ಪುಟ:ಕ್ರಾಂತಿ ಕಲ್ಯಾಣ.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೯೦

ಕ್ರಾಂತಿ ಕಲ್ಯಾಣ

-ಎಂದು ನುಡಿದು ಲಾವಣ್ಯವತಿ ಬಿಜ್ಜಳನಿಗೆ ಕೈಯೆತ್ತಿ ವಂದಿಸಿ ಹೊರಡಲನುವಾದಳು.

ಅವಳು ಎರಡು ಹೆಜ್ಜೆ ಹೋಗುವಷ್ಟರಲ್ಲಿ ಬಿಜ್ಜಳನು ಅಧಿಕಾರ ದರ್ಪಿತ ಕಂಠದಿಂದ “ನಿಲ್ಲು, ಲಾವಣ್ಯವತಿ !” ಎಂದನು.

ಲಾವಣ್ಯವತಿ ನಿಂತು, ಹಿಂದಿರುಗಿ ನೋಡಿ, ನಮ್ರಕಂಠದಿಂದ, “ನಾನು ಹೇಳತಕ್ಕದ್ದೇನೂ ಉಳಿದಿಲ್ಲ. ಪ್ರಭುಗಳು ದಯೆಮಾಡಿ ನನಗೆ ಹೋಗಲು ಅನುಮತಿ ಕೊಡಬೇಕಾಗಿ ಬೇಡುತ್ತೇನೆ” ಎಂದು ಬಿನ್ನವಿಸಿಕೊಂಡಳು.

ಬಿಜ್ಜಳನೆಂದನು : “ಬರಿಗೈಯ್ಯಲ್ಲಿ ಹಿಂದಿರುಗಲು ನಿನಗೆ ಲಜ್ಜೆಯಾಗುವುದಿಲ್ಲವೇ, ಲಾವಣ್ಯವತಿ ? ನೀನು ಒಪ್ಪುವುದಾದರೆ ಕ್ಷಮಾರ್ಹರಾದ ಇಬ್ಬರನ್ನು ನಾನು ಆರಿಸುವನು. ಅದು ನಿನಗಿಷ್ಟವೇ !”

ಲಾವಣ್ಯವತಿ ಪುನಃ ತೊಡಕಿನಲ್ಲಿ ಬಿದ್ದಳು. ಅಂತರ್ವಾಣಿ ನುಡಿಯುತ್ತಿತ್ತು.... 'ಇದರಲ್ಲೇನೋ ಜಾಲವಿದೆ, ನೀನೇ ಆರಿಸಿಕೊಳ್ಳುವುದು, ಅವರು ಆರಿಸಿದ್ದಕ್ಕೆ ಒಪ್ಪುವುದು, ಎರಡೂ ಒಂದೇ ಅಲ್ಲವೇ? 'ಇಬ್ಬರನ್ನು ಉಳಿಸಿಕೊಳ್ಳಲು ಒಬ್ಬರನ್ನು ಬಲಿ ಕೊಟ್ಟಂತೆ, ಒಂದೇ ಪಾತಕದ ಎರಡು ಮುಖಗಳು' ಎಂದು.

ಸ್ಥಿರಕಂಠದಿಂದ ಲಾವಣ್ಯವತಿ ಹೇಳಿದಳು “ನೀವು ನಿರಂಕುಶ ಸರ್ವಾಧಿಕಾರಿ. ಚಾಲುಕ್ಯರಾಜ್ಯದ ದೊಡ್ಡ ಸೈನ್ಯ ನಿಮ್ಮ ಸಹಾಯಕ್ಕಿದೆ. ನಾಡಿನ ಸಹಸ್ರ ಸಹಸ್ರ ಪ್ರಜೆಗಳು, ಅವರಲ್ಲಿ ಶರಣರೂ ಸೇರುತ್ತಾರೆ, -ನಿಮ್ಮ ದುರಾಗ್ರಹ ದಬ್ಬಾಳಿಕೆಗಳಿಗೆ ಅಧೀನರು. ಅವರನ್ನು ರಕ್ಷಿಸುವುದು ಅಬಲೆಯಾದ ಹೆಣ್ಣೊಬ್ಬಳಿಗೆ ಸಾಧ್ಯವೆ? ಮೂವರಲ್ಲಿ ಇಬ್ಬರನ್ನು ನಾನಾಗಿ ಆರಿಸಿಕೊಂಡಿದ್ದರೆ ನನ್ನ ಬೆನ್ನು ಹತ್ತುತ್ತಿದ್ದ ಪಾಪ ಪಶ್ಚಾತ್ತಾಪಗಳು, ನಿಮ್ಮ ಆರಿಕೆಗೆ ಒಪ್ಪುವುದರಿಂದ ಇಮ್ಮಡಿ ಭಾರವಾಗಿ ನನ್ನನ್ನು ಅಧಃಪಾತಾಳಕ್ಕೆ ತುಳಿಯುವುದು. ನಿಮ್ಮ ಇಚ್ಚೆ ಬಂದಂತೆ ಮಾಡಲು ನೀವು ಸ್ವತಂತ್ರರು. ಅದಕ್ಕಾಗಿ ನನ್ನ ಒಪ್ಪಿಗೆ ಕೇಳುವ ಅಗತ್ಯವಿರುವುದಿಲ್ಲ. ನಾನು ಈಗ ಹೋಗಲು ಅನುಮತಿ ಕೊಡಬೇಕಾಗಿ ಬೇಡುತ್ತೇನೆ,” -ಎಂದು ನುಡಿದು ಅವಳು ಮತ್ತೆ ಹೊರಡಲನುವಾಗುತ್ತಿದ್ದಂತೆ ಬಿಜ್ಜಳನು ದಢಾರನೆ ಆಸನದಿಂದೆದ್ದು ಎರಡು ಹೆಜ್ಜೆ ಮುಂದೆ ಹೋಗಿ, “ನಿಲ್ಲು ಹಠಮಾರಿ ಹೆಣ್ಣೆ ! ಜಿಜ್ಜಳನಿಂದ ಅಷ್ಟು ಸುಲಭವಾಗಿ ಪಾರಾಗಲಾರೆ ನೀನು, ಮೂವರು ಅಪರಾಧಿಗಳನ್ನೂ ನಾನು ಬಿಡುಗಡೆ ಮಾಡುತ್ತೇನೆ. ಆದರೆ ಅದರ ಪ್ರತಿಯಾಗಿ ನೀನು ನನ್ನ ಬಂಧಿಯಾಗಬೇಕಾಗುವುದು,” ಎಂದನು.

ಲಾವಣ್ಯವತಿ ಚಮತ್ಕೃತೆಯಾದಳು. ಇಷ್ಟೊಂದು ಸುಲಭವಾಗಿ ತನ್ನ ಅಭೀಷ್ಟ