ಪುಟ:ಕ್ರಾಂತಿ ಕಲ್ಯಾಣ.pdf/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೧ ಸ್ತಬ್ದವು ನಿರ್ಜಿವವೂ ಆಗಿದ್ದ ನಗರದ ಬೀದಿಗಳಲ್ಲಿ ಶರಣರು ಚಲಿಸುವ ದೀಪಗಳಂತೆ ಅವ್ಯಕ್ತ ಅಗೋಚರ ಆತ್ಮಕಾಂತಿಯನ್ನು ಹರಡುತ್ತ ನಡೆದರು. ಮುಂದೆ ಮಡಿವಾಳ ಮಾಚಿದೇವರು, ಸಕಲೇಶ ಮಾದರಸರು ಮತ್ತು ಚೆನ್ನಬಸವಣ್ಣನವರು. ಅವರ ಹಿಂದೆ ಪಾತ್ರ ಹರಿಕರಗಳಿಂದ ತುಂಬಿದ ಗಾಡಿಗಳು, ಅವುಗಳ ಹಿಂದೆ ನಾಗಲಾಂಬೆ ನೀಲಲೋಚನೆ ಗಂಗಾಂಬಿಕೆಯರ ನೇತೃತ್ವದಲ್ಲಿ ಶರಣೆಯರು, ಅವರ ಹಿಂದೆ ಸೊಡ್ಡಲ ಬಾಚರಸ, ಪಡಿಹಾರಿ ಉತ್ತಣ್ಣ, ಶೂಲದ ಬೊಮ್ಮಯ್ಯ ಇವರ ನೇತೃತ್ವದಲ್ಲಿ ಶರಣರು, ಈ ರೀತಿ ನಡೆದಿತ್ತು ಆ ಚರಿತ್ರಾರ್ಹ ವಲಸೆಯ ಯಾತ್ರಾದಳ. ನಗರದ ನೈರುತ್ಯ ಬಾಗಿಲಿಗೆ ಬರುತ್ತಲೆ ಮಾಚಿದೇವರು ಪೂರ್ವ ಸಂಕೇತದಂತೆ “ಕಲಿದೇವರದೇವ ಪರಾಕ್ !” ಎಂದು ಉಗ್ಗಡಿಸಿದರು. ಪಾರ್ಶ್ವದ ಮಂಟಪದಲ್ಲಿ ಕಾದು ನಿಂತಿದ್ದ ಕಾವಲು ಪಡೆಯ ನಾಯಕ ನಾಗರಾಜನು ಎದುರಿಗೆ ಬಂದು ವಂದಿಸಿ, “ಮೂಡಣ ದಿಕ್ಕಿನಲ್ಲಿ ಅರುಣೋದಯದ ಮುಂಬೆಳಗು ಕಾಣುತ್ತಿದೆಯೇ, ಅಯ್ಯನವರೇ?” ಎಂದನು. ಮಾಚಿದೇವರು ತಲೆಯೆತ್ತಿ ನೋಡಿದರು. ಮೂಡಣ ದೆಸೆ ಕೆಂಪಡರಿ ನಕ್ಷತ್ರಗಳು ಮಲಿನ ಕಾಂತಿಯಿಂದ ಬೆಳಗುತ್ತಿದ್ದವು. ಅವುಗಳಲ್ಲಿ ಹೆಚ್ಚು ಕಾಂತಿಯಿಂದ ಕೂಡಿದ ನಕ್ಷತ್ರದ ಕಡೆ ತೋರಿಸಿ ಮಾಚಿದೇವರು, “ಆ ಬೆಳ್ಳಿ ಚಿಕ್ಕಿ ಅರುಣೋದಯದ ಸೂಚನೆ!” ಎಂದರು. “ಹಾಗಾದರೆ ಮಹಾದ್ವಾರವನ್ನು ತೆರೆಯಲು ಆಜ್ಞೆ ಮಾಡುತ್ತೇನೆ” ಎಂದು ನಾಯಕನು ಕಾವಲು ಭಟರಿಗೆ ಸನ್ನೆ ಮಾಡಿದನು. ಅಗುಳಿ ಅಡ್ಡ ಮರಗಳನ್ನು ತೆರೆದು ಎಂಟು ಜನ ಬೃಹದಾಕಾರದ ಬಾಗಿಲುಗಳನ್ನು ಹಿಂದಕ್ಕೆಳೆದರು. ಪಾತ್ರೆ ಪರಿಕರಗಳಿಂದ ತುಂಬಿದ ಗಾಡಿಗಳು, ಅನಂತರ ಶರಣ ಶರಣೆಯರು ಮಹಾದ್ವಾರವನ್ನು ದಾಟಿ ಹೊರಗೆ ಹೋಗುತ್ತಿದ್ದಂತೆ ನಾಗರಾಜನು ಮಾಚಿ ದೇವರನ್ನು ಪ್ರತ್ಯೇಕವಾಗಿ ಕರೆದು, "ಶರಣರ ಯಾತ್ರಾದಳ ಹೊರಗೆ ಹೋದ ಕೂಡಲೇ ನಾವು ಮಹಾದ್ವಾರವನ್ನು ಪುನಃ ಮುಚ್ಚಬೇಕಾಗಬಹುದು, ಅಯ್ಯನವರೆ,” ಎಂದು ಹೇಳಿ ಮುದ್ರೆಯೊಡೆಯದ ಆಜ್ಞೆಯೊಂದನ್ನು ತೋರಿಸಿದನು. “ಇದು ಯಾರ ಆಜ್ಞಾಪತ್ತ?” ಮಾಚಿದೇವರು ಕುತೂಹಲದಿಂದ ಪ್ರಶ್ನಿಸಿದರು. “ಬಿಜ್ಜಳರಾಯರ ಮಹಾಸೇನಾನಿ ಮಾಧವ ದಂಡನಾಯಕರ ಆಜ್ಞಾಪತ್ರ. ಕೊಂಚ ಹೊತ್ತಿಗೆ ಮೊದಲು ಇದು ನನ್ನ ಕೈಸೇರಿತು. ನಿಮ್ಮನ್ನು ಹೊರಗೆ ಕಳುಹಿಸಿ