ಪುಟ:ಕ್ರಾಂತಿ ಕಲ್ಯಾಣ.pdf/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಾನವನು ದಾನವನಾದಾಗ

೨೯೩

ನಾವು ಅದನ್ನು ತೆಗೆದುಕೊಳ್ಳುತ್ತೇವೆ,” ಎಂಬ ರಾಕ್ಷಸೀ ಧರ್ಮ ಬಿಜ್ಜಳನಿಗೆ ಹೆಚ್ಚು ಪ್ರಿಯವಾಗಿತ್ತು. ಲಾವಣ್ಯವತಿಯಂತಹ ಸ್ಫುರದ್ರೂಪಿ ಪ್ರತಿಭಾಶಾಲಿನಿಯಾದ ಹೆಣ್ಣು ತನ್ನ ಅಂತಃಪುರದ ಅಲಂಕಾರಕ್ಕೆ ಅಗತ್ಯವೆಂದು ಅವನು ಭಾವಿಸಿದನು. ಮಂಗಳವೇಡೆಯ ಅಗ್ನಿದಾಹ ಅವನ ಸೈರವೃತ್ತಿಗೆ ಪುಟ ಕೊಟ್ಟಿತ್ತು. ಕೊನೆಗೆ ವಿಜಯ ತನ್ನದೆಂಬ ವಿಶ್ವಾಸದಿಂದ ಅವನು ಮುಸಿ ಮುಸಿ ನಗುತ್ತ ಲಾವಣ್ಯವತಿಯ ಆವೇಶ ಮುಗಿಯಲು ಕಾಯುತ್ತಿದ್ದನು.

ಲಾವಣ್ಯವತಿ ಮುಂದುವರಿದು ಹೇಳಿದಳು : “ಅಳಿವ ಈ ಹೇಸಿಗೆಯ ದೇಹವನ್ನು ಬಯಸಿದಿರಲ್ಲವೇ ನೀವು ? ಅದರಲ್ಲಿ ನೀವು ಕಂಡ ಸೌಂದರ್ಯವೇನು? ಎಲ್ಲರಂತೆ ನಾನೂ ಒಬ್ಬ ಸಾಮಾನ್ಯ ಹೆಣ್ಣು. ನನ್ನ ಸೃಷ್ಟಿಕ್ರಮದಲ್ಲಿ ಬ್ರಹ್ಮದೇವ ಯಾವ ಹೊಸ ವಿಧಾನವನ್ನೂ ಅನುಸರಿಸಲಿಲ್ಲ. ದೇಹವು ಅಕಿಂಚನ, ಅಶಾಶ್ವತ. ದೇಹಕ್ಕಿಂತ ದೇಹಾತೀತವಾದ ಆತ್ಮ ಶರಣರಿಗೆ ಹೆಚ್ಚು ಪ್ರಿಯವಾದದ್ದು. ಆತ್ರೋದ್ದಾರಕ್ಕಾಗಿ ಎಲ್ಲ ತ್ಯಾಗ, ಬಲಿದಾನಗಳಿಗೆ ಸಿದ್ದರಾಗಬೇಕೆಂದು ಶರಣಧರ್ಮ ಹೇಳುತ್ತದೆ. ನಿಮ್ಮ ಕಾಮಸಾಧನೆಯ ಪರಮಾರ್ಥವೆಂದು ನೀವು ತಿಳಿದಿರುವ ಈ ದೇಹ ರೂಪ ಯೌವನಗಳಿಗೆ ನಾನೀಯುವ ಬೆಲೆಯಿದು,” ಎನ್ನುತ್ತಾ, ಮಂದಾಸನದ ಮುಂದಿದ್ದ ದೀಪಸ್ತಂಭದಲ್ಲಿ ಉರಿಯುತ್ತಿದ್ದ ಬತ್ತಿಯೊಂದನ್ನು ತೆಗೆದುಕೊಂಡು ತನ್ನೆರಡು ಕೆನ್ನೆಗಳಿಗೆ ಉಜ್ಜಿದಳು. ಅಗ್ನಿಜ್ವಾಲೆ ಚುಂಬನೋತ್ಸಕ ಪ್ರಣಯಿಯಂತೆ ಚುರುಚುರುಗುಟ್ಟಿತು. ಕೆನ್ನೆಗಳು ಸುಟ್ಟು ಬೆಂದ ಮಾಂಸದ ವಾಸನೆ ಹರಡಿತು. ಲಾವಣ್ಯವತಿ ಸ್ಥಿರಗಂಭೀರಭಾವದಿಂದ ನಿಶ್ಚಲೆಯಾಗಿ ನಿಂತಿದ್ದಳು. ನೋವಿನ ಅರಿವೂ ಇರಲಿಲ್ಲ ಅವಳಿಗೆ.

ಬಿಜ್ಜಳನು ಚೀರಿದನು. ಒಂದೇ ಹಾರಿಕೆಗೆ ಬಳಿ ಸಾರಿ, ಬತ್ತಿಯನ್ನು ಕಿತ್ತುಕೊಂಡು ಕೆಳಗೆಸೆದು ಕಾಲಿಂದ ತುಳಿದು ಉರಿಯನ್ನಾರಿಸಿದನು.

ಚೀತ್ಕಾರದ ದನಿ ಕೇಳಿ ಪಸಾಯಿತರು, ಪ್ರಹರಿಗಳೂ ಓಡುತ್ತ ಬಂದರು. ದರ್ಶನಕ್ಕಾಗಿ ಸಮಯ ಕಾಯುತ್ತಿದ್ದ ಕ್ರಮಿತನೂ ಅವರ ಸಂಗಡಿದ್ದನು.

“ಈ ಉನ್ಮಾದಿನಿ, ಧೂರ್ತ ಹೆಂಗಸನ್ನು ಹೊರಗಟ್ಟಿರಿ!” -ಎಂದು ಹೇಳಿ ಬಿಜ್ಜಳನು ಕ್ರಮಿತನನ್ನು ಕರೆದುಕೊಂಡು ಅಲ್ಲಿಂದ ಸರಿದನು.

ಮುಖದ ಮೇಲಿನ ಸುಟ್ಟ ಗಾಯಗಳನ್ನು ಸೆರಗಿನಿಂದ ಮುಚ್ಚಿಕೊಂಡು ಲಾವಣ್ಯವತಿ ಹೊರಗೆ ಹೋಗಿ ಕಾದು ನಿಂತಿದ್ದ ಮೇನೆ ಹತ್ತಿದಳು.

ಪಸಾಯಿತರು, ಪ್ರಹರಿಗಳು ದಿಗ್ಗಾಂತರಾಗಿ ನೋಡುತ್ತಿದ್ದರು. ಪ್ರಭುಗಳೇಕೆ ಚೀರಿದರು? ದೀಪದ ಉರಿಯಿಂದ ಲಾವಣ್ಯವತಿ ಮುಖ ಸುಟ್ಟುಕೊಂಡದ್ದು