ಪುಟ:ಕ್ರಾಂತಿ ಕಲ್ಯಾಣ.pdf/೪೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೪೭ “ನನ್ನ ಬೆಂಬತ್ತಿ ಬರುತ್ತಿದೆ ಆ ಕಂಠ !” ಎಂದು ನೀಲಲೋಚನೆ ತಿರುಗಿ ನೋಡಿದಳು. ಹಸಿರು ಹುಲ್ಲು ಕಾಡುಹೂಗಳಿಂದ ಚಲುವಾದ ಕೃಷ್ಣಾ ತೀರದ ಆ ನೆಲದ ಮೇಲೆ ಆ ಸುಂದರ ಶ್ರೀಚರಣಗಳು | ಸಂಗಮಕ್ಕೆ ಹೊರಟು ನಿಂತಾಗ ತಾನು ಅಡಿಗೆರಗಿ ಗೋರೋಚನದಿಂದ ತಿದ್ದಿ ಬರೆದ ಸ್ವಾಸ್ತಿಕ ಚಿಹ್ನೆ ಇನ್ನೂ ಅಳಿಸಿಲ್ಲ? ನೀಲಲೋಚನೆ ತಲೆಯೆತ್ತಿ ನೋಡಿದಳು. ಎದುರಿಗೆ ಬಸವಣ್ಣನವರ ದಿವ್ಯ ಮಂಗಳ ವಿಗ್ರಹ. ಸಂಗಮಕ್ಕೆ ಹೊರಡುವಾಗ ಧರಿಸಿದ್ದ ಆ ವಲ್ಕಲದಂತಹ ಒರಟು ಧೋತ್ರ ನಿಲುವಂಗಿ, ಉತ್ತರೀಯಗಳು, ಕೊರಳಲ್ಲಿ ಚಂದನದ ಕರಡಿಗೆ, ಹಣೆಯಲ್ಲಿ ವಿಭೂತಿ, ಉಷ್ಟ್ರೀಷ ಶಿರಸ್ತಾಣಗಳಿಲ್ಲದ ಬರಿದಲೆ. ಗಾಳಿಯಲ್ಲಿ ಸುಳಿಗಾಳಿ ಬರೆದಂತೆ, ಗಗನದ ತಟಿಲ್ಲತೆ ಕ್ಷಣಾರ್ಧ ಗಗನವನ್ನು ಬೆಳಗಿ ಪುನಃ ಗಗನದಲ್ಲಿ ಅಡಗಿದಂತೆ, ಉದಕದಿಂದಾದ ವಾಂಶಿಲೆ ಮತ್ತೆ ಉದಕವನ್ನು ಸೇರಿದಂತೆ. ಚಂದ್ರನ ಕಳೆ ಉದಯಿಸಿ ಮರಳಿ ಚಂದ್ರನಲ್ಲಿ ಲೀನವಾದಂತೆ, ಬೆಳಕಿನಲ್ಲಿ ಬೆಳಕಾಗಿ ಅದೃಶ್ಯವಾಯಿತು ಆ ದಿವ್ಯಾಕೃತಿ ! ನೀಲಲೋಚನೆ ಚಿಟ್ಟನೆ ಚೀರಿ ನೆಲಕ್ಕುರುಳಿದಳು. ನಾಗಲಾಂಬೆ ಗಂಗಾಂಬಿಕೆಯರು ಅವಳನ್ನು ಗೂಡಾರಕ್ಕೆ ಕರೆದುಕೊಂಡು ಹೋಗಿ ಶುಕ್ರೂಷೆ ಮಾಡಿದರು. ಎಚ್ಚೆತ್ತು ಅವಳು, “ಶಿಬಿರದಲ್ಲಿ ಅವರನ್ನು ಕಂಡೆ ಅಕ್ಕ!” ಎಂದು ಆವೇಗದಿಂದ ತೊದಲುತ್ತ ಹೇಳಿದಳು. ನಾಗಲಾಂಬೆ ಮೌನ. ಗಂಗಾಂಬಿಕೆ ಕೇಳಿದಳು, “ಯಾರನ್ನು ನೀನು ಕಂಡದ್ದು, ನೀಲಾ ?” “ನನ್ನ ಸ್ವಾಮಿಯನ್ನು. ಈಗ ಅವರು ಸಂಗಮದಲ್ಲಿಲ್ಲ. ಶಿಬಿರಕ್ಕೆ ಬಂದಿದ್ದಾರೆ, ತುಸು ಹೊತ್ತಿನ ಮೊದಲು ನಾನವರನ್ನು ನೋಡಿದೆ.” ನೀಲಲೋಚನೆಯ ನುಡಿಗಳಲ್ಲಿ ಉನ್ಮನೀಭಾವದ ದೃಢತೆ ಆವೇಶಗಳು ಎದ್ದು ಕಾಣುತ್ತಿದ್ದವು.

  • ಬಸವೇಶ್ವರ ವಚನಗಳು, ಪುಟ ೩೧.