ಪುಟ:ಕ್ರಾಂತಿ ಕಲ್ಯಾಣ.pdf/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೮ ಕ್ರಾಂತಿ ಕಲ್ಯಾಣ ಅಲ್ಲಿದ್ದ ಭಟರನ್ನು ಕೇಳಿದರು ಮಾಚಿದೇವರು. “ಚಿಕ್ಕ ಡಣ್ಣಾಯಕರ ಆಜ್ಞೆಯಂತೆ ನಾವು ದೀಪಗಳನ್ನು ಆರಿಸಿ ಬಾಗಿಲುಗಳನ್ನು ಭದ್ರಪಡಿಸಿದೆವು, ಅಯ್ಯನವರೆ, ಶರಣರೆಲ್ಲ ಅನುಭವಮಂಟಪದ ಸಭಾಂಗಣದಲ್ಲಿದ್ದಾರೆ,” ಎಂದು ಹೇಳಿ ಅವರು ದಿಡ್ಡಿ ಬಾಗಿಲನ್ನು ಪುನಃ ಭದ್ರಗೊಳಿಸಿ ಮಾಚಿದೇವರನ್ನು ಸಭಾಂಗಣಕ್ಕೆ ಕರೆದುಕೊಂಡು ಹೋದರು. ಸಭಾಂಗಣದಲ್ಲಿ ವೇದಿಕೆಯ ಮೇಲೆ ಎರಡು ದೀಪಸ್ತಂಭಗಳಲ್ಲಿ ಮಾತ್ರ ದೀಪಗಳು ಮಸಕಾಗಿ ಉರಿಯುತ್ತಿದ್ದವು. ಅಧ್ಯಕ್ಷಪೀಠದಲ್ಲಿ ಸಕಲೇಶ ಮಾದರಸರು. ನಾಗಲಾಂಬೆ ನೀಲಲೋಚನೆಯರು ಅಧ್ಯಕ್ಷರ ಎದುರಿಗೆ ಕುಳಿತು ಮೆಲ್ಲನಿಯಲ್ಲಿ ವಚನ ಗೀತಗಳನ್ನು ಹಾಡುತ್ತಿದ್ದರು. ಸಭಾಂಗಣದ ಉಳಿದ ಭಾಗವೆಲ್ಲ ಕತ್ತಲು. ವಲಸೆ ಹೊರಡಲು ಸಿದ್ದರಾಗಿದ್ದ ಶರಣೆಯರು ಅಲ್ಲಿ ಪ್ರತ್ಯೇಕವಾಗಿ ಕುಳಿತು ವಚನಗೀತಗಳನ್ನು ಕೇಳುತ್ತಿದ್ದರು. ಮಾಚಿದೇವರು ಚೆನ್ನಬಸವಣ್ಣನವರ ಬಳಿ ಹೋಗಿ ಕುಳಿತು, “ನಾನು ಅತಿಥಿಗಳನ್ನು ಹೊಳೆ ದಾಟಿಸಿ ಬರುವಷ್ಟರಲ್ಲಿ ಇಲ್ಲಿ ಏನೋ ನಡೆದಂತಿದೆ!” ಎಂದರು. ಧ್ಯಾನಮಗ್ನರಂತೆ ಮೌನವಾಗಿ ಕುಳಿತಿದ್ದ ಚೆನ್ನಬಸವಣ್ಣನವರು ಕರೆದು ಮಾಚಿದೇವರ ಮೇಲೆ ಭರವಸೆಯ ದೃಷ್ಟಿ ಬೀರಿ, “ಬಂದಿರಾ ಅಣ್ಣ ! ನೀವು ಹೋದ ಮೇಲೆ ತಲ್ಲಣಗೊಳಿಸುವ ಘಟನೆಯೊಂದು ಇಲ್ಲಿ ನಡೆಯಿತು. ಅದರಿಂದಲೆ ದೀಪಗಳನ್ನು ಆರಿಸಿ ಬಾಗಿಲುಗಳನ್ನು ಭದ್ರಪಡಿಸುವಂತೆ ಹೇಳಿದೆ,” ಎಂದರು. “ಏನು ನಡೆಯಿತು?” “ಸಂಜೆ ಮುಗಿದು ಕತ್ತಲೆ ಕವಿಯುತ್ತಿದ್ದಂತೆ ಮಹಾದ್ವಾರದಲ್ಲಿ ಕಾವಲಿದ್ದ ಶರಣ ಭಟರು, ಮಾಧವ ನಾಯಕನ ಸೈನ್ಯದಳಗಳು ಮಹಮನೆಯನ್ನು ಸುತ್ತು ಗಟ್ಟುತ್ತಿರುವುದಾಗಿ ಹೇಳಿದರು. ನಾನೇ ಹೊರಗೆ ಹೋಗಿ ನೋಡಿದೆ. ಮಹಮನೆಯ ಸುತ್ತ ಸುಮಾರು ಐನೂರು ಮಾರು ದೂರದಲ್ಲಿ ಸೈನ್ಯದಳಗಳು ಪಹರೆಯಿದ್ದವು. ತ್ರಿಪುರಾಂತಕ ಕೆರೆಯ ಪಾರ್ಶ್ವದ ಹಾದಿಯಿಂದ ಸೈನ್ಯದಳಗಳು ಬರುತ್ತಿದ್ದವು. ಮಹಮನೆಯನ್ನು ಮುತ್ತುವುದು ಉದ್ದೇಶವೆಂದು ನಾನು ಭಾವಿಸಿದೆ. ದೀಪಗಳನ್ನು ಆರಿಸಿ ಬಾಗಿಲುಗಳನ್ನು ಬಂಧಿಸುವಂತೆ ಆಜ್ಞೆಮಾಡಿದೆ. 'ಈ ವಿಪತ್ತಿನಲ್ಲಿ ನಾವೇನು ಮಾಡುವುದು?” ಎಂದು ಸಕಲೇಶ ಮಾದರಸರನ್ನು ಕೇಳಿದೆ. ಅವರು ಹೇಳಿದರು 'ಮಹಮನೆಯನ್ನು ನಾಶಮಾಡುವುದು ಮಾಧವ ನಾಯಕನ ಉದ್ದೇಶವಾದರೆ ಅದನ್ನು ಎದುರಿಸುವ ಶಕ್ತಿ ನಮಗಿಲ್ಲ. ಮಹಮನೆಯೊಡನೆ ನಾವೂ ನಾಶವಾಗಲು