ಪುಟ:ಕ್ರಾಂತಿ ಕಲ್ಯಾಣ.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೮

ಕ್ರಾಂತಿ ಕಲ್ಯಾಣ

ಈ ಅಸ್ಥಿಶೇಷವೆ?

.....ಗಗನದ ಜ್ಯೋತಿರ್ಮಯ ನಕ್ಷತ್ರವನ್ನು ಭೂಮಿಗುರುಳಿಸಿ, ಆಟಿಕೆಯ ಹರಳಂತೆ ತಿರುಕಲ್ಲಾಡಲು ಹವಣಿಸಿದ್ದು ನನ್ನ ಅವಿವೇಕ! ಅದರ ಫಲವೇ ಈ ದುರಂತ!

-ಎಂದು ಅವನ ಅಂತರಂಗ ಚಿಂತಾಕುಲವಾಯಿತು.

ಎಂದೋ ಎಲ್ಲಿಯೋ ಕೇಳಿದ್ದ ಸೂಕ್ತಗಳು ಸುಟ್ಟ ಅರಮನೆಯ ಸಂತಪ್ತ ಭಸ್ಮರಾಶಿಯ ನಡುವೆ ಶಬ್ದಮಯವಾಗಿ ಮರಳಿ ಅವತರಿಸಿದಂತೆ ಅವನ ಕಿವಿಗಳಲ್ಲಿ ಅಸ್ಫುಟ ಅಮರವಾಣಿಯಿಂದ ನೀರವವಾಗಿ ಮೊಳಗಿದವು.

ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಂ |

ಓಂ ಕ್ರತೋಸ್ಮರ ಕೃತಂಸ್ಮರ ಕೃತಂಸ್ಮರ ||

ಅಗ್ನೇನಯ ಸುಪಥಾ ರಾಯೇ ಅಸ್ಮಾನ್
ವಿಶ್ವಾನಿ ದೇವ ವಯುನಾನಿ ವಿದ್ವಾನ್ ||
ಯುಯೋಧ್ಯಸ್ಮಜ್ಜು ಹರಣಾಮೇನೋ

"ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ ||*

ಓಂ ಶಾಂತಿಃ ಶಾಂತಿಃ

****

__________

  • ಈ ಅಳಿದೆನ್ನ ಪ್ರಾಣಗಳು ಅಮೃತವಾಗಲಿ ಮುನ್ನ ಕರೆದೊಯ್ಯುದೆನ್ನ ಸುಪಥದೆ ಕರ್ಮಫಲದೆಡೆಗೆ
ಭಸ್ಮವಾಗಲಿ ಸುಟ್ಟು ತನುವು ಬಳಿಕ ; ಅರಿತಿರುವೆ ಅಗ್ನಿ, ನೀನೆಲ್ಲವನು
ಹೇ ಅಗ್ನಿ, ಮರೆಯದಿರು ನಾಂಗೈದ ಕರ್ಮಗಳ, ನಾಂಗೈದ ಪಾಪಗಳ ಹರಿಸುವುದು ಕರುಣೆಯಿಂ,
ಮರೆಯದಿರು ನಾಂಗೈದ ಕರ್ಮಗಳನು. ನಮಿಸಿ ಬೇಡುವೆ ನಿನ್ನ ಮರಳಿ ಮರಳಿ.
-" ಈಶಾವಾಸ್ಯೋಪನಿಷತ್,” ೧೭ - ೧೮