ಪುಟ:ಕ್ರಾಂತಿ ಕಲ್ಯಾಣ.pdf/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ខ្ញុំ ។a, ಸ್ಥಳಗಳನ್ನು ಮುಟ್ಟಲು ಶಕ್ತನಾಗಲೆಂಬುದೇ ಅವರ ಕರುಣೆಯ ಉದ್ದೇಶ.” ಈ ರೀತಿ ಪ್ರವಚನ ಸುಮಾರು ಅರ್ಧಪ್ರಹರ ಕಾಲ ನಡೆದ ಮೇಲೆ ಸಭೆಯ ಅಂಚಿನಲ್ಲಿ ಅಪ್ಪಣ್ಣ ನಿಂತಿರುವುದನ್ನು ಬಸವಣ್ಣನವರು ಗಮನಿಸಿ ಸನ್ನೆ ಮಾಡಿ ಹತ್ತಿರ ಕರೆದು, “ಯಾವಾಗ ಬಂದೆ, ಅಪ್ಪಣ್ಣ ? ಕಲ್ಯಾಣದ ಸುದ್ದಿಯೇನು?” ಎಂದು ಕೇಳಿದರು. ಅಪಣ್ಣ ನಿರುತ್ತರನಾಗಿ ಕಣ್ಣೀರು ಸುರಿಸುತ್ತ ಮೌನವಾಗಿ ನಿಂತನು. ಏನೋ ಅನರ್ಥ ನಡೆದಿದೆಯೆಂದು ತಿಳಿದು ಬಸವಣ್ಣನವರು ತುಸು ಗಂಭೀರವಾಗಿ, “ಏನಾಗಿದೆ ಹೇಳು, ಅಪ್ಪಣ್ಣ? ಆದುದನ್ನು ತಪ್ಪಿಸಲು, ಆಗಬೇಕಾದ್ದನ್ನು ತಡೆಯಲು ಕೂಡಲ ಸಂಗಮದೇವನೊಬ್ಬನಿಗಲ್ಲದೆ ಮತ್ತಾರಿಗೂ ಅಳವಲ್ಲ,” ಎಂದರು. ಬಸವಣ್ಣನವರ ಮೃದು ಕಂಠ, ಅವರ ಮಾತುಗಳಲ್ಲಿ ಅಭಿವ್ಯಕ್ತವಾಗಿದ್ದ ಅನುಕಂಪದ ಹೊಲಬು, ಅಪ್ಪಣ್ಣನಿಗೆ ಚೈತನ್ಯವನ್ನು ಕೊಟ್ಟವು. ಉಕ್ಕಿ ಬರುತ್ತಿದ್ದ ಅಳುವನ್ನು ತಡೆದು ಅವನು ಗದ್ಗದ ಕಂಠದಿಂದ, “ಶರಣರು ಮಹಮನೆಯನ್ನು ಬಿಟ್ಟರು, ಅಣ್ಣನವರೆ. ಕಲ್ಯಾಣವನ್ನು ಶರಣರು ತ್ಯಜಿಸಿದರು. ಅವರು ಆಂಜನೆಯ ಹೊಳೆ ದಾಟಿ, ಗಣಾಚಾರಿ ಯೋಧರ ಶಿಬಿರ ಸೇರಿದ ಮೇಲೆ ನಾನು, ಚೆನ್ನಬಸವಣ್ಣನವರ ಅನುಮತಿ ಪಡೆದು ಇಲ್ಲಿಗೆ ಬಂದೆ. ಶರಣರು ಕಲ್ಯಾಣವನ್ನು ಬಿಟ್ಟ ರಾತ್ರಿ ಕಲಚೂರ್ಯ ಅರಮನೆಯಲ್ಲಿ...” ಅಪ್ಪಣ್ಣ ಪುನಃ ತಡವರಿಸಿದನು. ಬಸವಣ್ಣನವರು ತಲೆಯೆತ್ತಿ, “ಕಲಚೂರ್ಯ ಅರಮನೆಯಲ್ಲಿ ಏನಾಯಿತು, ಅಪ್ಪಣ್ಣ?” ಎಂದು ಪುನಃ ಕೇಳಿದರು. “ಬಿಜ್ಜಳರಾಯರು ಕೊಲೆ ಮಾಡಲ್ಪಟ್ಟರು, ಅಣ್ಣನವರೆ?” ನುಡಿಯುತ್ತಿದ್ದಂತೆ ಅಪ್ಪಣ್ಣನ ಗಂಟಲು ಕಟ್ಟಿತು, ದೇಹ ಕಂಪಿಸಿತು. ಈ ಮಾತುಗಳು, ಬಸವಣ್ಣನವರು ಕುಳಿತಿದ್ದ ವೇದಿಕೆಯ ಹತ್ತಿರ ಸಣ್ಣ ದನಿಯಲ್ಲಿ ನಡೆಯಿತಾದರೂ ಒಬ್ಬರಿಂದೊಬ್ಬರಿಗೆ ಹರಡಿ ಕೆಲವೇ ಕ್ಷಣಗಳಲ್ಲಿ ಸಭೆಯಲ್ಲಿ ಎಲ್ಲ ಕಡೆ ಪ್ರಚಾರವಾಯಿತು. ಸ್ತಂಭಿತರಂತೆ ಸಭೆಯಲ್ಲಿದ್ದವರೆಲ್ಲ ಮೌನವಾಗಿ ಕುಳಿತರು. - ಬಸವಣ್ಣನವರು ಕೊಂಚ ಹೊತ್ತು ಯೋಚಿಸುತ್ತಿದ್ದು ಬಳಿಕ, “ನೀನು ಇಲ್ಲಿಯೇ ಕುಳಿತಿರು, ಅಪ್ಪಣ್ಣ, ಪ್ರವಚನ ಮುಗಿದ ಮೇಲೆ ಉಳಿದ ವಿಚಾರ, ಎಂದು ಹೇಳಿ ಅರ್ಧಕ್ಕೆ ನಿಂತಿದ್ದ ಪ್ರವಚನವನ್ನು ಮುಂದುವರಿಸಲು ಸಿದ್ಧರಾದರು. - ಆದರೆ ಶೃತಿ ತಪ್ಪಿದ ವಾಗ್ಗೇಯಕಾರನಂತೆ ಬಸವಣ್ಣನವರು ಹೆಜ್ಜೆ ಹೆಜ್ಜೆಗೆ ತಡವರಿಸಿದರು. ಸರಿಯಾದ ಶಬ್ದಗಳನ್ನು ಹುಡುಕುವುದರಲ್ಲಿ, ಅಗತ್ಯದ