ಪುಟ:ಕ್ರಾಂತಿ ಕಲ್ಯಾಣ.pdf/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೮ ಕ್ರಾಂತಿ ಕಲ್ಯಾಣ ಕರ್ಣದೇವನೂ, ಮನೆಹೆಗ್ಗಡೆಯೂ ಬಿಜ್ಜಳನ ದೇಹವನ್ನು ಮಂಚದ ಮೇಲಿಡುತ್ತಿದ್ದಾಗ, ಮಾಧವ ನಾಯಕನ ದೃಷ್ಟಿ ಚಾವಡಿಯಲ್ಲಿನ ಲೇಖನೋಪಕರಣ, ಕಾಗದ ಪತ್ರಗಳ ಕಡೆ ತಿರುಗಿತು. ಅವುಗಳನ್ನು ಸರಿಪಡಿಸುವ ನೆವದಲ್ಲಿ ತಾನು ನಿರೀಕ್ಷಿಸುತ್ತಿದ್ದ ರಾಜನಿರೂಪವನ್ನು ಹುಡುಕಿದನು. ಅದು ಅಲ್ಲಿರಲಿಲ್ಲ. ಕುಮಾರ ಸೋಮೇಶ್ವರನಿಗೆ ಬರೆಯಲು ಪ್ರಾರಂಭಿಸಿ ಅರ್ಧ ಮುಗಿದಿದ್ದ ಪತ್ರ ದೊರಕಿತು. ಮುಂದೆ ಉಪಯುಕ್ತವಾಗುವುದೆಂದು ತಿಳಿದು ರಹಸ್ಯವಾಗಿ ತೆಗೆದಿಟ್ಟುಕೊಂಡನು. ಚಾವಡಿಯಿಂದ ಹೊರಗೆ ಬಂದು ಮಹಾದ್ವಾರದ ಬಳಿ ಪಂಜಿನ ಬೆಳಕಿನಲ್ಲಿ ಪತ್ರವನ್ನು ಓದಿದಾಗ ಅವನ ರಾಜಕೀಯ ಜಾಗ್ರತಿ ಎಚ್ಚೆತ್ತಿತು. ಕುಮಾರ ಸೋಮೇಶ್ವರನಿಗೆ ಆ ರಾತ್ರಿಯೇ ಅವಸರದ ಓಲೆ ಕಳುಹಿಸಲು ನಿರ್ಧರಿಸಿ ಅದರಂತೆ ಮಾಡಿದನು. ಈ ರಾಜಕೀಯ ಶೋಧನೆ ಸಾಧನಗಳಲ್ಲಿ ಮಾಧವ ನಾಯಕನು ನಿರತನಾಗಿದ್ದಾಗ, ಕೊಲೆ ನಡೆದ ಸರ್ವಾಧಿಕಾರಿ ಚಾವಡಿಯಲ್ಲಿ ಅಷ್ಟೇ ಸ್ವಾರಸ್ಯವಾದ ಇನ್ನೊಂದು ಪ್ರಸಂಗ ನಡೆಯಿತು. ಮಾಧವ ನಾಯಕನು ಹೊರಗೆಹೋದ ಕೊಂಚಹೊತ್ತಿನ ಮೇಲೆ ಕರ್ಣದೇವನು ಹೆಗ್ಗಡೆಯನ್ನು ಕರೆದು, “ಕೋಲೆ ನಡೆದದ್ದು ಹೇಗೆ ?” ಎಂದು ಕೇಳಿದನು. ಭಟರಿಂದ ಕೇಳಿದುದನ್ನು ಹೆಗ್ಗಡೆ ವಿವರಿಸಿದನು. “ಹಂತಕರು ಅರಮನೆಗೆ ಹೇಗೆ ಬಂದರೆಂಬುದು ತಿಳಿಯದೆ?” ಪ್ರಭುಗಳು ಸಾಮಂತರ ಸಭೆಯಿಂದ ಹಿಂದಿರುಗಿದಾಗ ಪರಿವಾರದೊಡನೆ ಒಳಗೆ ಬಂದು ಚಾವಡಿಯಲ್ಲಿ ಅವಿತುಕೊಂಡಿರಬೇಕು. ಪರಿವಾರದ ದೀವಟಿಗರಂತೆಯೇ ಅವರು ಸಮವಸ್ತ್ರಗಳನ್ನು ಧರಿಸಿದ್ದರು.” “ಸಾಮಂತ ಸಭೆಯಿಂದ ಹಿಂದಿರುಗಿದ ಅಣ್ಣನವರು ಆರೋಗಣೆಗಾಗಿ ಅಂತಃಪುರಕ್ಕೆ ಹೋಗದೆ ಚಾವಡಿಯಲ್ಲಿ ಕುಳಿತ ಕಾರಣ?” “ಮಂಗಳವೇಡೆಯಿಂದ ಬಂದ ಮೇಲೆ ಪ್ರಭುಗಳು ಯಾವಾಗಲೂ ರಾಜಕೀಯದಲ್ಲಿ ಆಸಕ್ತರಾಗಿರುತ್ತಿದ್ದರು. ಸರ್ವಾಧಿಕಾರಿ ಚಾವಡಿಯಲ್ಲೇ ಹೆಚ್ಚು ಹೊತ್ತು ಕಳೆಯುತ್ತಿದ್ದರು.” “ಇಂದು ರಾತ್ರಿ ಚಾವಡಿಯಲ್ಲಿ ಅಣ್ಣನವರೇನು ಮಾಡುತ್ತಿದ್ದರು?” “ಸಮುಖದ ಕರಣಿಕನನ್ನು ಕೇಳಿದರೆ ತಿಳಿಯುತ್ತದೆ.” ಕರ್ಣದೇವನ ಸಲಹೆಯಂತೆ ಹೆಗ್ಗಡೆ ಕರಣಿಕನನ್ನು ಕರೆಸಿದನು. ಬಿಜ್ಜಳನು