ಪುಟ:ಕ್ರಾಂತಿ ಕಲ್ಯಾಣ.pdf/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪೮ ಕ್ರಾಂತಿ ಕಲ್ಯಾಣ ಗಂಗಾಂಬಿಕೆಗೆ ಸುಮ್ಮನಿರುವಂತೆ ಸನ್ನೆ ಮಾಡಿ ನಾಗಲಾಂಬೆ, “ಸ್ನಾನ ಮಾಡಿ ಹಿಂದಿರುಗುತ್ತ ನೀನು ಎಡವಿ ಬಿದ್ದೆ, ನೀಲಾ, ಪೆಟ್ಟಾಗಿರಬೇಕು. ಸ್ವಲ್ಪ ಹೊತ್ತು ವಿಶ್ರಮಿಸಿಕೊ,” ಎಂದು ಹೇಳಿ ನೀಲಲೋಚನೆಯ ಮೈದಡವಿದಳು. “ಇದೇನು ಹೇಳುವೆ, ನಾಗತ್ತೆ ? ಜಳಕ ಮಾಡಿ ಬಂದ ನಾನು ಪೂಜೆ ಮುಗಿಸಬೇಡವೇ? ಬೆಳಕಿನೊಳಗಣ ಮಹಾಘನದಂತೆ ಅವರು ಕ್ಷಣ ಮಾತ್ರ ಕಾಣಿಸಿಕೊಂಡು ಮತ್ತೆ ಅದೃಶ್ಯರಾದರು. ಪೂಜೆಗೆ ಕುಳಿತರೆ ಅವರ ಅನ್ವೇಷಣೆ ಸುಲಭವಾಗುವುದು,” ಎಂದು ನೀಲಲೋಚನೆ ಎದ್ದಳು. ನಾಗಲಾಂಬೆ ಗಂಗಾಂಬಿಕೆಯರು ಅವಳನ್ನು ಪಾರ್ಶ್ವದ ಪೂಜಾ ಗೂಡಾರಕ್ಕೆ ಕರೆದುಕೊಂಡು ಹೋದರು. ಪೂಜೆಗೆ ಬೇಕಾದ ಅಗ್ಗವಣಿ ಪತ್ರ ಪುಷ್ಪಗಳು ಅಲ್ಲಿ ಸಿದ್ಧವಾಗಿದ್ದವು. ದೀಪಗಳು ಉರಿಯುತ್ತಿದ್ದವು. ನೀಲಲೋಚನೆಯನ್ನು ಮಣೆಯ ಮೇಲೆ ಕುಳ್ಳಿರಿಸಿ, ಗಂಗಾಂಬಿಕೆಗೆ ಹತ್ತಿರಿರುವಂತೆ ಹೇಳಿ ನಾಗಲಾಂಬೆ ಹೊರಗೆ ಬಂದಳು. ಈ ಶಿಬಿರದ ನಡುವೆ ಚೆನ್ನಬಸವಣ್ಣನವರ ಗೂಡಾರದ ಎದುರಿಗೆ ಶರಣರ ಸಣ್ಣ ಗುಂಪು ಸೇರಿತ್ತು. ನೋಡುತ್ತಿದ್ದಂತೆ ಮಾಚಿದೇವರು ಚೆನ್ನಬಸವಣ್ಣನವರು ಗೂಡಾರದಿಂದ ಹೊರಗೆ ಬಂದರು. ಸಂಗಡ ಪಡಿಹಾರಿ ಅಪ್ಪಣ್ಣ. “ಅಪ್ಪಣ್ಣ ಯಾವಾಗ ಸಂಗಮದಿಂದ ಹಿಂದಿರುಗಿದ್ದು ? ಅಲ್ಲಿಂದ ಸುದ್ದಿಯೇನು?” ಎಂದು ಚಿಂತಿಸುತ್ತ ನಾಗಲಾಂಬೆ ಹತ್ತಿರ ಹೋದಳು. ಪಡಿಹಾರಿ ಅಪ್ಪಣ್ಣ ತಲೆತಗ್ಗಿಸಿ ಕಣ್ಣೀರು ಸುರಿಸುತ್ತಿದ್ದನು. ಮಾಚಿದೇವರ ಮುಖ ಬಾಡಿತ್ತು. ಚೆನ್ನಬಸವಣ್ಣನವರು ಉದ್ವೇಲಿತ ಮಹಾಸಾಗರದಂತೆ ತಳಮಳಿಸುತ್ತ ಶರಣರ ಕಡೆ ತಿರುಗಿ ಕೈಮುಗಿದು ಕಂಪಿತಕಂಠದಿಂದ ಹೇಳಿದರು : - “ಸಂಗಮದ ದುರ್ವಾರ್ತೆ ಬರಸಿಡಿಲಂತೆ ಹಠಾತ್ತಾಗಿ ಎರಗಿ ಬಂದು ನಮ್ಮನ್ನು ದುಃಖಸಾಗರದಲ್ಲಿ ಮುಳುಗಿಸಿದೆ. ಶರಣರ ಜೀವನಾಡಿಯಂತಿದ್ದ ಬಸವಣ್ಣನವರು ಮೂರು ದಿನಗಳ ಹಿಂದೆ ಸಂಗಮದಲ್ಲಿ ಲಿಂಗೈಕ್ಯರಾದರು. ಕೂಡಲ ಸಂಗಮ ದೇವನು ತನ್ನ ಹೃದಯಮಧ್ಯದಲ್ಲಿ ಅವರನ್ನು ಇಂಬಿಟ್ಟುಕೊಂಡನು.” ನುಡಿಯುತ್ತಿದ್ದಂತೆ ಅವರಿಗೆ ಗಂಟಲು ಹಿಡಿಯಿತು. ಕಣ್ಣೀರು ಉಕ್ಕಿ ಹರಿಯಿತು. ನಾಗಲಾಂಬೆಯು ಹತ್ತಿರ ಹೋಗಿ ಮಗನ ಕೈಹಿಡಿದು, “ಸ್ಥಿರನಾಗು, ಚೆನ್ನ ಬಸವಣ್ಣ. ಬಸವೇಶ ನಿರ್ವಯಲಾದನು. ಈಗ ನೀನು ಶರಣರ ಆಲಂಬನ, ಆದರ್ಶ ! ನೀನು ಹೀಗಾದರೆ ಹೇಗೆ ?” ಎಂದು ಸಂತೈಸಿದಳು. ಶಕ್ತಿದೇವಿಯ ಸ್ಪರ್ಶವಾದಂತೆ ಚೆನ್ನಬಸವಣ್ಣನವರ ದೇಹದಲ್ಲಿ ಶಕ್ತಿ