ಪುಟ:ಕ್ರಾಂತಿ ಕಲ್ಯಾಣ.pdf/೪೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓರೆ ಅಕ್ಷರಗಳು________________

೪೩೮ ಕ್ರಾಂತಿ ಕಲ್ಯಾಣ ಜನಸಂದಣಿ, ಈ ಅನುಕ್ರಮದಲ್ಲಿ ಮೆರವಣಿಗೆ ನಡೆಯಿತು. “ಹರ ! ಹರ ! ಮಹಾದೇವ !” “ಬಸವರಾಜದೇವ ಉಘ ಉಘ !” ಎಂಬ ಘೋಷಣೆ ಎಲ್ಲ ಕಡೆ ಕೇಳಿ ಬರುತ್ತಿತ್ತು. ಈ ಮೆರವಣಿಗೆ ನದೀ ತೀರದ ಶಿಲಾಮಂಟಪಕ್ಕೆ ಹಿಂದಿರುಗಿದಾಗ ಕಲ್ಯಾಣ ಶಕ್ತಿ ದೇವರ ಮೇಲ್ವಿಚಾರಣೆಯಲ್ಲಿ ಬಸವಣ್ಣನವರ ಸಮಾಧಿ ಅಲ್ಲಿ ರಚಿತವಾಗಿತ್ತು. ಮುಕುಟಾಗಮದಲ್ಲಿ ಹೇಳಿರುವ ಸಮಾಧಿ ರಚನಾವಿಧಾನದಂತೆ ಕಲ್ಯಾಣ ಶಕ್ತಿ ಪಂಡಿತರು ಸಮಾಧಿಯನ್ನು ಕಟ್ಟಿಸಿದರು. ಅದಕ್ಕಾಗಿ ಅವರು ಬಸವಣ್ಣನವರ ಅಂಗಾಲ ಮಡಿಕೆಯಿಂದ ಉಂಗುಷ್ಟದ ತುದಿಯವರೆಗಿನ ಅಳತೆ ತೆಗೆದುಕೊಂಡು, ಅದರಂತೆ ಐದು ಅಡಿ ಚೌಕವೂ ಒಂಭತ್ತು ಅಡಿ ಆಳವೂ ಇರುವ ಹಳ್ಳ ತೋಡಿಸಿದರು. ಅದರ ದಕ್ಷಿಣ ಕಡೆಯ ಮೂರಡಿಯನ್ನು ಮೂರು ತತ್ವಗಳ ಸಂಕೇತವಾದ ತ್ರಿಕೋನಾಕೃತಿಯನ್ನು ಅಗೆದು, ಅದಕ್ಕೆ ಎದುರಾಗಿ ಉತ್ತರದ ಕಡೆ ಮೂರಡಿ ಅಗಲವೂ ಅನುಕ್ರಮವಾಗಿ ಮೇಲಿಂದ ಕೆಳಗೆ ಒಂದು ಎರಡು ಮೂರು ಅಡಿ ಎತ್ತರವೂ ಇರುವ ಮೂರು ಪಾವಟಿಗೆಗಳನ್ನು ಮಾಡಿಸಿದರು. ತ್ರಿಕೋನದೆದುರಿಗೆ ವೇದಿಕೆಯನ್ನು ಕಟ್ಟಿದರು. ಬಳಿಕ ಅದನ್ನು ಸ್ವಚ್ಛಗೊಳಿಸಿ ಸಾರಿಸಿ, ಐದು ಬಣ್ಣಗಳ ಹಿಟ್ಟಿನಿಂದ ನೆಲದ ಮೇಲೆ ಪಂಚಮುದ್ರೆಗಳನ್ನು ಬರೆದು ಕೋನಗಳಲ್ಲಿ ಪಂಚಾಕ್ಷರಿಯನ್ನೂ, ನಡುವೆ ಪ್ರಣವವನ್ನೂ ಅಂಕಿಸಿ, ಎಡ ಬಲಗಳಲ್ಲಿ ಪಂಚಬ್ರಹ್ಮ ಮಂತ್ರಗಳನ್ನು ಬರೆದರು. ಆಮೇಲೆ ತಗಡಿನಲ್ಲಿ ಮಾಡಿದ ಲಿಂಗಮುದ್ರೆಗಳನ್ನು ನಾಲ್ಕು ಮೂಲೆಗಳಿಗೆ ಜೋಡಿಸಿ ಚಾವಣಿ ಹಾಕಿ, ಮೇಲ್ಕಟ್ಟುಗಳನ್ನು ಕಟ್ಟಿದರು. ಹೊಂಬಾಳೆ, ಮಡಿವಾಳ, ಕಾಯಿ ಹಣ್ಣು, ಹವಳ ಮುತ್ತುಗಳ ಜಾಲರಗಳನ್ನು ಸುತ್ತ ಅಳವಡಿಸಿದರು. ಗೊನೆ ಸಹಿತವಾದ ಬಾಳೆಯ ಕಂಬಗಳನ್ನು ಚಾವಣಿಯ ನಾಲ್ಕು ಮೂಲೆಗಳಿಗೆ ಕಟ್ಟಿದರು. ಕಬ್ಬಿನ ಜಲ್ಲೆ, ಕೆಂದೆಂಗು, ಎಳೆನೀರಗೊನೆಗಳಿಂದ ಚಾವಣಿಯನ್ನು ಅಲಂಕರಿಸಿದರು. ಬಳಿಕ ಅವರು ಬಸವಣ್ಣನವರ ಪಾರ್ಥಿವ ದೇಹವಿದ್ದ ಅಂದಕ್ಕೆ ಬಲವಂದು, ದೇಹವನ್ನು ಅಂದಣದಿಂದ ತಂದು ಪಾವಟಿಗೆಗಳನ್ನು ಇಳಿಸಿ, ವೇದಿಕೆಯ ಮೇಲೆ ಮೂರ್ತಗೊಳಿಸಿದರು. ಚರಲಿಂಗ ಪಾದೋದಕದಿಂದ ಮುಖವನ್ನು ತೊಳೆದರು. ಭಸಿತವಿಟ್ಟು ಹೂಗಳಿಂದ ಅರ್ಚಿಸಿ, ಗಂಧಾಕ್ಷತೆಗಳಿಂದ ಅಲಂಕರಿಸಿ, ಧೂಪವಿಟ್ಟು ಆರತಿ ಬೆಳಗಿದರು. ಆಮೇಲೆ ದೇಹವನ್ನು ತ್ರಿಕೋಣ ಸ್ಥಾನದಲ್ಲಿ ಕುಳ್ಳಿರಿಸಿ, ಭಸಿತದಿಂದ ತುಂಬಿ ಸಮಾಧಿಯನ್ನು ಮುಚ್ಚಿದರು. ಈ ಕ್ರಿಯೆ ನಡೆಯುತ್ತಿದ್ದಂತೆ ಸಮಾಧಿಯ ಸುತ್ತ ನೆರೆದಿದ್ದ ಜಂಗಮ