ಪುಟ:ಕ್ರಾಂತಿ ಕಲ್ಯಾಣ.pdf/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಾಂತಿ ಕಲ್ಯಾಣ ಸಣ್ಣ ಪುಟ್ಟ ಹೋರಾಟಗಳು ನಡೆಯುತ್ತಲೆ ಇದ್ದವು.” ಬಾಚರಸನ ಉತ್ತರ ಶರಣರ ತಲ್ಲಣವನ್ನು ಹೆಚ್ಚಿಸಿತು. “ಕರ್ಣದೇವ ಹತನಾಗಿ ನಗರ ಸಂಪೂರ್ಣವಾಗಿ ತನ್ನ ವಶವಾದ ಬಳಿಕ ಮಾಧವ ನಾಯಕನ ದೃಷ್ಟಿ ಶರಣರ ಕಡೆಗೆ ತಿರುಗುವುದು. ಶರಣಧರ್ಮದ ಉಗ್ರ ವಿರೋಧಿಯಾದ ಅವನಿಂದ ಶರಣರು ಹಿಂಸೆಗೆ ಗುರಿಯಾಗುವುದು ಅಸಂಭವವಲ್ಲ.” ಎಂದು ಭಾವಿಸಿ ಚೆನ್ನಬಸವಣ್ಣನವರು ತಳಮಳಗೊಂಡರು. “ಬೀಳ್ಕೊಡುವಾಗ ಮಾರಯ್ಯನವರು ಏನಾದರೂ ಹೇಳಿದರೆ ?” ತುಸು ಹೊತ್ತಿನ ಮೇಲೆ ಮಾಚಿದೇವರು ಕೇಳಿದರು. “ಏನೂ ಹೇಳಲಿಲ್ಲ. ನಾವು ಮಹಾದ್ವಾರದಿಂದ ಹೊರಗೆ ಬರುತ್ತಿದ್ದಾಗ ಕಾವಲು ಪಡೆಯ ನಾಯಕ ನಾಗರಾಜಯ್ಯ...” ಎಂದು ಬಾಚರಸ ಅರ್ಧದಲ್ಲಿ ನಿಲ್ಲಿಸಿದನು. “ಏನು ಹೇಳಿದ ನಾಗರಾಜ?” “ಮಾಧವ ನಾಯಕನು ಶರಣರ ಮೇಲೆ ಒಂದು ಅಪವಾದದ ಸುದ್ದಿ ಹರಡುತ್ತಿದ್ದಾನೆ. ಆ ವಿಚಾರದಲ್ಲಿ ಎಚ್ಚರವಾಗಿರುವಂತೆ ಮಾಚಿದೇವರಿಗೆ ತಿಳಿಸು ಎಂದು.” “ಅಪವಾದದ ಸುದ್ದಿಯೇನು?” “ಬಿಜ್ಜಳನನ್ನು ಕೊಲೆಮಾಡಿದ ಹಂತಕರು, 'ಹರಳಯ್ಯ ಮಧುವಯ್ಯಗಳನ್ನು ನೋಯಿಸಿದ ಪರವಾದಿ ಬಿಜ್ಜಳನನ್ನು ಕೊಂದ ನಾವು ವೀರಕುಮಾರರು, ಜಂಗಮದ ನೃತ್ಯರು, ಜಗದೇಕಮಲ್ಲ ಬೊಮ್ಮರಸರು,' ಎಂದು ಬೊಬ್ಬಿಡುತ್ತ ಹೊರಗೆ ಬಂದರಂತೆ. ಬಿಜ್ಜಳರಾಯರ ಕೊಲೆಗೆ ಶರಣರು ಕಾರಣರು ಎಂದು ಮಾಧವ ನಾಯಕನ ಕಡೆಯವರು ಪ್ರಚಾರ ಮಾಡುತ್ತಿರುವುದಾಗಿ ನಾಗರಾಜ ಹೇಳಿದನು.” “ಹಂತಕರನ್ನು ಹಿಡಿದರೆ? ಅವರ ವಿಚಾರ ಏನಾದರೂ ತಿಳಿದಿದೆಯೆ? -ತುಸು ಹೊತ್ತಿನ ಮೇಲೆ ಮಾಚಿದೇವರು ಪುನಃ ಬಾಚರಸನನ್ನು ಪ್ರಶ್ನಿಸಿದರು. “ಹಂತಕರಲ್ಲೊಬ್ಬನು ಹತನಾದನೆಂದೂ, ಇನ್ನೊಬ್ಬನು ತಪ್ಪಿಸಿಕೊಂಡನೆಂದೂ ಜನ ಹೇಳುತ್ತಾರೆ.” “ಅವರು ಯಾರೆಂದು ತಿಳಿದಿದೆಯೆ ” “ತಿಳಿಯದು.* ಶರಣರ ಕಡೆ ತಿರುಗಿ ಮಾಚಿದೇವರು ಹೇಳಿದರು : “ಈ ಎಲ್ಲ ಘಟನೆಗಳು ನಮ್ಮನ್ನು ಹೆಚ್ಚು ತೊಂದರೆಗೆ ಸಿಕ್ಕಿಸುತ್ತವೆ. ಕೊಲೆಯ ಹೊಣೆಯನ್ನು ಶರಣರ