ಪುಟ:ಕ್ರಾಂತಿ ಕಲ್ಯಾಣ.pdf/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೫ ೬. ಮಹಾಪ್ರಸ್ಥಾನ ಹೊನ್ನಮ್ಮನ ಚಾವಡಿಯಲ್ಲಿ ಬಿಜ್ಜಳನ ವಧೆ ನಡೆದ ಹಿಂದಿನ ದಿನ ಅಪರಾಹ್ನ ಪಡಿಹಾರಿ ಅಪ್ಪಣ್ಣನು ಕೂಡಲ ಸಂಗಮದಿಂದ ಕಲ್ಯಾಣಕ್ಕೆ ಹಿಂದಿರುಗಿದನು. ರಾಜಧಾನಿಯನ್ನು ಪರಿತ್ಯಜಿಸಿ ಚಾಲುಕ್ಯ ರಾಜ್ಯದ ದಕ್ಷಿಣದ ಅರಣ್ಯ ಪ್ರದೇಶಕ್ಕೆ ವಲಸೆ ಹೋಗಬೇಕೆಂಬ ಶರಣರ ಸಲಹೆಗೆ ಬಸವಣ್ಣನವರು ನೇರವಾದ ಉತ್ತರ ಕೊಡದೆ, ಬೆಡಗಿನ ವಚನವೊಂದನ್ನು ಕಳುಹಿಸಿದ್ದರು ವಚನ ಈ ರೀತಿಯಿತ್ತು : ಜೋಳವಾಳಿನವ ನಾನಲ್ಲ, ವೇಳೆಯಾಳಿನವ ನಾನಯ್ಯ. ಹಾಳುಗೆಟ್ರೋಡುವ ಆಳು ನಾನಲ್ಲಯ್ಯ ಕೇಳು, ಕೂಡಲು ಸಂಗಮದೇವ, ಮರಣವೇ ಮಹಾನವಮಿ. ಸಕಲೇಶ ಮಾದರಸರು, ಮಾಚಿದೇವರು, ಚೆನ್ನಬಸವಣ್ಣನವರು ಏಕಾಂತ ಗೃಹದಲ್ಲಿ ಸಮಾಲೋಚನೆ ನಡೆಸುತ್ತಿದ್ದಾಗ ಪಡಿಹಾರಿ ಅಪ್ಪಣ್ಣ ಒಳಗೆ ಬಂದು ಕೈಮುಗಿದು ಬಸವಣ್ಣನವರ ಓಲೆಯನ್ನು ಕೊಟ್ಟನು. ಚೆನ್ನಬಸವಣ್ಣನವರು ಓದಿ ಅಪ್ರತಿಭರಾಗಿ ಸಕಲೇಶ ಮಾದರಸರಿಗೆ ಕೊಟ್ಟರು. ಅವರಿಂದ ಅದು ಮಾಚಿದೇವರ ಕೈಸೇರಿತು. - ತುಸು ಹೊತ್ತಿನ ಮೇಲೆ ಚೆನ್ನಬಸವಣ್ಣನವರು ಪಡಿಹಾರಿಯ ಕಡೆ ತಿರುಗಿ, “ಅಣ್ಣನವರು ಮತ್ತೇನೂ ಹೇಳಿ ಕಳುಹಿಸಲಿಲ್ಲವೆ?” ಎಂದು ಕೇಳಿದರು. “ಇಲ್ಲ, ಹೇಳಿ ಕಳುಹಿಸಲಿಲ್ಲ? –ಪಡಿಹಾರಿ ಉತ್ತರ ಕೊಟ್ಟನು. “ನೀವು ಸಂಗಮದಲ್ಲಿ ಎಷ್ಟು ದಿನಗಳಿದ್ದಿರಿ?” ಒಂದು ದಿನ ಮಾತ್ರ ಸಂಗಮವನ್ನು ಸೇರಿದ ಮರುದಿನವೇ ನಾನು ಪುನಃ ಅಲ್ಲಿಂದ ಹೊರಟೆ.” “ಅಂದರೆ ನೀವು ನಾಲ್ಕು ದಿನಗಳ ಮೊದಲೇ ಸಂಗಮ ಬಿಟ್ಟಿರಬೇಕು. ಪಯಣದಲ್ಲಿ ತಡವಾಗಲು ಕಾರಣ?”