ಪುಟ:ಕ್ರಾಂತಿ ಕಲ್ಯಾಣ.pdf/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೬ ಕ್ರಾಂತಿ ಕಲ್ಯಾಣ “ಗಂಗಾಂಬಿಕೆ ಅಮ್ಮನವರ ಮೇನೆ, ರಕ್ಷಕ ಭಟರು, ಸಂಗಡ ಇದ್ದುದರಿಂದ ತಡವಾಯಿತು.” ಅಪ್ಪಣ್ಣನ ಉತ್ತರ ಕೇಳಿ ಆ ಮೂವರು ಜಂಗಮರು ಪರಸ್ಪರ ಮುಖ ನೋಡಿಕೊಂಡರು. ಅವರ ಹೃದಯದಲ್ಲಿ ಏಕಕಾಲದಲ್ಲಿ ಒಂದೇ ಭಾವನೆ ಹೊಳೆಯಿತು. ಗಂಗಾಂಬಿಕೆಯ ಮುಖಾಂತರ ಬಸವಣ್ಣನವರು ರಹಸ್ಯ ಸಂದೇಶ ಕಳುಹಿಸಿರಬಹುದೆ? ಅದು ಬಸವಣ್ಣನವರ ಕಾರ್ಯವಿಧಾನವಲ್ಲ. ಆದರೂ ವಿಶೇಷ ಪರಿಸ್ಥಿತಿಯಲ್ಲಿ ವಿಶೇಷ ಕಾರ್ಯವಿಧಾನ ಅನಿವಾರ್ಯವಾಗುವುದು, ಎಂದು ಅವರು ಯೋಚಿಸಿದರು. ಬಸವಣ್ಣನವರ ಅನುಮತಿ ಪಡೆದೇ ಕಲ್ಯಾಣವನ್ನು ಬಿಡಬೇಕೆಂಬುದು ಅವರ ನಿರ್ಧಾರವಾಗಿತ್ತು. ಈ ಕಾರಣದಿಂದ ವಲಸೆ ಹೊರಡುವ ದಿನವಿನ್ನೂ ಗೊತ್ತಾಗಿರಲಿಲ್ಲ. “ನೀವು ಬಸವಣ್ಣನವರಿಗೆ ಇಲ್ಲಿಯ ಪರಿಸ್ಥಿತಿ ಎಲ್ಲವನ್ನೂ ವಿವರಿಸಿದಿರಾ? -ಮಾಚಿದೇವರು ಅಪ್ಪಣ್ಣನನ್ನು ಕೇಳಿದರು. “ನಾನು ಕಲ್ಯಾಣವನ್ನು ಬಿಡುವವರೆಗೆ ನಡೆದ ಎಲ್ಲ ವಿಚಾರಗಳನ್ನೂ ಅಣ್ಣನವರಿಗೆ ತಿಳಿಸಿದೆ.” “ಮಧುವರಸಾದಿಗಳನ್ನು ಶೂಲಕ್ಕೇರಿಸಿದ ಸುದ್ದಿ ತಿಳಿದಾಗ ಅವರೇನೆಂದರು?” “ಸ್ತಂಭಿತರಂತೆ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಬಳಿಕ, ಅಧರ್ಮದ ಏಕಾಧಿಪತ್ಯ ಪ್ರಾರಂಭವಾಯಿತು, ಅಪ್ಪಣ್ಣ. ಇನ್ನು ಕಲ್ಯಾಣ ಉಳಿಯುವುದಿಲ್ಲ, ಎಂದು ಹೇಳಿ ನಿಟ್ಟುಸಿರಿಟ್ಟರು.' “ಬಿಜ್ಜಳರಾಯರ ವಿಚಾರವಾಗಿ ಅವರೇನೂ ಹೇಳಲಿಲ್ಲವೆ?” “ನಾನು ಅಣ್ಣನವರ ಸಂಗಡ ಸುಮಾರು ಒಂದು ಪ್ರಹರ ಕಾಲ ಮಾತನಾಡುತ್ತಿದ್ದೆ. ಅವರು ಒಂದು ಸಾರಿಯೂ ಬಿಜ್ಜಳರಾಯರ ಹೆಸರು ಹೇಳಲಿಲ್ಲ.”ಕೆಲವು ಕ್ಷಣಗಳು ಯೋಚಿಸಿ ಅಪ್ಪಣ್ಣ ಉತ್ತರ ಕೊಟ್ಟನು. “ಅಣ್ಣನವರ ಬದುಕು ಸಂಗಮದಲ್ಲಿ ಹೇಗೆ ನಡೆದಿದೆ?” -ಸಕಲೇಶ ಮಾದರಸರು ಅಪ್ಪಣ್ಣನನ್ನು ಕೇಳಿದರು. ಅಪ್ಪಣ್ಣ ಹೇಳಿದನು : “ಗುರುಕುಲದ ವಿದ್ಯಾರ್ಥಿ ವಟುಗಳ ಶ್ರಮದಾನದಿಂದ, ಮಲಪ್ರಭೆಯ ತಟದಲ್ಲಿ ಸಂಗಮೇಶ್ವರ ದೇಗುಲದೆದುರಿಗೆ ಮರಬಿದಿರುಗಳಿಂದ ಒಂದು ಕಲ್ಯಾಣಮಂಟಪ ನಿರ್ಮಿತವಾಗಿದೆ. ಅಣ್ಣನವರು ಅಲ್ಲಿ ಪ್ರತಿದಿನ ಮುಂಜಾವಿನಲ್ಲಿ ಎರಡು ಪ್ರಹರಗಳ ಕಾಲ ವಿದ್ಯಾರ್ಥಿ ವಟುಗಳಿಗಾಗಿ, ಸಂಜೆ ಒಂದು ಪ್ರಹರ ಕಾಲ ಗ್ರಾಮಸ್ಥರಿಗಾಗಿ ಪ್ರವಚನ ನಡೆಸುತ್ತಿದ್ದಾರೆ. 'ಗುರುಕುಲದಲ್ಲಿ