ಪುಟ:ಕ್ರಾಂತಿ ಕಲ್ಯಾಣ.pdf/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ ೩೮೧ ಒಡೆಯರು ಹೇಳುವುದು ನಿಜ. ಸತ್ತವರು ಬದುಕಿದ್ದನ್ನು ನಾವೆಲ್ಲೂ ಕೇಳಿಲ್ಲ.” ಎಂದು ಭಟರಲ್ಲೊಬ್ಬನು ಮಹಾದ್ವಾರದಿಂದ ಹೊರಗೆ, ಇನ್ನೊಬ್ಬನು ಅರಮನೆಯ ಕಡೆಗೆ ಹೋದರು. ಮಹಾದ್ವಾರದ ಹೊರಗೆ ಮಾಧವ ನಾಯಕನ ಸೈನ್ಯದಳಗಳು ಪಹರೆಯಿದ್ದವು. ಅರಮನೆಯ ಕಾವಲುಭಟರು ಅಂತಃಪುರ ಚಾವಡಿಗಳ ಬಳಿ ಇದ್ದರು. ಮಹಾದ್ವಾರದ ಒಳಗಿನ ಬಯಲು ನಿರ್ಜನವಾಗಿತ್ತು. ದೇಹಗಳನ್ನು ನೋಡಲು ಹೆಗ್ಗಡೆಯೊಡನೆ ಬಂದಾಗ ಕರ್ಣದೇವ ಇದನ್ನು ಗಮನಿಸಿದ್ದನು. - ಕಾವಲು ಭಟರು ಕಣ್ಮರೆಯಾಗುತ್ತಲೆ ಕರ್ಣದೇವ ಹೆಣಗಳನ್ನು ಮಲಗಿಸಿದ್ದ ಕಡೆ ಹೋಗಿ, ಜಗದೇಕಮಲ್ಲನ ದೇಹವನ್ನು ತೋಳು ಹಿಡಿದೆತ್ತಿ ಹೆಗಲಮೇಲೆ ಹಾಕಿಕೊಂಡು ಮೇನೆಯಲ್ಲಿ ತಂದು ಮಲಗಿಸಿದನು. ಅವನು ಭಾವಿಸಿದುದಕ್ಕಿಂತ ಬಹು ಬೇಗ ಈ ಕಾರ್ಯ ಮುಗಿಯಿತು. ನಾಲ್ಕು ಮೃತದೇಹಗಳಲ್ಲಿ ಒಂದು ಕಾಣೆಯಾದದ್ದನ್ನು ಮುಚ್ಚಿಡುವುದು ಹೇಗೆ? ಆ ಸಮಸ್ಯೆ ಉದ್ಭವಿಸಿದಾಗ ಪರಿಹಾರ ಯೋಚಿಸಬಹುದೆಂದು ಕರ್ಣದೇವ ತನ್ನನ್ನು ತಾನೇ ಸಮಾಧಾನ ಮಾಡಿಕೊಂಡನು. ಬೋಯಿಗಳು ಬಂದ ಕೂಡಲೆ ಕರ್ಣದೇವ ಮೇನೆಯಲ್ಲಿ ಕುಳಿತು ರಾಜಗೃಹಕ್ಕೆ ಹೋಗುವಂತೆ ಆಜ್ಞೆ ಮಾಡಿದನು. ಮೇನೆ ಕರ್ಣದೇವನದೆಂದು ತಿಳಿದಿದ್ದ ಸೈನ್ಯದಳಗಳವರು ಅದನ್ನು ತಡೆಯಲಿಲ್ಲ. ರಾಜಗೃಹ ಸೇರಿದೊಡನೆಯೇ ಕರ್ಣದೇವ ಮೇನೆಯಿಂದಿಳಿದು ಬೋಯಿಗಳನ್ನು ಕಳುಹಿಸಿ ಮನೆಹೆಗ್ಗಡೆಗೆ ಹೇಳಿ ಕಳುಹಿಸಿದನು. ಸಾವಿನಸುದ್ದಿ ಕೇಳಿ ಹೋದ ಕರ್ಣದೇವ ಮುಂಜಾವಿನವರೆಗೆ ಹಿಂದಿರುಗುವುದಿಲ್ಲವೆಂದು ಭಾವಿಸಿ ನಿದ್ರೆ ಮಾಡುತ್ತಿದ್ದ ಹೆಗ್ಗಡೆ ಕಣ್ಮರೆಸಿಕೊಂಡು ಬಂದಾಗ ಕರ್ಣದೇವ ಅವನನ್ನು “ಭಂಡರಾಜ ಏನು ಮಾಡುತ್ತಿದ್ದಾರೆ?” ಎಂದು ಹೇಳಿದನು. “ಸಂಜೆಯಿಂದ ಅವರಿಗೆ ಸ್ವಸ್ಥವಿಲ್ಲ, ಮಲಗಿದ್ದಾರೆ,” ಎಂದನು ಹೆಗ್ಗಡೆ. “ನಮ್ಮ ಗಣಿಕಾವಾಸ ಅವರಿಗೆ ಬೇಸರವಾಯಿತಂತೆ. ಸ್ವರ್ಗಲೋಕದ ಅಪ್ಸರೆಯರನ್ನು ಹುಡುಕಿಕೊಂಡು ಹೋಗಿದ್ದಾರೆ,” ಎಂದು ಕರ್ಣದೇವ ಹೇಳಿದಾಗ, ಏನೋ ಅನರ್ಥ ನಡೆದಿದೆಯೆಂದು ಹೆಗ್ಗಡೆ ತಿಳಿದನು. - “ಒಂದು ಸಾರಿ ಒಳಗೆ ಹೋಗಿ ನೋಡಿ ಬರುತ್ತೇನೆ” ಎಂದು ಹೆಗ್ಗಡೆ ಹೊರಟಾಗ ಕರ್ಣದೇವ ಅವನ್ನು ತಡೆದು ರಹಸ್ಯವಾಗಿ, “ಜಗದೇಕಮಲ್ಲರಸರು ಮದ್ಯಪಾನ ಮಾಡಿ ಎಚ್ಚರ ತಪ್ಪಿ ಮೇನೆಯಲ್ಲಿ ಮಲಗಿದ್ದಾರೆ. ಅವರನ್ನು ನಾವು