ಪುಟ:ಕ್ರಾಂತಿ ಕಲ್ಯಾಣ.pdf/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೦೭ ಭಾವಿಸಿ ಪ್ರಕಟವಾಗಿ, “ಶರಣರನ್ನುಳಿಸುವುದು ಸಾಧ್ಯವಾಗಿದ್ದಿದ್ದರೆ ನಾನೂ ನಿನ್ನ ಸಂಗಡ ಬರುತ್ತಿದ್ದೆ, ನೀಲಾ. ಮಾಚಿದೇವರು ಹೇಳಿದ್ದನ್ನು ಕೇಳಲಿಲ್ಲವೆ ? ಮಾಧವ ನಾಯಕನು ಕರ್ಣದೇವನನ್ನು ಸೆರೆಹಿಡಿದಿರುವನಂತೆ. ಈಗಾಗಲೇ ನಗರದಲ್ಲಿ ಎರಡು ಕಡೆಯ ಸೈನ್ಯಗಳಿಗೆ ಹೋರಾಟ ಪ್ರಾರಂಭವಾಗಿದೆ. ನಗರ ದ್ವಾರಗಳು ಬಂಧಿಸಲ್ಪಟ್ಟಿವೆ. ಈ ಪರಿಸ್ಥಿತಿಯಲ್ಲಿ ನಾವು ನಗರಕ್ಕೆ ಹೋಗುವುದೇ ಕಷ್ಟವಾಗಬಹುದು. ಹೋಗುವಷ್ಟರಲ್ಲಿ ಅಣ್ಣನವರ ಅಂತ್ಯಸಂಸ್ಕಾರ ಮುಗಿದಿರಬಹುದು. ಹೆಣ್ಣು ದುಡುಕಿ ಯಾವ ಕಾರ್ಯವನ್ನೂ ಮಾಡಬಾರದು,” ಎಂದಳು. ಅಷ್ಟರಲ್ಲಿ ನಾಗಲಾಂಬೆ ಅಲ್ಲಿಗೆ ಬಂದು, “ಪಡಿಹಾರಿ ಅಪ್ಪಣ್ಣ ಕೂಡಲಸಂಗಮಕ್ಕೆ ಹೊರಟಿದ್ದಾನೆ, ನೀಲಾ. ನೀನು ಸಂಗಡ ಹೋಗುವುದಾದರೆ ಗುರುಕುಲದ ಮೇನೆಯಿದೆ, ರಕ್ಷಕ ಭಟರಿದ್ದಾರೆ.” ಎಂದಳು. ನೀಲಲೋಚನೆ ಅಪ್ರತಿಭೆಯಾದಳು. ಸಂಗಮಕ್ಕೆ ಪತಿದೇವನ ಬಳಿಗೆ ಹೋಗಲೆಳಸದಿರುವ ತಾನು, ಅಣ್ಣನ ಅಂತ್ಯದರ್ಶನಕ್ಕಾಗಿ ಶರಣರನ್ನು ಉಳಿಸುವ ನೆವದಿಂದ ಕಲ್ಯಾಣಕ್ಕೆ ಹೋಗುವುದು ಉಚಿತವೆನಿಸುವುದೇ ಎಂದು ಯೋಚಿಸಿ ಮೌನವಾಗಿದ್ದಳು. ನಾಗಲಾಂಬೆ ಪುನಃ ಹೇಳಿದಳು : “ಇದು ಚಿಂತಿಸುತ್ತ ಕುಳಿತುಕೊಳ್ಳುವ ಸಮಯವಲ್ಲ, ನೀಲಾ. ಸತೀಧರ್ಮ ನಿನ್ನನ್ನು ಸಂಗಮಕ್ಕೆ ಕರೆಯುತ್ತಿದೆ. ಅದನ್ನು ನಿರಾಕರಿಸುವೆಯಾ ನೀನು?” ನೀಲಲೋಚನೆ ಅಪ್ರತಿಭೆಯಾದಳು. ಸತೀಧರ್ಮ ! ಎಷ್ಟೆಲ್ಲ ತ್ಯಾಗ ಬಲಿದಾನ ಗಳಿಗೆ ಸಿದ್ಧಳಾಗುತ್ತಾಳೆ ಹಣ್ಣು ಈ ಧಾರ್ಮಿಕ ಆವೇಶದಲ್ಲಿ ! ಪುರುಷರ ಸ್ವಾರ್ಥ, ಹೆಣ್ಣಿನ ದೌರ್ಬಲ್ಯ ಇವು ಸಹಾಯಕವಾಗಿ ನಿಲ್ಲುತ್ತವೆ ಈ ನಾರೀಮೇಧಕ್ಕೆ. ಇದರಿಂದ ಉದ್ಧಾರವಾಗುವ ಉಪಾಯವೇ ಇಲ್ಲವೇ ಹೆಣ್ಣಿಗೆ? ಸ್ತ್ರೀಯರಿಗೆ ಪುರುಷರೊಡನೆ ಸಮಾನಾಧಿಕಾರವನ್ನು ಬೋಧಿಸುವ ಶರಣಧರ್ಮ ಇದಕ್ಕೊಪ್ಪುವುದೇ? ದೃಢ ನಿರ್ಧಾರದ ಸ್ಥಿರ ಕಂಠದಿಂದ ನೀಲಲೋಚನೆ ಹೇಳಿದಳು : “ಸತೀ ಧರ್ಮ ನನ್ನನ್ನು ಸಂಗಮಕ್ಕೆ ಕರೆಯುತ್ತಿದೆ, ಪತಿಸೇವೆಗಾಗಿ. ಬಂಧುಧರ್ಮ ನನ್ನನ್ನು ಕಲ್ಯಾಣಕ್ಕೆ ಕರೆಯುತ್ತಿದೆ, ಅಣ್ಣನ ಅಂತ್ಯ ದರ್ಶನಕ್ಕಾಗಿ ಎಲ್ಲ ವಾಸನೆಗಳನ್ನು ಮನಸ್ಸಿನಿಂದ ದೂರ ಮಾಡಿದ ನನಗೆ ಮತ್ತೆ ಈ ಬಂಧನಗಳೇಕೆ ? ನಾನು ನಿಮ್ಮ ಸಂಗಡ ಉಳಿವೆಗೆ ಬರುತ್ತೇನೆ. ನಿಜಶರಣೆಗೆ ಅದೊಂದೇ ಆತ್ರೋದ್ದಾರದ ಮಾರ್ಗ, ಸಂಗಮದ ಕರೆಗೆ ಇದು ನನ್ನ ಉತ್ತರ.” -ಎಂದು ಹೇಳಿ ನೀಲಲೋಚನೆ ಮೊದಲೆ ಸಿದ್ಧಪಡಿಸಿ ಇಟ್ಟುಕೊಂಡಿದ್ದ