ಪುಟ:ಕ್ರಾಂತಿ ಕಲ್ಯಾಣ.pdf/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ ೩೮೩ ಮೂರ್ಛಾರೋಗದಿಂದ ಅಸ್ವಸ್ಥರಾಗಿ ಮಲಗಿದ್ದ ಜಗದೇಕಮಲ್ಲರಸರು ನಿದ್ರೆಯಲ್ಲಿಯೇ ಅಸು ನೀಗಿದರೆಂದು, ಅರಮನೆಯ ಎಲ್ಲ ಕಡೆ ದೀಪಗಳು ಹೊತ್ತಿಸಲ್ಪಟ್ಟವು. ಗಣಿಕಾ ವಾಸದ ಹೆಗ್ಗಡಿತಿ ದಾಸಿ ಊಳಿಗಿತ್ತಿಯರ ರೋದನ ಎಲ್ಲಿ ಕಡೆ ಕೇಳಬಂದಿತು. ಸೂರ್ಯದೇವನು ಪೂರ್ವ ದಿಗಂತದಲ್ಲಿ ಉದಯಿಸುತ್ತಿದ್ದಂತೆ ಪಟ್ಟಾಭಿಷಿಕ್ತ ಚಾಲುಕ್ಯ ಅರಸು ಜಗದೇಕಮಲ್ಲನ ಮರಣದ ಸುದ್ದಿಯನ್ನು ಕರ್ಣದೇವನ ಭಟರು ನಗರದಲ್ಲಿ ಅಧಿಕೃತವಾಗಿ ಪ್ರಕಟಿಸಿದರು. - ಜಗದೇಕಮಲ್ಲ ಮತ್ತು ಬಿಜ್ಜಳರಾಯರ ಅಂತ್ಯಕರ್ಮವು ಆ ದಿನ ಅಪರಾಹ್ನ ನಗರದ ಹೊರಗಿನ ರುದ್ರಭೂಮಿಯಲ್ಲಿ ರಾಜವೈಭವದಿಂದ ನಡೆಯಿತು. ಆಮೇಲಿನ ಇತಿಹಾಸದಲ್ಲಿ ಆ ರಾತ್ರಿಯ ದುರಂತ ಘಟನೆಗಳು ಜನಶೃತಿಯ ದಂತಕಥೆಗಳಾಗಿ ಮಾತ್ರವೇ ಉಳಿದವು. ಬಿಜ್ಜಳನ ವಧೆಯಲ್ಲಿ ಜಗದೇಕಮಲ್ಲ ಬೊಮ್ಮರಸರ ಪಾತ್ರ ಯಾರಿಗೂ ತಿಳಿಯಲಿಲ್ಲ. ಅಂದಿನ ದುರಂತದಿಂದ ತಪ್ಪಿಸಿಕೊಂಡ ಬೊಮ್ಮರಸನು ಮುಂದೆ ನಿಡುಗಲ್ ಗುತ್ತಿ ರಾಜ್ಯಗಳ ಸಾಮಂತನಾಗಿ ಅನೇಕ ವರ್ಷಗಳು ಜೀವಿಸಿದ್ದನು. ಅವನು ತನ್ನ ಒಂದು ಶಾಸನದಲ್ಲಿ, “ಬಿಜ್ಜಗ ಶಿರಚ್ಛೇದಕ,” ಎಂದು ತನ್ನನ್ನು ಹೊಗಳಿಕೊಂಡಿದ್ದಾನೆ. ಬೊಮ್ಮರಸನ ಹೇಳಿಕೆ ಮತ್ತು ಆ ತರುವಾಯ ಪ್ರಚಾರಕ್ಕೆ ಬಂದ ಜನ ಶೃತಿದಂತಕಥೆಗಳ ಆಧಾರದಿಂದ ಕವಿ ಸಂಪ್ರದಾಯದಂತೆ ಪುರಾಣ ಚರಿತ್ರೆಗಳನ್ನು ಬರೆದ ಶರಣ ಕವಿಗಳು, ವಾಸ್ತವಿಕ ವ್ಯಕ್ತಿಗಳ ಹೆಸರು ಪರಿಚಯಗಳನ್ನು ಜನಸಾಮಾನ್ಯರಿಂದ ಮುಚ್ಚಿಡಲು ಉದ್ದೇಶಿಸಿ, ಜಗದೇಕಮಲ್ಲ ಬೊಮ್ಮರಸರ ಹೆಸರುಗಳನ್ನು ಜಗದೇವ-ಮಲ್ಲ-ಬೊಮ್ಮಎಂದು ಪಲ್ಲಟಗೊಳಿಸಿದರು. ಆ ಇಬ್ಬರು “ವೀರಕುಮಾರರ ಸಾಹಸಕ್ಕೆ ಪ್ರಚೋದನೆಯಿತ್ತ ರಾಣಿ ಕಾಮೇಶ್ವರಿ, ಆ ಇಬ್ಬರು ತಾಯಿ ಸೋಮಾಂಬೆ ಅರ್ಥಾತ್ ಸೋಮೇಶ್ವರಿಯಾದಳು. ಈ ಮೂವರನ್ನು ಕುರಿತ ದಂತಕಥೆಗಳು ಆಮೇಲೆ ರಚಿತವಾದವು. ಆ ರಾತ್ರಿಯ ದುರಂತ ಘಟನೆಗಳಿಂದ ಮುಂದೆ ಚಿತ್ರ ವಿಚಿತ್ರ ಹಿಂಸೆಗೊಳಗಾದ ಶರಣರೇ, ಪೂರ್ವ ಯೋಜನೆಯಂತೆ ನಡೆದ ಬಿಜ್ಜಳನ ವಧೆಗೆ ಕಾರಣರೆಂಬ ಪವಿತ್ರ ಸ್ನತಿಗೆ ಕಳಂಕ ಹಚ್ಚುವ ಆತ್ಮದೂಷಣೆಯ ಕಾರ್ಯ ನಡೆಯಿತು.

  • ಷಡಕ್ಷರ ದೇವನ “ವೃಷಭೇಂದ್ರ ವಿಜಯ'ದಲ್ಲಿ ಜಗದೇವ, ಮಲ್ಲ, ಬೊಮ್ಮ ಎಂಬ ಮೂವರ ಹೆಸರುಗಳೂ ದೊರಕುತ್ತವೆ.