ಪುಟ:ಕ್ರಾಂತಿ ಕಲ್ಯಾಣ.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೨೧


ವಾದ ಮುಗಿಸಿ ಮಧುವರಸನು ನ್ಯಾಯಪೀಠಕ್ಕೆ ಕೈಮುಗಿದಾಗ ನಾರಣ ಕ್ರಮಿತನು ಆಪಾದಿತನನ್ನು ಕರೆದುಕೊಂಡು ಹೋಗುವಂತೆ ಭಟರಿಗೆ ಸನ್ನೆಮಾಡಿದನು. ಕ್ಷಣಕಾಲ ಕುಳಿತು ಮಿಶ್ರಮಿಸಿಕೊಳ್ಳುವ ಅವಕಾಶವನ್ನೂ ಕೊಡದೆ ಭಟರು ಮಧುವರಸನನ್ನು ನ್ಯಾಯಾಲಯದಿಂದ ಸೆರೆಮನೆಗೆ ಕರೆದುಕೊಂಡು ಹೋದರು.

ಸಭ್ಯವರ್ತನೆಯ ಈ ಅಪಚಾರವನ್ನು ಮೌನವಾಗಿ ಕುಳಿತು ನೋಡುತ್ತಿದ್ದ ಮಂಚಣನು, “ನೀವು ಕೊನೆಯಲ್ಲಿ ಮಧುವರಸನಿಗೆ ಕೊಟ್ಟ ಸೂಚನೆ ಧರ್ಮಸಮ್ಮತವಲ್ಲ, ನಾರಣಕ್ರಮಿತರೆ. ಆಪಾದಿತರೆದುರಿಗೆ ಅದನ್ನು ವಿರೋಧಿಸುವುದರಿಂದ ನಿಮಗೆ ಮುಖಭಂಗವಾಗುವುದೆಂದು ಸುಮ್ಮನಿದ್ದೆ", ಎಂದು ಅಸಮಾಧಾನದಿಂದ ನುಡಿದನು.

“ನೀವು ಮಧುವರಸನಿಗೆ ಸಹಾಪಾದಿತರ ಹೆಸರನ್ನು ಹೇಳಿದ್ದು ಕೂಡ ಸರಿಯಲ್ಲ. ಈ ವ್ಯವಹಾರದಲ್ಲಿ ನ್ಯಾಯಪೀಠ ಸರ್ವಾಧಿಕಾರಿಗಳ ಆಜ್ಞೆಯಂತೆ ಮೊದಲೇ ಗೊತ್ತಾದ ಮಾರ್ಗದಲ್ಲಿ ನಡೆಯಬೇಕಾಗಿದೆ. ನೀವು ಅವಿವೇಕದಿಂದ ಹೆಜ್ಜೆ ಹೆಜ್ಜೆಗೆ ಅದಕ್ಕೆ ಅಡ್ಡಿವಬಾರದಿದ್ದರೆ ಒಳ್ಳೆಯದು. ಕ್ರಮಿತನು ತುಸು ಒರಟಾಗಿಯೇ ಉತ್ತರ ಕೊಟ್ಟನು.

“ತನ್ನ ಸಂಗಡ ವಿಚಾರಣಾಧೀನರಾದವರ ಹೆಸರುಗಳನ್ನು ತಿಳಿಯುವುದು ಆಪಾದಿತನ ಹಕ್ಕು, ಅದನ್ನು ನಿರಾಕರಿಸುವುದು ನ್ಯಾಯಪೀಠಕ್ಕೆ ಉಚಿತವೆನಿಸದು.”

“ನಾನು ನ್ಯಾಯಪೀಠದ ಅಧ್ಯಕ್ಷ, ಧರ್ಮಾಧಿಕರಣದ ಶ್ರೇಷ್ಠ ನ್ಯಾಯಮೂರ್ತಿ. ಯಾವುದು ಉಚಿತ, ಯಾವುದು ಅನುಚಿತ ಎಂಬುದನ್ನು ನಿರ್ಧರಿಸುವುದು ಸಂಪೂರ್ಣವಾಗಿ ನನ್ನ ಹೊಣೆ. ಆ ಕಾರ್ಯದಲ್ಲಿ ನಾನು ಯಾರ ಸಹಾಯವನ್ನೂ ಅಪೇಕ್ಷಿಸುವುದಿಲ್ಲ.”

“ನ್ಯಾಯಪೀಠದ ನಿಮ್ಮ ಸಹೋದ್ಯೋಗಿಗಳ ಸಹಾಯವನ್ನೂ ಅಪೇಕ್ಷಿಸುವುದಿಲ್ಲವೆ?”

“ಅಪೇಕ್ಷಿಸುವುದಿಲ್ಲ. ಇದು ನಿಮಗಿಷ್ಟವಿಲ್ಲದೆ ಹೋದರೆ ನ್ಯಾಯಪೀಠದಿಂದ ವಿರಮಿಸಬಹುದು.”

ಕೂಡಲೆ ಆಸನದಿಂದೆದ್ದು ನ್ಯಾಯಪೀಠದಲ್ಲಿ ತನ್ನ ಸ್ಥಾನದಿಂದ ನಿವೃತ್ತನಾಗುವುದು ಮಂಚಣನ ಮೊದಲ ಪ್ರತಿಕ್ರಿಯೆಯಾಗಿತ್ತು. ಆದರೆ ಹಾಗೆ ಮಾಡುವುದರಿಂದ ಮಧುವರಸ ಹರಳಯ್ಯಗಳಿಗೆ ತನ್ನಿಂದ ಆಗಬಹುದಾದ ಅಲ್ಪ ಸಹಾಯವೂ ತಪ್ಪಿದಂತಾಗುವುದೆಂದು ಭಾವಿಸಿ ಅವನು ವಂಚನೆಯ ಮಿದುನಗೆ ಬೀರಿ, “ರಾಜಪುರೋಹಿತರು ಮೂಗಿನ ಮೇಲೆ ಕೋಪದ ಉಪನೇತ್ರ