ಪುಟ:ಕ್ರಾಂತಿ ಕಲ್ಯಾಣ.pdf/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೪೩ ತಿಳಿದಾಗ ಮಾಧವ ನಾಯಕನು ನಗರವನ್ನು ಬಿಟ್ಟು ಹೋಗಲು ಶರಣರಿಗೆ ಅನುಮತಿ ಕೊಟ್ಟನು. ಅದರಂತೆ ಆ ದಿನ ಬಹುಮಂದಿ ಜಂಗಮರು ಮತ್ತು ಭಕ್ತರು ನಗರವನ್ನು ಬಿಟ್ಟರು.” ಶರಣರು ಹರ್ಷಧ್ವನಿ ಮಾಡಿದರು. ಮೋಳಿಗೆಯ ಮಾರಯ್ಯನವರನ್ನು ಪ್ರಶಂಸಿಸುವ ನುಡಿಗಳು ಕೇಳಿಬಂದವು. ಮಾಚಿದೇವರು ಶರಣರಿಗೆ ಸುಮನಿರುವಂತೆ ಸನ್ನೆಮಾಡಿ, "ಈಗ ಕಲ್ಯಾಣದಲ್ಲಿ ಶರಣರು ಯಾರೂ ಇಲ್ಲವೆ?” ಎಂದು ಬಾಚರಸನನ್ನು ಕೇಳಿದರು. ಬಾಚರಸ ಹೇಳಿದನು : “ಇನ್ನೊಂದು ದಿನ ಅವಕಾಶವಿದ್ದಿದ್ದರೆ ಶರಣರೆಲ್ಲ ನಗರವನ್ನು ಬಿಡುವುದು ಸಾಧ್ಯವಾಗುತ್ತಿತ್ತು. ಆದರೆ ಮರುದಿನವೇ ಕರ್ಣದೇವನ ಸೈನಿಕರಿಗೂ ಮಾಧವ ನಾಯಕನ ಸೈನಿಕರಿಗೂ ಹೋರಾಟ ಪ್ರಾರಂಭವಾಯಿತು. ನಗರವನ್ನು ಬಿಡಲು ಶರಣರಿಗೆ ಕೊಟ್ಟಿದ್ದ ಅನುಮತಿಯನ್ನು ಮಾಧವ ನಾಯಕನು ಹಿಂದಕ್ಕೆ ತೆಗೆದುಕೊಂಡನು. “ಹೋರಾಟದ ಕಾರಣ?” -ಚೆನ್ನಬಸವಣ್ಣನವರು ಪ್ರಶ್ನಿಸಿದರು. “ಚಾಲುಕ್ಯ ಸರ್ವಾಧಿಕಾರಿ ಪದವಿ. ಕರ್ಣದೇವ ಸರ್ವಾಧಿಕಾರಿಯಾಗುವುದು ಮಾಧವ ನಾಯಕನಿಗೆ ಇಷ್ಟವಿರಲಿಲ್ಲ. ವಿರಸ ಬೆಳೆದು ಹೋರಾಟಕ್ಕೆ ಮೊದಲಾಯಿತು. ಎರಡು ದಿನ ಘೋರ ಯುದ್ದ ನಡೆದು ಕರ್ಣದೇವ ಹತನಾದನು.” “ಯುದ್ಧ ನಡೆದ ದಿನವೂ ನೀವು ನಗರದಲ್ಲಿಯೇ ಇದ್ದಿರಾ?” “ಹೋರಾಟ ಮೊದಲಾದ ದಿನ ನಗರದ ದ್ವಾರಗಳು ಬಂಧಿಸಲ್ಪಟ್ಟವು. ಮರುದಿನ ಸಂಜೆ ನಾವು, ಕೆಲವು ಮಂದಿ ಶರಣರೊಡನೆ ಕರ್ಣದೇವನ ಸೈನಿಕರ ಸಹಾಯದಿಂದ ಹೊರಗೆ ಬಂದೆವು. ಕರ್ಣದೇವ ಹತನಾದ ವಿಚಾರ ಆಮೇಲೆ ನಮಗೆ ತಿಳಿದದ್ದು, ಆ ದಿನವೇ ನಾನು ಮಾರಯ್ಯನವರ ಅನುಮತಿ ಪಡೆದು ಅಲ್ಲಿಂದ ಹೊರಟೆ.” ಶರಣರು ಮೌನ, ಹೋರಾಟ ನಡೆದಾಗ ನಗರದಲ್ಲಿದ್ದ ಶರಣರಿಗೆ ಆಗಿರಬಹುದಾದ ಕಷ್ಟನಷ್ಟಗಳನ್ನು ಚಿಂತಿಸಿ ಅವರು ತಲ್ಲಣಗೊಂಡಿದ್ದರು. “ಕರ್ಣದೇವ ಹತನಾದ ಮೇಲೆ ಹೋರಾಟ ನಿಂತಿತೆ ? ಈಗ ನಗರ ಶಾಂತವಾಗಿದೆಯೆ?” ಬದಲಿಸಿದ ದನಿಯಿಂದ ಮಾಚಿದೇವರು ಬಾಚರಸನನ್ನು ಕೇಳಿದರು. “ಅದು ನನಗೆ ತಿಳಿಯದು, ಅಣ್ಣನವರೆ. ನಾವು ನಗರವನ್ನು ಬಿಟ್ಟಾಗ ಅಲ್ಲಲ್ಲಿ