ಪುಟ:ಕ್ರಾಂತಿ ಕಲ್ಯಾಣ.pdf/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೩೨ ಕ್ರಾಂತಿ ಕಲ್ಯಾಣ ಅಗ್ಗಳನ್ನು ನಿರ್ಧರಿಸಿಕೊಂಡನು. - “ದೀಕ್ಷೆಯಾದರೂ ನಾನು ಶರಣನಾಗಲಿಲ್ಲ. ನಿನಗೆ ದೀಕ್ಷೆ ಇಲ್ಲದಿದ್ದರೂ ನಿಜವಾಗಿ ಶರಣನೇ ಆಗಿರುವೆ,” ಎಂದು ಬ್ರಹ್ಮಶಿವ ತನ್ನನ್ನು ಹಾಸ್ಯಮಾಡಿ ಹೇಳುತ್ತಿದ್ದದ್ದು ಅಸತ್ಯವಲ್ಲವೆಂದು ಅಗ್ಗಳನು ತಿಳಿದನು. ಬಿಜ್ಜಳನ ಬಗೆಗೆ ಪರೋಕ್ಷ ವಿನಯವನ್ನು ಮುಗಿಸುತ್ತ ಬಸವಣ್ಣನವರು ಹೇಳಿದ ಎರಡು ಆಶುವಚನಗಳ ಮುಕ್ತಾಯದ ನುಡಿಗಳು ಅಗ್ಗಳನನ್ನು ಅಚ್ಚರಿಗೊಳಿಸಿದ್ದವು. “ಕವಳಿಗೆ ಸಂದುದು ನಿಮ್ಮ ನಿಜಪದದಲ್ಲಿ ಬೆರೆಸೆಂದು ಕೃಪೆ ಮಾಡಿರಯ್ಯ” “ಶರಣರೆಲ್ಲರಿಗೆ ಶರಣೆಂದು ಬೀಳ್ಕೊಂಬ ತವಕದಲ್ಲಿದ್ದೆ.” -ಎಂದು ಬಸವಣ್ಣನವರು ಹೇಳಿದ್ದರು. “ಕವಳಿಗೆ ಸಂದುದು, ನನ್ನ ಭಿಕ್ಷಾ ಪಾತ್ರೆ ತುಂಬಿತು. ಶರಣರೆಲ್ಲರಿಂದ ಬೀಳ್ಕೊಳ್ಳುವ ಅವಸರದಲ್ಲಿದ್ದೇನೆ ನಾನು,” ಎಂಬುದರ ಅರ್ಥವೇನು? ಸಂಗಮವನ್ನು ಬಿಟ್ಟು ಯಾವುದಾದರೊಂದು ಅಜ್ಞಾತ ಅನಿರ್ದಿಷ್ಟ ಸ್ಥಾನಕ್ಕೆ ಹೋಗುವುದು ಬಸವಣ್ಣನವರ ಉದ್ದೇಶವೆ? ವಚನಗಳ ಈ ನಿಗೂಢಾರ್ಥವನ್ನು ತಿಳಿಯಲು ಶರಣರು ಅಸಮರ್ಥರಾದರೆ? ಕಲ್ಯಾಣದಿಂದ ಶರಣರ ವಲಸೆ, ಕೂಡಲ ಸಂಗಮದಿಂದ ಬಸವಣ್ಣನವರ ನಿಷ್ಕಮಣ, -ಈ ಘಟನೆಗಳು ಚಾಲುಕ್ಯ ರಾಜ್ಯಕ್ಕೆ ಶುಭಸೂಚಕವಲ್ಲ, ಎಂದು ಭಾವಿಸಿ ಅಗ್ಗಳನು ಅಳುಕಿದನು. ಅವನಿದ್ದ ಸ್ಥಳದಿಂದ ಬಸವಣ್ಣನವರು ಪೂಜೆಗೆ ಕುಳಿತಿದ್ದ ಶಿಲಾಮಂಟಪ ಕಾಣಿಸುತ್ತಿತ್ತು. ತದೇಕ ದೃಷ್ಟಿಯಿಂದ ಅವನು ಆ ಕಡೆ ನೋಡುತ್ತಿದ್ದಂತೆ ಸೂರ್ಯನು ಅಸ್ತನಾಗಿ ಸುತ್ತ ಕತ್ತಲೆ ಹರಡಿತು. ಮಂಟಪದ ಆಕೃತಿ ಕ್ರಮ ಕ್ರಮವಾಗಿ ಮಂಜು ಮುಸುಕಿದಂತೆ ಅಸ್ಪಷ್ಟವಾಗುತ್ತ ಕೊನೆಗೆ ಹರಡಿದ ಕತ್ತಲೆಯಲ್ಲಿ ಬೆರೆಯಿತು. ಅಗ್ಗಳನು ನಿಡುಸುಯ್ದನು.

  • ಆಗಬಹಶಿವ ಅಲ್ಲಿಗೆ ಬಂದು, “ಅಣ್ಣನವರಂತೆ ನೀನೂ ಧ್ಯಾನಮಗ್ನನಾದೆಯ, ಅಗ್ಗಳ?” ಎಂದನು.

“ಅಂತಹ ಪುಣ್ಯ ನನಗೆಲ್ಲಿಯದು, ಬ್ರಹ್ಮಶಿವ, ಬಿಜ್ಜಳನ ಬಗೆಗೆ ಬಸವಣ್ಣನವರು ಹೇಳಿದುದನ್ನು ಕುರಿತು ಯೋಚಿಸುತ್ತಿದ್ದೆ,” ಎಂದು ಅಗ್ಗಳನು ಉತ್ತರ ಕೊಟ್ಟನು. “ನನ್ನ ಚಿಂತೆ ಬೊಮ್ಮರಸರ ವಿಚಾರದಲ್ಲಿ. ಅವರೇನಾದರು, ಎಲ್ಲಿಗೆ