ಪುಟ:ಕ್ರಾಂತಿ ಕಲ್ಯಾಣ.pdf/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨೦

ಕ್ರಾಂತಿ ಕಲ್ಯಾಣ

ಪ್ರಭುದೇವರು ಇನ್ನೊಂದು ವಚನದಲ್ಲಿ ಹೀಗೆ ವಿವರಿಸಿದ್ದಾರೆ:

"ಆಧಾರದಲ್ಲಿ ಬ್ರಹ್ಮ ಸ್ವಾಯತವಾದ;
ಸ್ವಾಧಿಷ್ಠಾನದಲ್ಲಿ ವಿಷ್ಣು ಸ್ವಾಯತವಾದ;
ಮಣಿಪೂರಕದಲ್ಲಿ ರುದ್ರ ಸ್ವಾಯತವಾದ;
ಅನಾಹತದಲ್ಲಿ ಈಶ್ವರ ಸ್ವಾಯತವಾದ;
ವಿಶುದ್ಧಿಯಲಿ ಸದಾಶಿವನು ಸ್ವಾಯತವಾದ;
ಆಜ್ಜೆಯಲ್ಲಿ ಉಪಮಾತೀತ ಸ್ವಾಯತವಾದ;
ಇವರೆಲ್ಲರು ಬಯಲಲಿ ಹುಟ್ಟಿ, ಬಯಲಲ್ಲಿ ಬೆಳೆದು,
ಬಯಲ ಲಿಂಗವನೆ ಧರಿಸಿಕೊಂಡು, ಬಯಲನೆ ಆರಾಧಿಸಿ,
ಬಯಲಾಗಿ ಹೋದುದ ಕಂಡೆ ಗುಹೇಶ್ವರಾ! *

"ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಉಪಮಾತೀತರೆಂಬ ಸಾದಾಖ್ಯ ನಾಯಕರು ಅನುಕ್ರಮವಾಗಿ ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ ಎಂಬ ಆರು ಚಕ್ರಗಳಲಿ ಅವತರಿಸಿ ಸಾಧಕನಿಗೆ ಕಾಣಿಸಿಕೊಳ್ಳುವರೆಂಬುದು ಸ್ವಾಯತ ಶಬ್ದಕ್ಕರ್ಥ. ಇವರೆಲ್ಲರೂ ಚಿದಾಕಾಶದ ಬಯಲಲ್ಲಿ ಹುಟ್ಟಿ, ಬಯಲಲ್ಲಿ ಬೆಳೆದು, ಬಯಲ ಲಿಂಗವನೆ ಧರಿಸಿ, ಬಯಲನ್ನೆ ಆರಾಧಿಸಿ, ಬಯಲಾಗಿ ಹೋದುದನ್ನು ಕಂಡೆ ಎಂಬ ತಮ್ಮ ಅನುಭಾವವನ್ನು ಪ್ರಭುದೇವರು ಈ ವಚನದಲ್ಲಿ ನಿರೂಪಿಸಿದ್ದಾರೆ. ಈ ಸರ್ವವ್ಯಾಪಿ, ಸರ್ವಾಲಯ, ಸರ್ವಾತೀತ ಬಯಲು ಯಾವುದು? ಶುದ್ಧ, ಶಾಂತ, ನಿಶ್ಯಂಕ, ನಿರ್ಭಯ, ಪರಬ್ರಹ್ಮವೇ ಆ ಬಯಲು ಎಂದು ಎಲ್ಲ ಶಾಸ್ತ್ರಗಳು ಘೋಷಿಸುತ್ತವೆ. ಅನುಭಾವಿಗಳು ಇದನ್ನು ನಿರಾಳವೆಂದೂ ಶೂನ್ಯವೆಂದೂ ಕರೆದಿದ್ದಾರೆ. ಸಾಧಕನು ಭಕ್ತ ಮಾಹೇಶ್ವರ ಪ್ರಸಾದಿ ಸ್ಥಳಗಳನ್ನು ದಾಟಿ ಪ್ರಾಣಲಿಂಗಿ ಸ್ಥಳವನ್ನು ಸೇರಿದಾಗ ಅವನಿಗೆ ಮೊದಲ ಸಾರಿ ಪರಬ್ರಹ್ಮದ ಅಸ್ಪಷ್ಟ ಅರಿವು ಮೂಡುತ್ತದೆ.

"ಇಂತಪ್ಪ ಪ್ರಾಣಲಿಂಗಿಯ ನಿಲವನ್ನು ಪ್ರಭುದೇವರು ಇನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾರೆ:"ಕಾಲೇ ಕಂಬಗಳಾದವೆನ್ನ ದೇಹವೇ ದೇಗುಲವಾಯಿತ್ತಯ್ಯ,

ಎನ್ನ ನಾಲಗೆಯೇ ಘಂಟೆ, ಶಿರ ಸುವರ್ಣಕಲಶ, ಇದೇನಯ್ಯಾ!
ಸ್ವರವೇ ಲಿಂಗಕ್ಕೆ ಸಿಂಹಾಸನವಾಗಿರ್ದಿತ್ತಯ್ಯ! ಗುಹೇಶ್ವರಾ,
ನಿಮ್ಮ ಪ್ರಾಣಲಿಂಗ ಪ್ರತಿಷ್ಠೆ ಪಲ್ಲಟವಾಗದಂತಿಪ್ಪೆನಯ್ಯ! ____________
  • ಲಿಂಗಲೀಲಾ ವಿಲಾಸ ಚಾರಿತ್ರ, ಪುಟ ೩೧೫.