ಪುಟ:ಕ್ರಾಂತಿ ಕಲ್ಯಾಣ.pdf/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ಈ ಅಪರಿಚಿತ ಯತಿ ನಿಜವಾಗಿ ಬ್ರಹೇಂದ್ರ ಶಿವಯೋಗಿಯ ಸಹೋದರನೆ? ಅವನ ಪ್ರಶ್ನೆಗೆ ಉತ್ತರ ಕೊಡುವುದು ಉಚಿತವೆ? ಎಂದು ಯೋಚಿಸಿ ಕೊನೆಗೆ ಮಾಚಿದೇವರು ಹೇಳಿದರು : "ಮೂರು ತಿಂಗಳ ಹಿಂದೆ ಅವರೊಂದು ದಿನ ಮಹಮನೆಗೆ ಬಂದರು. ಅನುಭವಮಂಟಪದ ಪ್ರಚಾರ ಸಭೆಗಳಲ್ಲಿ ಶೈವಧರ್ಮವನ್ನು ಕುರಿತು ಕೆಲವು ವಾರಗಳು ಭಾಷಣ ಮಾಡಿದರು. ಅಷ್ಟರಲ್ಲಿ ಚಾಲುಕ್ಯ ಅಧಿಪತಿ ಜಗದೇಕ ಮಲ್ಲರಸರಿಗೆ ಧರ್ಮೋಪದೇಶಕರ ಅವಶ್ಯಕತೆ ಇದೆಯೆಂದು ಕೇಳಿ ನಾವು ಅವರನ್ನು ರಾಜಗೃಹಕ್ಕೆ ಕಳುಹಿಸಿದೆವು. ಆಮೇಲೆ ಅವರ ವಿಚಾರ ತಿಳಿಯದು.” 'ನಿಮ್ಮ ಸಂಗಡ ಅವರು ವಲಸೆ ಬರಲಿಲ್ಲವೆ?” -ಅಪರಿಚಿತ ಯತಿ ಪುನಃ ಕೇಳಿದನು. “ಬರುವುದಾಗಿ ಹೇಳಿ ಕಳುಹಿಸಿದ್ದರು. ಆದರೆ ಬರಲಿಲ್ಲ. ನೀವವರನ್ನು ಕಲ್ಯಾಣದ ರಾಜಗೃಹದಲ್ಲಿ ಹುಡುಕಿರಿ, ಅಣ್ಣ. ಅವರು ಅಲ್ಲಿಯೇ ಇರಬೇಕು,” -ಎಂದು ಮಾಚಿದೇವರು ಮುಕ್ತಾಯದ ದನಿಯಿಂದ ಹೇಳಿದರು. ಈ ಸೂಚನೆ ತಿಳಿದು ಕುಹಕದ ನಗೆ ಬೀರಿ ಅಪರಿಚಿತನು, “ನನ್ನ ಮೇಲೆ ಸಿಟ್ಟಾಗಬೇಡಿರಿ, ಅಣ್ಣ. ಬಂದ ಕೆಲಸ ಮುಗಿಸದೆ ಹೊರಡುವ ಅಭ್ಯಾಸವಿಲ್ಲ ನನಗೆ. ಈಗ ನನ್ನ ಸಹೋದರ ರಾಜಗೃಹದಲ್ಲಿಲ್ಲವೆಂದು ತಿಳಿದಿದೆ. ಯಾರ ಧರ್ಮೋಪದೇಶಕನಾಗಿ ಅವನು ಅಲ್ಲಿಗೆ ಹೋದನೋ ಆ ಚಾಲುಕ್ಯ ಚಕ್ರೇಶ್ವರರು ಇಂದು ಮುಂಜಾವಿನಲ್ಲಿ ಸ್ವರ್ಗವಾಸಿಗಳಾದರು. ಆಗಲೇ ಅವರ ಅಂತ್ಯಕರ್ಮಗಳೂ ಮುಗಿದವು” ಎಂದನು. - ನೆನ್ನಿನ ರಾತ್ರಿ ಚಾಲುಕ್ಯ ಸರ್ವಾಧಿಕಾರಿ ಬಿಜ್ಜಳನ ಕೊಲೆ! ಇಂದು ಮುಂಜಾವಿನಲ್ಲಿ ಚಾಲುಕ್ಯ ಅರಸು ಜಗದೇಕಮಲ್ಲನ ಅಂತ್ಯ ಈ ಎರಡು ವಿಪತ್ತುಗಳೂ ಏಕಕಾಲದಲ್ಲಿ ಕಲ್ಯಾಣಕ್ಕೆ ಒದಗಿದ್ದು ಹೇಗೆ? ಎರಡು ಘಟನೆಗಳಿಗೆ ಪರಸ್ಪರ ಸಂಬಂಧವಿದೆಯೆ? ಮಾಚಿದೇವರು ಸ್ತಂಭಿತರಾದರು. ಕ್ರಾಂತಿಕಾರಕ ಅಜ್ಞಾತ ಪ್ರಕರಣವೊಂದು ರೂಪುತಳೆದು ಎದುರಿಗೆ ನಿಂತಂತೆ ಚೆನ್ನಬಸವಣ್ಣನವರು ಬೆಬ್ಬೆರಗಾಗಿ ಅಪರಿಚಿತ ಯತಿಯ ಮುಖ ನೋಡುತ್ತಿದ್ದರು. ಅದುವರೆಗೆ ಮೌನವಾಗಿದ್ದ ಸಿದ್ದರಾಮೇಶ್ವರರು ಅಪರಿಚಿತನ ಕಡೆ ತಿರುಗಿ ತುಸು ಗಡುಸಾದ ದನಿಯಿಂದ, "ಈ ದುರ್ವಾರ್ತೆ ತಂದ ನೀನು ಯಾರು ಕಪಟ ಜಂಗಮ? ನಿನ್ನ ಈ ವೇಷ ನಮ್ಮನ್ನು ವಂಚಿಸಲಾರದು,” ಎಂದರು. “ಈಗ ಅಣ್ಣನವರ ಮಹಿಮೆ ಅಭಿವ್ಯಕ್ತವಾಯಿತು,” ಎಂದು ಹೇಳಿ ಅಪರಿಚಿತನು