕೋಣೆಯಲ್ಲಿ ಮಲಗಿದ್ದರು."
"ಕುಮಾರ ಪ್ರೇಮಾರ್ಣವ?"
"ಅವರ ಬಳಿ ಕುಳಿತಿದ್ದನು."
"ರಾಣಿಯವರು ಆಗ ಸ್ವಸ್ಥರಾಗಿದ್ದರೆ? ಜ್ವರ ಬಿಟ್ಟಿತ್ತೆ?"

"ಮಧ್ಯಾಹ್ನದ ವೇಳೆಗೆ ಜ್ವರ ಬಿಟ್ಟಿತ್ತು. ಸ್ವಲ್ಪ ಆಹಾರ ತೆಗೆದುಕೊಂಡು ವಿಶ್ರಮಿಸಿಕೊಳ್ಳುತ್ತಿದ್ದರು. ರಾಣಿಯವರು ತಾವಾಗಿ ಅನುಮತಿ ಕೊಟ್ಟಿದ್ದರಿಂದ ನಾವು ಧೈರ್ಯವಾಗಿ ಹೋದೆವು."

"ಕುಮಾರ ಪ್ರೇಮಾರ್ಣವ ನಿಮ್ಮೊಡನೆ ಬರುವುದಾಗಿ ರಗಳೆ ಮಾಡಲಿಲ್ಲವೆ?” "ರಗಳೆ ಮಾಡಿದನು. ರಾಣಿಯವರು ಕಳುಹಿಸಲಿಲ್ಲ. ಒತ್ತಾಯದಿಂದ ತಮ್ಮ ಹತ್ತಿರವೇ ಇರಿಸಿಕೊಂಡರು."

"ಬೆಂಕಿ ಬಿದ್ದ ವಿಚಾರ ನಿಮಗೆ ತಿಳಿದಿದ್ದು ಹೇಗೆ?

"ಮೆರವಣಿಗೆ ನಗರದ ಮಹಾದ್ವಾರವನ್ನು ದಾಟಿದಮೇಲೆ ನಾವು ಹಿಂದಿರುಗಿದೆವು. ಆಗ ಬಿಡಾರ ಹತ್ತಿ ಉರಿಯುತ್ತಿತ್ತು. ನಾವು ಕೂಗಿಕೊಂಡೆವು."

"ರಾಣಿ ಕಾಮೇಶ್ವರಿ, ಕುಮಾರ ಪ್ರೇಮಾರ್ಣವ, ಇಬ್ಬರೂ ಬೆಂಕಿಯಲ್ಲಿ ಮಡಿದರೆಂದು ನಿಮಗೆ ಖಚಿತವಾಗಿ ತಿಳಿದಿದೆಯೆ?"

ದಾಸಿ ಬಿಕ್ಕಿ ಬಿಕ್ಕಿ ಅತ್ತಳು. ಉತ್ತರ ಕೊಡಲಿಲ್ಲ, ಮಾತಾಡುವ ಶಕ್ತಿಯೂ ಉಡುಗಿತ್ತು ಅವಳಲ್ಲಿ.

ಜಿಜ್ಜಳನು ದಾಸಿಯರು ನಿಂತಿದ್ದ ಕಡೆ ಹೋಗಿ ಒಬ್ಬೊಬ್ಬರಂತೆ ಅವರನ್ನು ಎದುರಿಗೆ ಕರೆಸಿದನು. ಎಲ್ಲರೂ ಮುಖ್ಯ ದಾಸಿ ಹೇಳಿದುದನ್ನು ಸಮರ್ಥಿಸಿದರು. ಅವರಲ್ಲಿ ಕಾಮೇಶ್ವರಿಯ ಆಕೃತಿ ನಿಲವುಗಳನ್ನು ಹೋಲುವವರು ಯಾರೂ ಇಲ್ಲದಿರುವುದನ್ನು ಕಂಡು ಬಿಜ್ಜಳನು ಅಚ್ಚರಿಯಿಂದ ಹೆಗ್ಗಡೆಯ ಕಡೆ ತಿರುಗಿ,

"ರಾಣಿಯ ದಾಸಿಯರೆಲ್ಲರೂ ಇಲ್ಲಿರುವರೆ? ಯಾರೂ ಕಾಣೆಯಾಗಿಲ್ಲವೆ?” ಎಂದು ಕೇಳಿದನು.

"ಎಲ್ಲರೂ ಸರಿಯಾಗಿರುವರೆಂದು ಮುಖ್ಯ ದಾಸಿ ಹೇಳುತ್ತಾಳೇ,” -ಹೆಗ್ಗಡೆ ಉತ್ತರ ಕೊಟ್ಟನು.
"ರಾಣಿಯವರ ಮನೆಹೆಗ್ಗಡೆ ಅಗ್ಗಳದೇವನೆಲ್ಲಿ?"
"ಅವರು ಮೆರವಣಿಗೆಯ ಸಂಗಡಿರಬೇಕು. ಇನ್ನೂ ಇಲ್ಲಿಗೆ ಬಂದಿಲ್ಲ.” ಬಿಜ್ಜಳನು ಹೆಗ್ಗಡೆಯನ್ನು ಪ್ರತ್ಯೇಕವಾಗಿ ಕರೆದು, "ಇದರಲ್ಲೇನೋ ರಹಸ್ಯವಿದೆ.