ಪುಟ:ಕ್ರಾಂತಿ ಕಲ್ಯಾಣ.pdf/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಾನವನು ದಾನವನಾದಾಗ

೨೮೫

ಲಾವಣ್ಯವತಿ ಹೇಳಿದಳು : “ರಾಜಸಮ್ಮುಖದಲ್ಲಿ ಮೃತ್ಯು ಎದುರಿಗೆ ನಿಂತಾಗ ಮನವನ ಆತ್ಮಶಕ್ತಿ ಏಕನಿಷ್ಠೆಗಳು ಮಾತ್ರವೇ ಅವನಿಗೆ ಅವಲಂಬನ. ಪರರ ಸಹಾಯ ಆಗ ಏನನ್ನೂ ಮಾಡಲಾರದು.”

ನಾಗಲಾಂಬೆ ತಲೆದೂಗಿ, “ನೀನು ದಿಟ್ಟ ಹೆಣ್ಣು, ಲಾವಣ್ಯ. ಕಲ್ಯಾಣದ ಎಲ್ಲ ಶರಣೆಯರ ಸತೀಶಕ್ತಿ ಅದೃಶ್ಯರೂಪದಿಂದ ಸಂಗಡಿದ್ದು ನಿನ್ನನ್ನು ರಕ್ಷಿಸಲಿ.” ಎಂದು ಹರಸಿ ಬೀಳ್ಕೊಟ್ಟಳು.

ತೀರ ಸಾಮಾನ್ಯವಾದ ಉಡಿಗೆ ತೊಡಿಗೆಗಳನ್ನು ಧರಿಸಿದ್ದರೂ ಪಾಚಿ ಮುಚ್ಚಿದ ತಾವರೆಯಂತೆ ಬೆಳಗುವ ಚಲುವೆ ಹೆಬ್ಬಳು ಎದುರಿಗೆ ನಿಂತದ್ದನ್ನು ಕಂಡು ಬಿಜ್ಜಳನು ಚಕಿತನಾದನು. ನಾನು ಹಿಂದೆ ನೋಡಿದ್ದ ಬಾಲಿಕೆಯೇ ಇವಳು, ಎಂದು ಅವನಿಗೆ ಆಶ್ಚರ್ಯವಾಯಿತು. ಜಗತ್ತಿನ ಎಲ್ಲ ರತ್ನಗಳು ರಾಜನ ಸ್ವತ್ತೆಂಬ ಸರ್ವಾಧಿಕಾರಿ ಭಾವನೆ ಬೆಳೆದುಬಂದಿದ್ದ ಆ ಕಾಲಕ್ಕೆ ಸಹಜವಾಗಿ ಅವನು ಭಾವಿಸಿದನು, 'ನಾನು ಮೊದಲೆ ಇವಳನ್ನು ನೋಡಿದ್ದರೆ, ಈ ಅಸವರ್ಣ ವಿವಾಹದ ಪ್ರಸಂಗವೇ ಹುಟ್ಟುತ್ತಿರಲಿಲ್ಲ,” ಎಂದು.

ವರ್ಣಸಂಕರದ ವಿಚಾರ ಮೊದಲಸಾರಿ ರಾಜಸಭೆಯಲ್ಲಿ ಚರ್ಚೆಗೆ ಬಂದಾಗ ಬಸವಣ್ಣನವರ ವಾದಕ್ಕೆ ಕ್ರಮಿತನು ಕೊಟ್ಟ ಉತ್ತರದಲ್ಲಿ ಉಲ್ಲೇಖಿಸಿದ ವೇದ ಸೂಕ್ತದ ನೆನಪಾಯಿತು,-“ಹತ್ತು ಜನ ಅಬ್ರಾಹ್ಮಣರು ಒಬ್ಬ ಹೆಣ್ಣಿನ ಪತಿಗಳಾಗಿರಲಿ, ಬ್ರಾಹ್ಮಣನು ಕೈಹಿಡಿದರಾಯಿತು. ಅವನೇ ಅವಳ ಪತಿ, ಕ್ಷತ್ರಿಯ ವೈಶ್ಯ ಶೂದ್ರರು ಪತಿಗಳಾಗುವುದಿಲ್ಲ,” ಎಂದು.

ವರ್ಣಸಂಕರದ ವಿಚಾರದಲ್ಲಿ ಕ್ರಮಿತನ ಉನ್ನತ್ತ ಆವೇಶ ಈಗ ಬಿಜ್ಜಳನಿಗೆ ಅರ್ಥವಾಯಿತು. ನಂದನದಲ್ಲಿ ಬೆಳೆದ ಪಾರಿಜಾತದ ಹೂವನ್ನು ಗೋಪಾಲಕನೊಬ್ಬನು ಅಪಹರಿಸಿದಾಗ ಇಂದ್ರನು ಕೋಪಿಸಿದನೆಂದು ಪುರಾಣಗಳು ಹೇಳುತ್ತವೆ, ನಾರಣ ಕ್ರಮಿತನೂ, ಅವನಿಗೆ ಪ್ರೋತ್ಸಾಹ ಕೊಡುತ್ತಿರುವ ವೈದಿಕರೂ ಈ ಅಸವರ್ಣ ವಿವಾಹದಿಂದ ಅಷ್ಟೇ ಕೋಪಗೊಳ್ಳುವುದು ಸ್ವಾಭಾವಿಕ ಎಂದು ಅವನು ತಿಳಿದನು.

“ಮಧುವರಸರ ಮಗಳು, ಶೀಲವಂತಯ್ಯನವರ ಅಂಗನೆ, ಲಾವಣ್ಯವತಿ ನಮಸ್ಕರಿಸುವಳು,” -ಎಂದು ಹೇಳಿ ಲಾವಣ್ಯವತಿ ತಲೆಬಾಗಿ ನಿಂತಳು.

ಮಧುವರಸ ! ಶೀಲವಂತ ! ಆ ಹೆಸರುಗಳನ್ನು ಕೇಳಿದಾಗ ಬಿಜ್ಜಳನ ಅಸಹನೆ ಸಿಡಿದೆದ್ದಿತು. ಹುಬ್ಬುಗಳು ಕುಂಚಿತವಾದವು. ತುಟಿ ಅದುರಿತು. <pP “ಒಬ್ಬ ನಿರ್ಭಾಗ್ಯನ ಮಗಳಾಗಿ, ಇನ್ನೊಬ್ಬ ನಿರ್ಭಾಗ್ಯನ ಕೈ ಹಿಡಿದು ನೀನು