ಪುಟ:ಕ್ರಾಂತಿ ಕಲ್ಯಾಣ.pdf/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೯ “ಸೊನ್ನಲಾಪುರದಲ್ಲಿ ನಮ್ಮ ಮಣಿಹವಿನ್ನೂ ಮುಗಿದಿಲ್ಲ ಚೆನ್ನಬಸವಣ್ಣನವರೆ. ಅದು ಮುಗಿದು ಕಪಿಲ ಸಿದ್ದಮಲ್ಲಿಕಾರ್ಜುನನ ಅನುಮತಿ ದೊರಕಿದಾಗ ನಾವು ನಿಮ್ಮನ್ನು ಉಳಿವೆಯಲ್ಲಿ ಕಾಣುವವು.” -ಕ್ಷಮಾಯಾಚನೆಯ ನಮ್ರಕಂಠದಿಂದ ಶಿವಯೋಗಿ ಸಿದ್ದರಾಮೇಶ್ವರರು ದೃಢವಾಗಿ ಹೇಳಿದರು. “ನೀವೇನು ಮಾಡುವಿರಿ, ಮಾರಯ್ಯನವರೆ ? ನಮ್ಮ ಆಹ್ವಾನ ನಿಮಗೆ ಸಕಾಲದಲ್ಲಿ ಮುಟ್ಟಿತಲ್ಲವೆ?” –ಮಾಚಿದೇವರೆಂದರು. ಮೋಳಿಗೆಯ ಮಾರಯ್ಯನವರ ಮುಖದಲ್ಲಿ ವ್ಯಂಗ್ಯ ಅಭಿಮಾನಗಳ ಮಿದುನಗೆ ಮೂಡಿತು. ಅವರು ಹೇಳಿದರು : “ನಾನೂ ನಿಮ್ಮಂತೆ ಕ್ಷತ್ರಿಯನು, ಮಾಚಿದೇವ, ಶರಣಧರ್ಮದ ಪ್ರಭಾವದಿಂದ ಜಾತಿ ಸೂತಕಗಳು ಅಳಿದರೂ ವರ್ಣಾಶ್ರಮಗಳ ಸೊಗಡು ಇನ್ನೂ ಉಳಿದಿದೆ. ಶರಣರ ರಕ್ಷಣೆಗಾಗಿ ನೀವು ಉಳಿವೆಗೆ ಹೋಗುತ್ತಿರುವಿರಿ. ವಲಸೆ ಹೊರಡಲು ನಿರಾಕರಿಸಿದ ಶರಣರ ಸಹಾಯಕ್ಕಾಗಿ ಇನ್ನು ಕೆಲವು ದಿವಸಗಳು ನಾನು ಕಲ್ಯಾಣದಲ್ಲಿರಲು ನಿರ್ಧರಿಸಿದ್ದೇನೆ.” * ಮಾಚಿದೇವರು ಮೌನ, ನನ್ನನ್ನು ಅಪಹಾಸ್ಯ ಮಾಡುವುದು ಮಾರಯ್ಯನ ಉದ್ದೇಶವೇ? ಅನುಭವಮಂಟಪಕ್ಕೆ ಒಂದು ಸಾರಿ ಕೂಡ ಬಾರದಿದ್ದರೂ ಜೀವನದ ಉನ್ನತಾದರ್ಶ ವಿಚಾರ ಸ್ವಾತಂತ್ರ್ಯಗಳಿಂದ ಶರಣರಲ್ಲಿ ಸಿದ್ದರಾಮೇಶ್ವರ ಶಿವಯೋಗಿಗಳಷ್ಟೇ ಪ್ರಭಾವ ಗೌರವಗಳನ್ನು ಪಡೆದಿದ್ದ ಈ ವಯೋವೃದ್ದ ಜಂಗಮನ ವಿಚಾರದಲ್ಲಿ ಕ್ಷಣಕಾಲ ತನ್ನಲ್ಲಿ ಸಂದೇಹ ಸುಳಿದುದಕ್ಕಾಗಿ ಮಾಚಿದೇವರು ಲಜ್ಜಿತರಾದರು. ಕೈಯೆತ್ತಿ ನಮಸ್ಕಾರ ಮಾಡಿ ಅವರು, “ಶರಣರ ಬಗೆಗೆ ನಿಮ್ಮ ಭರವಸೆಗಾಗಿ ನಾನು ಕೃತಜ್ಞನು, ಮಾರಯ್ಯನವರೆ. ಈಗ ನನಗೆ ನೆಮ್ಮದಿಯಾಯಿತು. ಮಾಧವ ನಾಯಕನ ಸೈನಿಕರ ದುರಾಕ್ರಮಣದಿಂದ ಶರಣರನ್ನು ರಕ್ಷಿಸುವ ಶಕ್ತಿ ಸಾಮರ್ಥ್ಯಗಳನ್ನು ನಿಮಗೆ ಕರುಣಿಸಲಿ ಕಲಿದೇವರ ದೇವನು,” ಎಂದರು. ಈ ಮಾತುಗಳು ನಡೆಯುತ್ತಿದ್ದಂತೆ ನಾಗಲಾಂಬೆ ಅಲ್ಲಿಗೆ ಬಂದು ಅಭ್ಯಾಗತರ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿದಳು. “ಶರಣಧರ್ಮಕ್ಕೆ ಎರಡು ಧೃವತಾರೆಗಳನ್ನು ಕೊಟ್ಟ ಆದರ್ಶ ಜನನಿ ನೀನು, ನಾಗಕ್ಕೆ ನಿಮ್ಮ ಪ್ರವಾಸ ಶುಭಪ್ರದವಾಗಲಿ,” ಎಂದು ಶಿವಯೋಗಿ ಸಿದ್ದರಾಮೇಶ್ವರರು ನುಡಿದರು. “ಹೊಗಳಿ ಹೊಗಳಿ ನನ್ನನ್ನು ಹೊನ್ನ ಶೂಲಕ್ಕಿಡಬೇಡಿ, ಅಣ್ಣ, ಶರಣರೆಲ್ಲರ - ಸೇವಿಕೆ ನಾನು,” ಎಂದು ಹೇಳಿ ನಾಗಲಾಂಬೆ ಮೋಳಿಗೆ ಮಾರಯ್ಯನವರ ಕಡೆ