ಪುಟ:ಕ್ರಾಂತಿ ಕಲ್ಯಾಣ.pdf/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೩೯ ಸನ್ಯಾಸಿಗಳು, ಅಧ್ಯಾಪಕ ವಿದ್ಯಾರ್ಥಿಗಳು, ಅಧಿಕಾರಿ ರಾಜಪ್ರತಿನಿಧಿಗಳು, ನಾಗರಿಕ ಸ್ತ್ರೀ ಪುರುಷರು ಏಕಕಂಠದಿಮದ ನಿರಂತರವಾಗಿ ಪಂಚಾಕ್ಷರಿಯನ್ನು ನುಡಿದರು. ನದೀತೀರದ ಶಿಲಾಖಂಡಗಳಲ್ಲಿ, ತರುಲತೆಗಳಲ್ಲಿ ನಿಂತ ನೆಲದಲ್ಲಿ ಹರಿಯುವ ನೀರಲ್ಲಿ ಬೀಸುವ ಗಾಳಿಯಲ್ಲಿ ಮಂತ್ರಘೋಷ ತುಂಬಿತು. ಭಾವಪರವಶನಾದ ಕವಿಯಂತೆ ಅಗ್ಗಳನು ಹಾಡಿದನು : ಪಾರ್ಥಿವ ಜಗತ್ತಿನೊಡನೆ ನಿನ್ನ ಸಂಬಂಧ ಕಳೆದುದು, ಅಣ್ಣಾ ! ಅಂಧಶ್ರದ್ದೆ ಸಂಪ್ರದಾಯಗಳ ಸಂಕೋಲೆಯಿಂದ ಬಂಧಿಸಲ್ಪಟ್ಟು ಅಂಗಾಂಗಳೆಲ್ಲ ಜಡವಾಗಿದ್ದ ಸಮಾಜ ಪುರುಷನನ್ನು ಎಚ್ಚರಗೊಳಿಸಿದೆ ನೀನು ! ಬಂಧನ ಬಿಡಿಸಿ, ಆತ್ರೋದ್ದಾರದ ಶುಭಪಥದಲ್ಲಿ ನಡೆಸಲು ನಿರಂತರವಾಗಿ ಪರಿಶ್ರಮಿಸಿದೆ, ಅಣ್ಣಾ ! ಜೀವನ್ಮುಕ್ತನು ನೀನು ! ಹೋಗು, ಅಮರ ಪಥದ ಮಹಾನ್ ಪಥಿಕ ನಿನ್ನ ಅಗಲಿಕೆಯ ತೀವ್ರ ವೇದನೆಯನ್ನು ಹೃದಯದಲ್ಲಿ ಇಂಬಿಟ್ಟು ನಿರಂತರ ನಿನ್ನ ನಾಮಸ್ಮರಣೆ ಮಡುತ್ತ ಬದುಕುವೆನು ನಾನು. ಚಾಲುಕ್ಯ ರಾಜ್ಯದ ಧರ್ಮಜ್ಯೋತಿಯಾಗಿ, ಸತ್ಯದ ಸೊಡರಾಗಿ, ನಿತ್ಯದ ನೆಲೆಯಾಗಿ, ನೀನು ರಚಿಸಿದ ಆದರ್ಶ ಜೀವನದ ಅಮರ ಇತಿಹಾಸ ಅನಂತಕಾಲವೂ ನಿನ್ನ ಜ್ವಲಂತ ಸ್ಮಾರಕವಾಗಿ ನಿಲ್ಲುವುದು. ಓಂ ಶಾಂತಿಃ ಶಾಂತಿಃ ಶಾಂತಿಃ ಈಗಲೂ ಕೂಡಲ ಸಂಗಮವು ಶರಣರಿಗೆ ಪವಿತ್ರ ಯಾತ್ರಾಸ್ಥಳ. ಕಾಶಿ ಕೇದಾರಗಳಿಗಿಂತ ಅದು ಹೆಚ್ಚು ಪವಿತ್ರವೆಂದು ಶರಣರು ಭಾವಿಸುತ್ತಾರೆ. ಕಾಲಕ್ರಮದಲ್ಲಿ ನದಿಯ ಪಾತ್ರ ವಿಸ್ತಾರವಾಗಿರುವುದರಿಂದ ಬಸವಣ್ಣನವರ ಗದ್ದಿಗೆ ನದಿಯಲ್ಲಿ ಮುಳುಗಿ ಅದರ ಮೇಲೆ ಮಂಟಪ ಕಟ್ಟಿದೆ.