ಪುಟ:ಕ್ರಾಂತಿ ಕಲ್ಯಾಣ.pdf/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೩೯0 “ಇಪ್ಪೆಯ ಹೂವನನುಗೊಳಿಸಲು ಇಪ್ಪೆ ಹಿಪ್ಪೆಯಾಯಿತ್ತು ! ಸರ್ಪನ ಶಿರ ಕಂಠದಲ್ಲಿ ಮೂಗುತಿಯ ಸರಗೊಳಿಸಿದೆನಯ್ಯ, ನೀವಲ್ಲಿದ್ದರೇನು ? ನಾವಿಲ್ಲಿದ್ದರೇನು ? ನಮ್ಮ ನಿಮ್ಮ ಸಂಸರ್ಗದಲ್ಲಿ ನಿರುಪಮ ನಿರಾಕಾರ ಮೂರ್ತಿಯಾಗಿ ನಿರವಯವನೈದಿ ನಿಜಸುಖಿಗಳಾದೆವು ! ಬಸವನಲ್ಲಿ ಎನಗೆ ತೆರಹಿಲ್ಲವಯ್ಯ, ಭಾವಶೂನ್ಯಳು ನಾನು, ಸಂಗಯ್ಯ!”% ಮಹಮನೆಯಲ್ಲಿ ಮರುದಿನ ಮುಂಜಾವಿನಲ್ಲಿಯೇ ವಲಸೆಯ ಸಿದ್ಧತೆ ಪ್ರಾರಂಭವಾಯಿತು. ಪೂರ್ವಾಹ್ನ ಮೊದಲ ಜಾಮ ಮುಗಿಯುವಷ್ಟರಲ್ಲಿ ಶರಣರು ಪೂಜೆ ಆರೋಗಣೆಗಳನ್ನು ಮುಗಿಸಿ ಪ್ರವಾಸಕ್ಕೆ ಬೇಕಾದ ದವಸ ಧಾನ್ಯ ಪಾತ್ರೆ ಪರಿಕರಗಳನ್ನು ಗಾಡಿಗಳಿಗೆ ಹೇರಿ ಹೊರಡಲು ಸನ್ನದ್ಧರಾಗುತ್ತಿದ್ದಂತೆ ಮಹಾದ್ವಾರದಲ್ಲಿ ಹರಹರ ಮಹಾದೇವ ಎಂಬ ಬಹುಧ್ವನಿ ಕೇಳಿಸಿತು. ಸಪಾದಲಕ್ಷದಿಂದ ಕಲ್ಯಾಣಕ್ಕೆ ಯಾತ್ರಾರ್ಥಿಗಳಾಗಿ ಬಂದಿದ್ದ ಸುಮಾರು ನೂರು ಜನರ ಜಂಗಮ ತಂಡವೊಂದು ಮಹಮನೆಯ ಆತಿಥ್ಯವನ್ನು ಬಯಸಿ ಬಂದಿತ್ತು. ಸಕಲೇಶ ಮಾದರಸ ಮಾಚಿದೇವರು ಅವರನ್ನು ಎದುರುಗೊಂಡು, “ನಾವು ವಲಸೆ ಹೊರಟಿದ್ದೇವೆ. ಅಯ್ಯನವರೆ, ನೀವು ಅಕಾಲದಲ್ಲಿ ಇಲ್ಲಿಗೆ ಬಂದಿರಿ,” ಎಂದು ವಿನಯದಿಂದ ಹೇಳಿದರು.

  • ಶೂನ್ಯ ಸಂಪಾದನೆ ಪುಟ. ೪೫೮ : ಇಪ=ಹೂವು (ಶ್ಲೇಷಾರ್ಥ) ಇರುವಿಕೆ, ಸಕ್ಕರೆ ತೆಗೆಯಲು ಇಪ್ಪೆ ಹೂವನ್ನು ಕುಟ್ಟಿ ಹಿಂಡಿದ ಮೇಲೆ ಉಳಿಯುವ ಚರಟವು ಹಿಪ್ಪೆ, “ಇಪ್ಪೆ ಹೂವನ್ನು ಹಿಂಡುವಂತೆ ನನ್ನ ಇರುವಿಕೆಯನ್ನು ಮುಕ್ತಿಗೆ ಅನುವುಗೊಳಿಸಲು ವಾಸನೆಗಳನ್ನೆಲ್ಲ ಹಿಂಡಿ ತೆಗೆದು ಹಿಷೆಯಾಗಿ ಮಾಡಿದ್ದೇನೆ... “ಸರ್ಪನೆಂದರೆ ಕುಂಡಲಿ, ಸರ್ಪನ ಶಿರಕಂಠಗಳು ಸಹಸ್ತಾರ ವಿಶುದ್ಧಿ ಚಕ್ರಗಳು, ಮೂಗು ವಾಸನೆಗಳ ಸಂಕೇತ. ಆ ವಾಸನೆಗಳನ್ನು ಹಿಡಿದಿಡುವ ಸಾಧನ ಮೂಗುತಿ...” “ಕುಂಡಲಿನಿಯನ್ನು ವಿಶುದ್ಧಿ ಚಕ್ರಕ್ಕೇರಿಸಿ ವಾಸನೆಗಳನ್ನು ನಾಶಮಾಡಿ ಸಹಸ್ರಾರಕ್ಕೆ ಸರ ಕಟ್ಟಿದ್ದೇನೆ. ನೀವು ಅಲ್ಲಿದ್ದರೇನು? ನಾನು ಇಲ್ಲಿದ್ದರೇನು ? ನನ್ನ ನಿಮ್ಮ ಒಡನಾಟದಲ್ಲಿ ನಿರುಪಮ ನಿರಾಕಾರ ಪರಬ್ರಹ್ಮ ಪ್ರತ್ಯಕ್ಷವಾಗಿದೆ. ಭಾವಶೂನ್ಯಳಾದ ನನಗೆ ಈಗ ನಾನು ಬೇರೆ ನೀವು ಬೇರೆ ಎಂಬ ಪ್ರತ್ಯೇಕ ಭಾವನೆಯಿಲ್ಲ. ನೀವೇ ನಾನು, ನಾನೇ ನೀವು ನಿಮ್ಮನ್ನು ನೋಡಲು ನಾನು ಸಂಗಮಕ್ಕೆ ಬರುವ ಅಗತ್ಯವೇನಿದೆ?” ಎಂದು ವಚನದ ಭಾವಾರ್ಥ, ಗ್ರಾಮವಾಸಿಗಳೂ ಹಿಪ್ಪೆಯ ಹೂವಿಂದ ಸಕ್ಕರೆ ತೆಗೆದು ತಿನ್ನುವುದುಂಟು. ಸಿಹಿಕಳ್ಳನ್ನೂ ಮಾಡುತ್ತಾರೆ. 'ಆಲೆ ಇಲ್ಲದ ಊರಿಗೆ ಇಪ್ಪೆ ಹೂವೆ ಸಕ್ಕರೆ, ಎಂಬ ಗಾದೆಯೂ ರೂಢಿಯಲ್ಲಿದೆ.