ಪುಟ:ಕ್ರಾಂತಿ ಕಲ್ಯಾಣ.pdf/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ ನಾನು ನಿಮ್ಮ ತೊತ್ತಿನ ಪಡುಗವ ತೆಗೆವ ಪಡಿಗತೊತ್ತಯ್ಯ. ಕೂಡಲ ಸಂಗನ ಶರಣರಿಗೆಲ್ಲ ಸಂಗನ ಬಸವನ ಬಿನ್ನಪ : ಕವಳಿಗೆ ಸಂದುದು. ನಿಮ್ಮ ಜನಪದದಲ್ಲಿ ಬೆರೆಸೆಂದು ಕೃಪೆ ಮಾಡಿರಯ್ಯ. ಆನು ಮಾಡಿದ ತಪ್ಪನೆಣೆಸಿಹೆನೆಂದಡೆ ಗಣನೆಯಿಲ್ಲ. ನಡೆದು ತಪ್ಪುವೆನು, ನುಡಿದು ತಪ್ಪುವೆನು, ಮಾಡಿ ತಪ್ಪುವೆ, ನೀಡಿ ತಪುವೆ, ಕೂಡಿ ತಪ್ಪುವೆ, ಅರಿದು ತಷ್ಟುವೆ, ಮರೆದು ತಪ್ಪುವೆ. ಎನ್ನ ತಪ್ಪನೊಪ್ಪಮಾಡಿಕೊಂಬುದಲ್ಲದೆ ಚಿತ್ರಕ್ಕೆ ತರಲಾಗದು. ಕೂಡಲ ಸಂಗಮದೇವಯ್ಯನೆಂಬ ಗಂಡನನ್ನ ಬೆರೆಯಬೇಕೆಂದು ಕರೆಯಲಟ್ಟಿದನು. ಶಿವಶರಣರೆಲ್ಲರಿಗೆ ಶರಣೆಂದು ಬೀಳ್ಕೊಂಬ ತವಕದಲ್ಲಿದ್ದೆ.” * -ಎಂದು ಬಸವಣ್ಣನವರು ಮುಗಿಸಿದಾಗ ಸಭ್ಯರೆಲ್ಲ ಭಾವಪರವಶರಾಗಿ ಚಲಿಸದೆ ಕುಳಿತಿದ್ದರು. ಪ್ರಾಧ್ಯಾಪಕನು ವಂದನಾರ್ಪಣೆಗಾಗಿ ಎದ್ದು ನಿಂತಾಗ ಅವರಿಗೆ ತಾವೆಲ್ಲಿರುವೆವೆಂಬ ಅರಿವಾಯಿತು. ಉತ್ತರಾಪಥದ ಪ್ರವಾಸಿ ಜಂಗಮರೊಡನೆ ಅಂದು ಅಪರಾಹ್ನ ಸಂಗಮಕ್ಕೆ ಬಂದಿದ್ದ ಅಗ್ಗಳನು, ಸಭೆ ಚದುರಿ, ವೇದಿಕೆ ನೆರವಾಗುತ್ತಲೆ ಬಸವಣ್ಣನವರ ಬಳಿಗೆ ಬಂದು ನಮಸ್ಕಾರ ಮಾಡಿ, “ಅಣ್ಣನವರಿಗೆ ನನ್ನ ಪರಿಚಯವಿರಬೇಕು. ನೀವು ಕಲ್ಯಾಣವನ್ನು ಬಿಟ್ಟು ಬಂದ ಆ ದುರ್ದಿನ ನಾನು ಮೋಳಿಗೆಯ ಮಾರಯ್ಯನವರ ಆಶ್ರಮದಲ್ಲಿ ನಿಮ್ಮನ್ನು ನೋಡಿದ್ದೆ,” ಎಂದು ಬಿನ್ನವಿಸಿಕೊಂಡನು. ಸುಮಾರು ಮೂರೂವರೆ ತಿಂಗಳ ಹಿಂದೆ ನಡೆದ ಆ ಘಟನೆಗಳನ್ನು ಬಸವಣ್ಣನವರು ನೆನಪಿಗೆ ತಂದುಕೊಂಡು, “ಮೋಳಿಗೆಯ ಮಾರಯ್ಯನವರ ನೇತೃತ್ವದಲ್ಲಿ ರಕ್ಷಕ ಪಡೆಯನ್ನು ಅಡ್ಡಗಟ್ಟಿದವರಲ್ಲಿ ನೀವೂ ಒಬ್ಬರಲ್ಲವೆ? ಆಗ ನಿಮ್ಮ ಸಂಗಡ ಇದ್ದ ಇಬ್ಬರು ಗೆಳೆಯರು ಕ್ಷೇಮವೆ ?” ಎಂದು ಪ್ರಶ್ನಿಸಿದರು. ಚತುರನಾದ ಅಗ್ಗಳನು ಕೆಲವು ಕ್ಷಣಗಳು ಅಪ್ರತಿಭನಾದನು. ಆ ದಿನ ನಾಗರಿಕರಿಂದ ಬೀಳ್ಕೊಂಡ ಮೇಲೆ ಮೋಳಿಗೆಯ ಮಾರಯ್ಯನವರು ಅಗ್ಗಳನನ್ನೂ

  • ಶೂನ್ಯ ಸಂಪಾದನೆ, ಪು. ೪೫೬. ಲೆಂಕ=ಸೇವಕ, ಪಡುಗ=ಉಗುಳುವ ಪಾತ್ರೆ ಕವಳಿಗೆ=(ಕಪಾಲಿಕಾ) ಭಿಕ್ಷಾಪಾತ್ರೆ